Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರೇಮಿಗಳ ಬಗ್ಗೆ ಕವಿಗಳ ಸಾಲು..! ಕನ್ನಡದ ಫೇಮಸ್ ಕವನಗಳು ಇಲ್ಲಿವೆ..!
ಪ್ರೇಮಿಗಳ ದಿನಕ್ಕೆಂದೇ ಮೀಸಲಿರುವ ಒಂದು ದಿನ ಈ ಪ್ರೇಮಿಗಳ ದಿನ. ಈ ದಿನದಂದು ನಿಮ್ಮ ಗೆಳಯ ಅಥವಾ ಗೆಳತಿಗೆ ಅವರ ಮನಸ್ಸಿನಲ್ಲಿರುವ ಭಾವನೆಯನ್ನು ಹೇಳ ಬಸುಸುತ್ತಾರೆ. ಇಂದು ಎಲ್ಲಾ ಪ್ರೇಮಿಗಳು ತಮ್ಮ ಮನದ ಆಸೆಯನ್ನು ಹೊರಹಾಕುವ ದಿನವಾಗಿದೆ. ಈ ದಿನ ಹಲವು ಪ್ರೇಮಿಗಳು ವಿಶೇಷವಾಗಿರಿಸಲು ಇಷ್ಟಪಡುತ್ತಾರೆ. ಇಡೀ ದಿನ ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಲು ಇಷ್ಟಪಡುತ್ತಾರೆ.
ಇನ್ನು ಪ್ರೇಮಿಗಳಿ ಅಂದಕೂಡಲೇ ನಮಗೆ ಹಲವರ ಹೆಸರುಗಳು ನೆನೆಪಿಗೆ ಬರುತ್ತವೆ. ರೋಮಿಯೋ ಜೂಲಿಯೆಟ್, ಸಲೀಂ ಅನಾರ್ಕಲಿ, ದುಷ್ಯಂತ ಶಾಕುಂತಲೆ ಹೀಗೆ ಹಲವರು ಹೆಸರು ನೆನಪಿಗೆ ಬರುತ್ತದೆ. ಇನ್ನು ನಮ್ಮ ಕನ್ನಡ ಸಿನಿಮಾದಲ್ಲೂ ಕೆಲವು ಡೈಲಾಗ್‌ಗಳು, ಹಾಡುಗಳು ಪ್ರೇಮಿಗಳ ಕುರಿತು ಹೇಳಲಾಗಿದೆ. ಇವರಲ್ಲದೆ ನಮ್ಮ ಕವಿಗಳು ಸಹ ಪ್ರೀತಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ.
ಹಾಗಾದರೆ ನಾವಿಂದು ಕನ್ನಡದ ಕೆಲವು ಫೇಮಸ್ ಹಾಡುಗಳ ಸಾಲುಗಳು, ಸಿನಿಮಾ ಡೈಲಾಗ್‌ಗಳು ಹಾಗೂ ಪ್ರೇಮ ಕವಿಗಳು ಬರೆದಿರುವ ಕೆಲವು ಕವಿತೆಗಳ ಸಾಲನ್ನು ನೋಡೋಣ.

ನನ್ನಷ್ಟು ನಿಮ್ಮನ್ನ ಇಷ್ಟ ಪಡೋನು
ಈ ಭೂಮಿ ಮೇಲೆ ಇನ್ಯಾರು ಸಿಗಲ್ಲ ಕಂಡ್ರಿ
ಕಣ್ಣು ನೋಡಿ ಪ್ರೀತಿ ಶುರುವಾಯ್ತು ಅಂತಾರೆ,
ಆದ್ರೆ ನಾನು ನಿನ್ ಕಾಲು ನೀಡಿ ಪ್ರೀತಿ ಮಾಡಿದ್ದೀನಿ
ಮೈನಾ ನಂಗೆ ಈ ಜಗತ್ತಲ್ಲೇ ಅತೀ ಹೆಚ್ಚು ಸುಖ ಅಂದ್ರೆ ನಿನ್ ನಗು
ಅನಿಸುತ್ತಿದೆ ಯಾಕೋ ಇಂದು ನೀನೇನೆ ನನ್ನವಳೆಂದು,
ಮಾಯದ ಲೋಕದಿಂದ ನನಗಾಗಿ ಬಂದವಳೆಂದು
ಯಾರದು ದೃಷ್ಟಿ ತಾಗಲ್ಲ ನಮಗೆಂದಿಗೂ
ಆಣೆ ಮಾಡಿ ಹೇಳುತ್ತೀನಿ
ನಿನ್ನ ಬಿಟ್ಟು ಹೋಗಲ್ಲ ಎಂದೆಂದಿಗೂ
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ"
ಕೆ.ಎಸ್.ನರಸಿಂಹಸ್ವಾಮಿ
ಹಾಲು, ಹೂವು, ಜೊನ್ನ, ಜೇನುಎಲ್ಲ ಸೇರಿಯಾದೆ ನೀನು!
ಹಾಲಿಗಿಂತ ಕೆನ್ನೆ ಸವಿ:
ಹೂವಿಗಿಂತ ಕಣ್ಣೆ ಸವಿ:
ಜೊನ್ನಕ್ಕಿಂತ ನಗೆಯೇ ಸವಿ;
ಜೇನಿಗಿಂತ ಮುತ್ತೆ ಸವಿ;
ಹಾಲು ಸವಿ, ಜೇನು ಸವಿ;
ಹಾಲು, ಜೇನುಗಳನು ಮೀರಿ
ನೀನೆ ನನಗೆ ಹೆಚ್ಚು ಸವಿ,
ಕುವೆಂಪು
ಅವಳು ನಾಕ;ಅವಳು ನರಕ;
ನಾಕ ಜೊತೆಯೊಳಿದ್ದರೆ,
ನರಕ ದೂರ ಹೋದರೆ
ಕುವೆಂಪು
ಪ್ರೀತಿ ಇಲ್ಲದ ಮೇಲೆ
ಹೂವು ಅರಳಿತು ಹೇಗೆ?
ಮೋಡ ಕಟ್ಟಿತು ಹೇಗೆ?
ಹನಿಯೊಡನೆ ಕೆಳಗಿಳಿದು
ನೆಲಕ್ಕೆ ಹಸಿರು ಮೂಡಿತು ಹೇಗೆ?
ಜಿಎಸ್ ಶಿವರುದ್ರಪ್ಪ
ಬಲುದೂರ ದೂರ ನೀನಾಗಿ
ಹೊಂಗನಸ ನಡುವೆ ದನಿಯಾಗಿ
ಕಾದಿರಲು ನಾನು ನಿನಗಾಗಿ
ನೀ ಬರುವೆ ಚಲುವೆ ಹೊಳೆಯಾಗಿ
ಕೆ.ಎಸ್ ನರಸಿಂಹಸ್ವಾಮಿ
ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ ಕೆನ್ನೆ ತುಂಬಾ ಮುತ್ತು
ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು
ಹೊಟ್ಟೆಗುತ್ತ ಜೀವಫಲವ ತುಟಿಗೆ ಹಾಲು-ಜೇನು
ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕೋ!
ದ.ರಾ. ಬೇಂದ್ರೆ



Click it and Unblock the Notifications










