Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್‌ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನಿಮ್ಮ ಗೆಳತಿಗೆ ನೀಡಲೇಬಾರದ 6 ಕೊಡುಗೆಗಳು!
ನಿಮ್ಮ ಗೆಳತಿಗೆ ಉಡುಗೊರೆಯನ್ನು ನೀವು ನೀಡಬೇಕೆಂದಿದ್ದರೆ, ಅದರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಉಡುಗೊರೆಯ ಬಗೆಗಿನ ಮಹತ್ವವನ್ನು ನೀವು ಅರಿತಿರಬೇಕು. ನೀವೇನನ್ನೋ ನಿವೇದಿಸಲಿರುವಿರಿ ಎಂಬುದು ಈ ಉಡುಗೊರೆಯ ಹಿಂದಿರುವ ಮಹತ್ವವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂಬಂಧದಲ್ಲಿನ ನ್ಯೂನತೆ ಚರ್ಚಿಸುವುದು
ನೀವು ಆಕೆಗೆ ಉಂಗುರವನ್ನು ಉಡುಗೊರೆಯಾಗಿ ನೀಡುತ್ತಿರುವಿರಿ ಎಂದರೆ, ನೀವು ಆಕೆಗೆ ಬದ್ಧರಾಗಿರುವಿರಿ ಎಂಬರ್ಥ. ಆಕೆಗೆ ಗುಲಾಬಿ ಅಥವಾ ಚಾಕಲೇಟ್ ಅನ್ನು ಕೊಡುಗೆಯಾಗಿ ನೀಡುತ್ತೀರೆಂದರೆ, ಆಕೆ ನಿಮಗೆ ವಿಶೇಷವಾಗಿದ್ದಾರೆ ಎಂಬುದು ಇದರ ಸಂದೇಶ. ನೀವು ನಿಮ್ಮ ಗೆಳತಿಗೆ ಏನನ್ನು ಕೊಡುಗೆಯಾಗಿ ನೀಡಬೇಕು ಏನನ್ನು ನೀಡಬಾರದು ಎಂಬುದು ನಿಮಗೆ ಚೆನ್ನಾಗಿ ತಿಳಿದಿರಬೇಕು. ನಿಮ್ಮ ಗೆಳತಿ ನಿಮ್ಮ ಮುಖ್ಯ ಗಮನವಾಗಿರಬೇಕು. ನೀವು ಕೊಡುವ ಉಡುಗೊರೆ ಆಕೆಗೆ ಇಷ್ಟವಾಗುವುದು ಮಾತ್ರವಲ್ಲ ಅದು ನಿಮ್ಮ ಆಕೆಯ ಪ್ರಿತಿಯ ದ್ಯೋತಕವಾಗಿರಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮನದನ್ನೆಯ ಮನವರಿಯಲು ಕೆಲ ಸಲಹೆಗಳು
ನಿಮ್ಮ ಆಪ್ತ ಸ್ನೇಹಿತನಿಗೆ ನೀಡಿದ ಅದೇ ಕೊಡುಗೆಯನ್ನು ನಿಮ್ಮ ಗೆಳತಿಗೆ ನೀಡಿದಿರೆಂದರೆ ನೀವು ಸಮಸ್ಯೆಗೆ ಸಿಲುಕಿದಂತೆ. ಆಕೆಯ ಪ್ರಕಾರ ಆಕೆಯಲ್ಲಿ ಆಕೆ ಬಯಸುವ ವಿಶೇಷತೆ ಇದ್ದು ಆಕೆಗೆ ನೀಡುವ ಉಡುಗೊರೆ ಕೂಡ ಅಷ್ಟೇ ಮಹತ್ವದ್ದಾಗಿರಬೇಕು ಎಂದು ನಿಮ್ಮ ಗೆಳತಿ ಬಯಸುವುದು ಸಹಜವೇ. ಇಂತಹ ಕೊಡುಗೆಗಳು ಕೆಲವೊಮ್ಮೆ ನಿಮಗೆ ಸಮಸ್ಯೆಯನ್ನು ಉಂಟುಮಾಡಬಹುದು. ನಿಮ್ಮ ಗೆಳತಿಗೆ ಕೊಡುಗೆಯನ್ನು ನೀಡದೇ ಇರುವುದು ಇದಕ್ಕೆ ಸೂಕ್ತ ಪರಿಹಾರವಲ್ಲ.
ಅದಕ್ಕಾಗಿ ಬೋಲ್ಡ್ ಸ್ಕೈ ಇಂದು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಿದೆ. ನಿಮ್ಮ ಗೆಳತಿಗೆ ನೀವು ನೀಡಬಾರದ ಕೆಲವೊಂದು ಕೊಡುಗೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇದನ್ನು ಗಮನಿಸಿಕೊಂಡು ನಿಮ್ಮ ಗೆಳತಿಗೆ ನೀವು ನೀಡುವ ಅಮೂಲ್ಯವಾಗಿರಲಿ ಮತ್ತು ಆಕೆಗೆ ಇಷ್ಟವಾಗುವಂತಾಗಲಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪತ್ನಿಗೆ ಪ್ರೀತಿ ತೋರಲು ಬಜೆಟ್ ನೋಡಬೇಡಿ!

ಗಿಫ್ಟ್ ವೊವೈಚರ್:
ಹಮ್! ನಿಮ್ಮ ಗೆಳತಿಗೆ ಗಿಫ್ಟ್ ವೊವೈಚರ್ ಅನ್ನು ನೀಡಬಹುದೆಂಬುದು ನಿಮ್ಮ ಯೋಜನೆಯಾಗಿದ್ದರೆ ಅದನ್ನು ಕೈಬಿಡುವುದು ಒಳಿತು. ನಿಮ್ಮ ಈ ಕೊಡುಗೆಯನ್ನು ನೋಡಿದ ಒಡನೇ ಆಕೆ ಬೇಸರಪಡುವುದು ಖಂಡಿತ. ನೀವು ಆಕೆಗೆ ನೀಡುವ ಕೊಡುಗೆ ವೃಥಾ ಸುಮ್ಮನೆ ಎಂಬುದು ಇದರರ್ಥವಾಗಿದೆ. ಪ್ರೀತಿಯ ದ್ಯೋತಕವಾಗಿ ಈ ಉಡುಗೊರೆ ಆಕೆಯ ಮನಸೆಳೆಯುವುದಿಲ್ಲ.

ಜಿಮ್ ಸದಸ್ಯತ್ವ:
ಜಿಮ್ ಸದಸ್ಯತ್ವನ್ನು ಅಕೆಗೆ ನೀಡಿ ವ್ಯಾಯಾಮ ಪರಿಕರವನ್ನು ಆಕೆಗೆ ಉಡುಗೊರೆಯಾಗಿ ನೀಡುವುದು ನಿಮ್ಮ ಯೋಜನೆಯಾಗಿದ್ದರೆ ವೃಥಾ ಆ ಬಗ್ಗೆ ಆಲೋಚಿಸದಿರಿ. ಯಾವ ಹುಡುಗಿಗೂ ಈ ಕೊಡುಗೆ ಇಷ್ಟವಾಗಲಿಕ್ಕಿಲ್ಲ. ದಪ್ಪಗಿದ್ದಿ ಎಂಬ ಮಾತನ್ನು ನಿಮ್ಮ ಗೆಳತಿಗೆ ನೀವು ಹೇಳಿದಂತೆ.

ನಿಮ್ಮ ಫೋಟೊ:
ನಿಮ್ಮ ಮತ್ತು ಆಕೆಯ ಸುಂದರ ಫ್ರೇಮ್ ಉಳ್ಳ ಫೋಟೊ ನಿಜವಾಗಿ ಸುಂದರ ಉಡುಗೊರೆಯಾಗುತ್ತದೆ ಆದರೆ ಕೇವಲ ನಿಮ್ಮ ಫೋಟೊವನ್ನು ಮಾತ್ರ ಫ್ರೇಮ್ ಹಾಕಿ ನೀಡುವುದು ಒಳ್ಳೆಯ ಉಡುಗೊರೆಯಾಗಿರುವುದಿಲ್ಲ. ನೀವು ಆಕೆಗೆ ಒಬ್ಬ ನಂಜಿನ ವ್ಯಕ್ತಿಯಾಗಿ ಕಾಣಬಹುದು. ಇಂತಹ ಉಡುಗೊರೆಯನ್ನು ಎಂದಿಗೂ ನಿಮ್ಮ ಗೆಳತಿಗೆ ನೀವು ನೀಡಬೇಡಿ.

ಏನನ್ನೂ ನೀಡದಿರುವುದು:
ಆಕೆಯನ್ನು ಶಾಪಿಂಗ್‌ಗೆ ಕರೆದೊಯ್ದು ಆಕೆಗೆ ಬೇಕಾದ್ದು ಕೊಡಿಸುವುದು ನಿಜವಾಗಿ ಅದ್ಭುತ ಉಪಾಯ. ಆದರೂ ಆಕೆಗೆ ಉಡುಗೊರೆಯನ್ನು ನೀಡುವುದನ್ನು ನಿಲ್ಲಿಸದಿರಿ. ನಿಮ್ಮ ಉಡುಗೊರೆ ವಿಶೇಷವಾಗಿದ್ದು ಪ್ರೀತಿಯ ದ್ಯೋತಕವಾಗಿದ್ದರೆ ಅದರ ಹಿಂದಿನ ಪ್ರಯತ್ನಕ್ಕೆ ಫಲ ಇರುತ್ತದೆ. ಆದರೆ ಏನನ್ನೂ ನೀಡದೇ ಕೇವಲ ಆಕೆಯ ಪ್ರೀತಿಯನ್ನು ಬಯಸುವವರು ನೀವಾಗಿದ್ದರೆ ಅದು ನಿರರ್ಥಕವಾಗುತ್ತದೆ.

ಬೊಂಬೆ ಆಟಿಕೆಗಳು:
ಹೌದು ಸುಂದರ ಟೆಡ್ಡಿ ಬೇರ್‌ಗಳನ್ನು ಆಕೆ ನಿಜಕ್ಕೂ ಇಷ್ಟಪಡುತ್ತಾಳೆ ಆದರೆ ಪ್ರತಿಯೊಬ್ಬರೂ ಈ ಮನೋಭಾವವನ್ನು ಹೊಂದಿರುವುದಿಲ್ಲ ಅವರ ಆಸಕ್ತಿ ಭಿನ್ನವಾಗಿರುತ್ತದೆ. ಆಕೆ ಇನ್ನೂ ಮಗುವಲ್ಲ ಎಂಬುದನ್ನು ನಿಮಗೆ ಎಂದೂ ಹೇಳಲಾರಳು. ಅದನ್ನು ಅರಿತುಕೊಂಡು ನೀವು ಈ ಆಟಿಕೆಗಳನ್ನು ಖರೀದಿಸುವುದು ಒಳಿತು. ಅಂತೂ ನಿಮ್ಮ ಉಡುಗೊರೆ ಆಕೆಯ ಮನಸೆಳೆಯಲಿ, ಮನನೋಯಿಸದಿರಲಿ.

ಸುಂದರವಲ್ಲದ ಆಭರಣಗಳು:
ನಿಮ್ಮ ಮನದನ್ನೆಗೆ ಆಭರಣವನ್ನು ಕೊಡುಗೆಯಾಗಿ ನೀಡುವ ಯೋಜನೆ ನಿಮ್ಮದಾಗಿದ್ದರೆ ಅದು ಟ್ರೆಂಡಿಯಾಗಿದೆ ಮತ್ತು ನಿಮ್ಮಾಕೆಗೆ ಚೆನ್ನಾಗಿ ಒಪ್ಪುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕಡಿಮೆ ಬೆಲೆಯ ಉತ್ತಮ ಗುಣಮಟ್ಟದಲ್ಲದ ಆಭರಣಗಳು ಆಕೆಯನ್ನು ಖಂಡಿತ ಇಂಪ್ರೆಸ್ ಮಾಡಲಾರವು.



Click it and Unblock the Notifications
