Latest Updates
-
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ!
ಆನ್‌ಲೈನ್ ಡೇಟಿಂಗ್ ಮಾಡುತ್ತಿರುವ ಹುಡುಗಿಯರೇ ಸ್ವಲ್ಪ ಹುಷಾರ್!
ಆನ್‌ಲೈನ್ ಡೇಟಿಂಗ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಿಷಯವಾಗಿ ಬಿಟ್ಟಿದೆ. ಕೆಲವರು ಈ ವಿಧಾನವನ್ನು ಸಮಯ ಕಳೆಯಲು ಬಳಸಿದರೆ ಮತ್ತೆ ಕೆಲವರು ತಮ್ಮ ಜೀವನ ಸಂಗಾತಿಯ ನಿಜವಾದ ಆಯ್ಕೆ ಎಂದೇ ಪರಿಗಣಿಸುತ್ತಾರೆ.
ನಿಮ್ಮ ಸಂಗಾತಿಯನ್ನು ಆನ್‌ಲೈನ್‌ನಲ್ಲಿಯೇ ಹುಡುಕಿ!
ಆದರೆ ಆನ್‌ಲೈನ್ ಡೇಟಿಂಗ್ ಮಾಡುತ್ತಿರುವ ಹುಡುಗಿಯರೇ ಸ್ವಲ್ಪ ಹುಷಾರ್! ಬೆಳ್ಳಗಿರುವುದೆಲ್ಲಾ ಹಾಲೆಲ್ಲಾ ಎಂಬಂತೆ ನಿಮ್ಮೊಂದಿಗೆ ಡೇಟಿಂಗ್ ಮಾಡುವವರು ನಿಮ್ಮನ್ನು ಮೋಸದ ಜಾಲದಲ್ಲಿ ಬೀಳಿಸಲು ಉಪಾಯ ನಡೆಸುತ್ತಿರಬಹುದು. ಇದನ್ನೆಲ್ಲಾ ನಿಮಗೆ ಕಂಡುಕೊಳ್ಳಲು ಆನ್‌ಲೈನ್ ಚಾಟ್ ಮಾಡುತ್ತಿರುವವರ ಪೂರ್ಣ ಮಾಹಿತಿ ನಿಮಗೆ ದೊರಕಬೇಕು. ಆದರೆ ಅಷ್ಟೊತ್ತಿಗಾಗಲೇ ಸಮಯ ಮೀರಿದ್ದರೆ ಏನೂ ಪ್ರಯೋಜನವವಿರದು.
ಆದ್ದರಿಂದಲೇ ಈ ಲೇಖನ ಇಂದು ಒಂದು ಅಸಾಮಾನ್ಯ ವಿಷಯವಾದ ಆನ್‌ಲೈನ್ ಡೇಟಿಂಗ್‌ನ ಸುರಕ್ಷತೆ ಅಸುರಕ್ಷತೆಯ ಬಗ್ಗೆ ಒಂದು ಇಣುಕು ನೋಟವನ್ನು ಚೆಲ್ಲಿದೆ. ನಿಮ್ಮ ಆನ್‌ಲೈನ್ ಸಂಗಾತಿ ನಿಮ್ಮ ನಂಬಿಕೆಗೆ ಅರ್ಹನೇ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ ನಿಮ್ಮ ಆನ್‌ಲೈನ್ ಡೇಟಿಂಗ್ ಎಷ್ಟು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಿ.
ಫೇಸ್‌ಬುಕ್‍ಗೆ ಮರುಳಾಗಿ ಮೋಸ ಹೋಗಬೇಡಿ!

ಕನಿಷ್ಟ ಫೋಟೊಗಳು:
ನಿಮ್ಮೊಡನೆ ಡೇಟಿಂಗ್‌ನಲ್ಲಿರುವ ವ್ಯಕ್ತಿ ಕನಿಷ್ಟ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾನೆ ಎಂದರೆ ಕೂಡಲೇ ನೀವು ಜಾಗ್ರತರಾಗಬೇಕು.

ವಯಸ್ಸು:
ವಯಸ್ಸಿನ ಬಗ್ಗೆ ಅತಿ ದೊಡ್ಡ ಸುಳ್ಳುಗಳನ್ನು ಪುರುಷರು ಮತ್ತು ಮಹಿಳೆಯರು ಆನ್‌ಲೈನ್ ಡೇಟಿಂಗ್ ಸಮಯದಲ್ಲಿ ಹಂಚಿಕೊಳ್ಳುತ್ತಾರೆ. ನಿಮ್ಮ ಫೋಟೊದ ಮೂಲಕ ವಯಸ್ಸನ್ನು ಗುರುತಿಸಬಹುದು.

ಕುಟುಂಬದ ಬಗ್ಗೆ ಸುಳ್ಳು:
ಪುರುಷರು ಕುಟುಂಬದ ಬಗೆಗಿನ ಇಮೋಶನ್‌ಗಳನ್ನು ಬಳಸಿ ಮಹಿಳೆಯರ ಮನಗೆಲ್ಲಲು ಪ್ರಯತ್ನಿಸುತ್ತಾರೆ. ಮದುವೆಯಾಗಲು ಹಾತೊರೆಯುವ ಪ್ರತಿಯೊಬ್ಬ ವಿಚ್ಛೇದಿತ ವ್ಯಕ್ತಿ ಈ ಕೆಲಸವನ್ನು ಮಾಡುತ್ತಾನೆ.

ಆಸಕ್ತಿಗಳ ಸುಳ್ಳು ಪಟ್ಟಿ:
ತಮಗಿರುವ ಆಸಕ್ತಿಗಳ ಬಗ್ಗೆ ಹುಡುಗಿಯಲ್ಲಿ ಹೇಳುವುದು ಮತ್ತು ಹುಡುಗಿಯನ್ನು ಇಂಪ್ರೆಸ್ ಮಾಡುವುದು ಆನ್‌ಲೈನ್ ಡೇಟಿಂಗ್‌ನಲ್ಲಿ ಪುರುಷರು ಅನುಸರಿಸುವ ಸಾಮಾನ್ಯ ಕ್ರಮವಾಗಿದೆ.

ನಾನು ಹ್ಯಾಂಡ್‌ಸಮ್ ಆಗಿರುವೆ:
ತನ್ನನ್ನೇ ತಾನೇ ಸುಂದರ ಎಂದು ಬಣ್ಣಿಸಿಕೊಳ್ಳುವ ಪುರುಷ ಎಂದಿಗೂ ನಿಜವನ್ನು ಹೇಳುತ್ತಿಲ್ಲ ಎಂಬುದನ್ನು ಮನಗಾಣಿ.

ಅವರ ವೃತ್ತಿ:
ಡೇಟಿಂಗ್‌ನಲ್ಲಿ ತಮ್ಮ ವೃತ್ತಿಯ ಬಗ್ಗೆ ಪುರುಷರು ಬಹಳಷ್ಟು ಜಾಗರೂಕರಾಗಿರುತ್ತಾರೆ. ಮಹಿಳೆ ಇಷ್ಟಪಡುವ ವೃತ್ತಿಯನ್ನೇ ಅವರು ಹೇಳುತ್ತಾರೆ.

ಆಕಾರ:
ತಮ್ಮ ಆಕಾರ ಮತ್ತು ವಿನ್ಯಾಸದ ಬಗ್ಗೆ ಕೇವಲ ಮಹಿಳೆ ಮಾತ್ರವಲ್ಲ ಪುರುಷರೂ ಕೂಡ ಸುಳ್ಳು ಹೇಳುತ್ತಾರೆ.

ನಾನು ಆಕರ್ಷಕನಾಗಿರುವೆ:
ಹೀಗೆ ಹೇಳಿ ನಿಮ್ಮನು ಬೆಸ್ತು ಬೀಳಿಸುವ ಪುರುಷರೂ ಆನ್‌ಲೈನ್ ಡೇಟಿಂಗ್‌ನಲ್ಲಿ ಸಾಮಾನ್ಯ. ಆದ್ದರಿಂದ ತನ್ನನ್ನು ತಾನೇ ಬಣ್ಣಿಸಿಕೊಳ್ಳುವ ಪುರುಷರ ಬಗ್ಗೆ ಸ್ವಲ್ಪ ಹೆಚ್ಚು ಗಮನಹರಿಸಿ.

ನಾನು ಯಾರನ್ನೂ ನೋಡುತ್ತಿಲ್ಲ:
ಹೀಗೆಂದು ನಿಮ್ಮ ಡೇಟಿಂಗ್ ಸಂಗಾತಿ ನಿಮ್ಮೊಂದಿಗೆ ಹೇಳಿದರೆ ಅದು ನೂರಕ್ಕೆ ನೂರಕ್ಕೆ ಸುಳ್ಳು ಎಂಬುದನ್ನು ಮನಗಾಣಿ. ನಿಮ್ಮೊಂದಿಗೆ ಆತ ಸಮಯ ಕಳೆಯಲು ಡೇಟಿಂಗ್ ಮಾಡುತ್ತಿದ್ದಾನೆ ಎಂಬುದನ್ನು ಮನಗಾಣಿ.

ಬಣ್ಣದ ಮಾತುಗಳು:
ಅವರ ಬಣ್ಣದ ಮಾತುಗಳಿಗೆ ನೀವು ಸುಲಭವಾಗಿ ಬಲಿಯಾಗುತ್ತೀರಿ ಎಂಬುದನ್ನು ಅವರು ಮನಗಾಣುತ್ತಾರೆ. ಆದ್ದರಿಂದ ಮಹಿಳೆಯರು ಈ ದಿಸೆಯಲ್ಲಿ ಸ್ವಲ್ಪ ಹೆಚ್ಚು ಗಂಭೀರರಾಗಿರಬೇಕು



Click it and Unblock the Notifications
