Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಪೋಷಕರ ವಿಚ್ಛೇದನ ಮಕ್ಕಳಲ್ಲಿ ಉಂಟು ಮಾಡುತ್ತೆ ಈ ಬದಲಾವಣೆ
ಗಂಡ-ಹೆಂಡತಿ ವಿಚ್ಛೇದನ ಪಡೆಯಲು ಬಯಸಿದರೆ ಅದು ಅವರ ಆಯ್ಕೆ ಆಗಿರುತ್ತದೆ. ಯಾರೂ ಸುಮ್ಮನೆ ವಿಚ್ಛೇದನೆ ಪಡೆಯುವುದಿಲ್ಲ, ಇಬ್ಬರಿಗೆ ಹೊಂದಿಕೊಂಡು ಬದುಕಲು ಸಾಧ್ಯವೇ ಇಲ್ಲ ಎಂದಾಗ ಮಾತ್ರ ವಿಚ್ಚೇದನ ಎಂಬ ಕಟು ನಿರ್ಧಾರ ತೆಗೆದುಕೊಂಡಿರುತ್ತಾರೆ.
ಇದರಿಂದ ಇಬ್ಬರಿಗೆ ನೆಮ್ಮದಿ ಸಿಗುವುದು, ಆದರೆ ಅವರಿಬ್ಬರಿಗೆ ಮಕ್ಕಳಿದ್ದರೆ ಮಾತ್ರ ವಿಚ್ಛೇದನದ ನೇರ ಹೊಡೆತ ಬೀಳುವುದು ಮಕ್ಕಳ ಮೇಲೆ. ಮಕ್ಕಳು ಬಾಯಿಬಿಟ್ಟು ಹೇಳದೆ ಹೋದರೂ ಅವರ ಮನಸ್ಸಿನ ಮೇಲೆ ಅಪ್ಪ-ಅಮ್ಮನ ವಿಚ್ಛೇದನ ತುಂಬಾನೇ ಪ್ರಭಾವ ಬೀರುವುದು. ಅದು ಅವರ ಸ್ವಭಾವದಲ್ಲೂ ಬದಲಾವಣೆ ತರುವುದು.

ತಂದೆ-ತಾಯಿ ವಿಚ್ಛೇದನೆ ಪಡೆದಾಗ ಮಕ್ಕಳ ವಯಸ್ಸಿಗೆ ತಕ್ಕಂತೆ ಅವರ ಮೇಲೆ ಬೀರುವ ಪರಿಣಾಮ ಭಿನ್ನವಾಗಿರುತ್ತದೆ, ಅದರ ಬಗ್ಗೆ ಹೇಳುವುದಾದರೆ
ಮಕ್ಕಳು 3-8 ವರ್ಷದೊಳಗಡೆ ಇದ್ದರೆ
ಮಕ್ಕಳು ಈ ವಯಸ್ಸಿನೊಳಗಡೆ ಇದ್ದರೆ ತಂದೆ-ತಾಯಿ ಏಕೆ ಪ್ರತ್ಯೇಕವಾಗಿದ್ದಾರೆ ಎಂದು ತಿಳಿಯದ ವಯಸ್ಸು. ನಂತರ ಸಿಂಗಲ್ ಪೇರೆಂಟ್ ಬಳಿ ಬೆಳೆಯುತ್ತಾ ಅವರಿಗೆ ಹೊಂದಿಕೊಂಡು ಬಾಳಲು ಕಲಿಯುತ್ತಾರೆ. ಮತ್ತೊಬ್ಬ ಪೋಷಕರ ನೆನಪು ಬಂದರೂ ಅವರ ಜ್ಯೊತೆ ಅಷ್ಟೊಂದು ಅಟ್ಯಾಚ್‌ಮೆಂಟ್ ಇರಲ್ಲ. ಅಪ್ಪ-ಅಮ್ಮನ ನಡುವೆ ಜಗಳವಾಗಲಿ ಯಾವುದೂ ಮಕ್ಕಳ ಮನಸ್ಸಿನಲ್ಲಿ ಇರುವುದಿಲ್ಲ. ಇಬ್ಬರು ಪೋಷಕರು ನನ್ನ ಜೊತೆ ಇರಲ್ಲ ಎಂಬ ದುಃಖ ಇರುತ್ತದೆ, ಆದರೆ ಮಕ್ಕಳಲ್ಲಿ ಕೆಟ್ಟ ಭಾವನೆ ಮೂಡುವ ಸಾಧ್ಯತೆ ತುಂಬಾನೇ ಕಡಿಮೆ.
* ಮಕ್ಕಳ ವಯಸ್ಸು 8-12 ಆಗಿದ್ದರೆ
ಇದು ಸ್ವಲ್ಪ ತಿಳಿಯುವ ವಯಸ್ಸು. ಈ ವಯಸ್ಸಿನಲ್ಲಿ ಪೋಷಕರು ಪ್ರತ್ಯೇಕವಾದರೆ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುವುದು. ಇದು ಅರಿಯುವ ವಯಸ್ಸು, ಈ ವಯಸ್ಸಿನಲ್ಲಿ ಪೋಷಕರು ಕಿತ್ತಾಡಿ ಪ್ರತ್ಯೇಕವಾದರೆ ಅವರ ಮನಸ್ಸಿನ ಮೇಲೆ ತುಂಬಾನೇ ದೊಡ್ಡ ಆಘಾತ ಬೀರುವುದು. ಚಿಕ್ಕ ಪ್ರಾಯದಲ್ಲಿ ಪೋಷಕರು ಪ್ರತ್ಯೇಕವಾದರೆ ಅದರ ನೋವು ಅವರನ್ನು ತುಂಬಾನೇ ಕಾಡುವುದು.
ಹದಿಹರೆಯದ ವಯಸ್ಸಿನವರಾಗಿದ್ದರೆ
ಹದಿಹರೆಯದ ಪ್ರಾಯವಾದರೆ ಪರಿಸ್ಥಿತಿ ಭಿನ್ನವಾಗಿರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಕೆಲವರು ತುಂಬಾ ಮಾನಸಿಕ ವೇದನೆ ಅನುಭವಿಸಿದರೆ ಇನ್ನು ಕೆಲವು ಮಕ್ಕಳು ಅಪ್ಪ-ಅಮ್ಮ ಕಿತ್ತಾಡಿ ಬದುಕುವುದಕ್ಕಿಂತ ಹಾಗೇ ಬದುಕುವುದೇ ಸೂಕ್ತ ಎಂದನಿಸುವುದು.
ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯಾಗುವುದು
ಪೋಷಕರು ವಿಚ್ಛೇದನ ಆದರೆ ಮಕ್ಕಳ ಮನಸ್ಸಿನ ಮೇಲೆ ತುಂಬಾನೇ ಕೆಟ್ಟ ಪ್ರಭಾವ ಬೀರುವುದು. ಪೋಷಕರ ಪ್ರೀತಿ ಸಿಗಬಹುದು, ಆದರೆ ಅವರು ಬಯಸಿದ ರೀತಿಯಲ್ಲಿ ಪ್ರೀತಿ ಸಿಗಲು ಸಾಧ್ಯವಿಲ್ಲ. ಪೋಷಕರ ಜೊತೆ ಖುಷಿ ಒಂದೇ ಮನೆಯಲ್ಲಿ ಇರಬೇಕು ಎಂಬ ಆಸೆ ಇರುತ್ತದೆ, ಆದರೆ ಆ ರೀತಿಯಿರಲು ಸಾಧ್ಯವಿರಲ್ಲ.
ವೈವಾಹಿಕ ಜೀವನದ ಮೇಲೆ ಕೂಡ ನಂಬಿಕೆ ಕಳೆದುಕೊಳ್ಳಬಹುದು
ವಿಚ್ಚೇದಿತ ಪೋಷಕರ ಮಕ್ಕಳು ಭವಿಷ್ಯದಲ್ಲಿ ವೈವಾಹಿಕ ಜೀವನದಲ್ಲಿ ನಂಬಿಕೆ ಕಳೆದುಕೊಳ್ಳಬಹುದು. ನಮ್ಮ ಪೋಷಕರು ಹೇಗೆ ಬದುಕಿದರು ಎಂಬುವುದನ್ನು ಉದಾಹರಣೆಯಾಗಿ ತೆಗೆದುಕೊಂಡು ಮದುವೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಲಿವಿಂಗ್ ರಿಲೇಷನ್‌ಶಿಪ್ ಹೀಗೆ ಗಟ್ಟಿಯಿಲ್ಲದ ಸಂಬಂಧದ ಕಡೆ ವಾಲಿ ತಮ್ಮ ಜೀವನವನ್ನೂ ನರಕ ಮಾಡಿಕೊಳ್ಳವವರಿಗೇನೂ ಕಡಿಮೆ ಇರಲ್ಲ.
ಒಬ್ಬ ಪೋಷಕರು ವಿಲನ್ ಆಗಬಹುದು
ಅಪ್ಪ-ಅಮ್ಮ ಪ್ರತ್ಯೇಕವಾದರೆ ಒಬ್ಬರು ಮಕ್ಕಳಿಗೆ ಸರಿಯಾಗಿ ಮತ್ತೊಬ್ಬರು ವಿಲನ್‌ನಂತೆ ಕಾಣಬಹುದು, ಅವರು ಆ ಪೋಷಕರ ಜೊತೆ ಅಂತರ ಕಾಯ್ದುಕೊಳ್ಳಬಹುದು. ಆ ಪೋಷಕರ ಮೇಲೆ ಯಾವುದೇ ಪ್ರೀತಿ ತೋರಿಸಲು ಹೋಗುವುದಿಲ್ಲ. ಇವೆಲ್ಲಾ ವಿಚ್ಛೇದನದಿಂದ ಉಂಟಾಗುವ ಕೆಟ್ಟ ಪರಿಣಾಮಗಳು.
ಹಾಗಂತ ಹೊಂದಿಕೊಂಡು ಹೋಗಲು ಸಾಧ್ಯವಾಗದೆ ಇದ್ದ ಮೇಲೆ ಜೊತೆಗೆ ಬದುಕಿದರೂ ಅದೂ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದು. ವಿಚ್ಚೇದನಕ್ಕೆ ಮುಂದಾಗುವ ಪೋಷಕರು ಮಕ್ಕಳ ಮನಸ್ಸಿಗೆ ದೊಡ್ಡ ಆಘಾತ ಉಂಟಾಗದಂತೆ ಪ್ರಯತ್ನಿಸುವುದು ಒಳ್ಳೆಯದು.



Click it and Unblock the Notifications