Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
70ರ ವೃದ್ಧನಿಗೆ ಹುಡುಗಿ ಬೇಕಾಗಿದ್ದಾಳೆ..! ಪ್ರತಿ ವಾರ 30 ಸಾವಿರ ಖರ್ಚು ಮಾಡಿ ಜಾಹೀರಾತು..!
ಮದುವೆಯಾಗದೆ ಬಾಳಸಂಗಾತಿ ಇಲ್ಲದೆ ವಯಸ್ಸಿನಲ್ಲಿ ದಿನ ಕೆಳೆಯಬಹುದಂತೆ ಆದರೆ ವೃದ್ಧಾಪ್ಯದಲ್ಲಿ ಕಾಡುವ ಒಂಟಿತನ ಹತ್ತಾರು ಸಮಸ್ಯೆಗೆ ದಾರಿಯಾಗುತ್ತದೆ. ಮದುವೆಯಾಗಿದ್ದರು ಒಂದು ವೇಳೆ ಮಡದಿ ಕೆಲ ವರ್ಷದಲ್ಲಿ ತೀರಿ ಹೋಗಿದ್ದರು ಸಹ ವೃದ್ಧಾಪ್ಯದಲ್ಲಿ ಒಂಟಿತನ ಕಾಡಲಿದೆಯಂತೆ.
ಇಲ್ಲಿಯು ಸಹ ಓರ್ವ ವೃದ್ಧ ಮದುವೆಯಾಗದೆ 70 ವರ್ಷ ದಾಟಿದ್ದು, ಈಗ ಒಂಟಿತನ ಕಾಡಲಾರಂಭಿಸಿದೆ. ಹೀಗಾಗಿ ಆತ ಈಗ ಜೊತೆಗೆ ಯಾರಾದರು ಇರಬೇಕು ಎನಿಸಿ ಗೆಳತಿಯ ಹುಡುಕಲು ಮುಂದಾಗಿದ್ದಾನೆ. ಆತನಿಗೆ 70 ವರ್ಷ ವಯಸ್ಸಾಗಿದ್ದು, ಜೊತೆಗಿರಲು ಸಂಗಾತಿ ಬೇಕು ಎಂದು ಜಾಹೀತಾತು ನೀಡುತ್ತಿದ್ದಾನೆ.

ಹೌದು ಆತ ಈಗ ಏಕಾಂಗಿಯಾಗಿ ಬದುಕಲು ಇಷ್ಟಪಡದೆ ಸಂಗಾತಿ ಬೇಕು ಎಂದು ವಾರಕ್ಕೆ 30 ಸಾವಿರ ರೂಪಾಯಿ ನೀಡಿ ಜಾಹೀರಾತು ನೀಡುತ್ತಿದ್ದಾನೆ. ಅಚ್ಚರಿ ಎಂದರೆ ಆತನಿಗೆ ಪ್ರತ್ಯುತ್ತರದ ಕರೆಗಳು ಹಾಗೂ ಈ ಮೇಲ್‌ಗಳು ಸಹ ಬಂದಿವೆಯಂತೆ. ಸುಮಾರು 400ಕ್ಕೂ ಹೆಚ್ಚು ಕರೆಗಳು ಹಾಗೂ 50ಕ್ಕೂ ಹೆಚ್ಚು ಈ ಮೇಲ್‌ಗಳು ಆತನಿಗೆ ಬಂದಿದೆಯಂತೆ.
ಗಿಲ್ಬರ್ಟ್ ಎಂಬಾತ ಅಮೆರಿಕದ ಟೆಕ್ಸಾಸ್‌ನ ಸ್ವೀಟ್ ವಾಟರ್ ಸಿಟಿಯಲ್ಲಿ ವಾಸವಿದ್ದು, 20 ಅಡಿ ಬಿಲ್ ಬೋರ್ಡ್ ಹಾಕಿಸಿ ಪ್ರತಿ ವಾರ $400 ನೀಡುತ್ತಿದ್ದಾನೆ. ಒಂಟಿಯಾಗಿರುವ ತನಗೆ ಸಂಗಾತಿ ಹುಡುಕುತ್ತಿರುವುದಾಗಿ ಜಾಹೀರಾತಿನಲ್ಲಿ ಹೇಳಲಾಗಿದೆ. ಜೊತೆಗೆ ಆತ ಆಕೆ ಕರೆದ ಕಡೆ ರಿಲೊಕೇಟ್ ಆಗಲು ಸಹ ಸಿದ್ಧನಿದ್ದನಂತೆ. ಆಕೆಗೆ ಇಲ್ಲಿ ಇರಲು ಇಷ್ಟವಿಲ್ಲದಿದ್ದರೆ ಎಲ್ಲಿ ಬೇಕಾದರು ರಿ ಲೊಕೇಟ್ ಆಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.
''ನಾನು ಬಿಲ್‌ಬೋರ್ಡ್ ಜಾಹೀರಾತು ಹಾಕಿಸಿದ್ದು ಕಂಡು ನೂರಾರು ಮಂದಿ ಕರೆ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಬಹುತೇಕರು ಹಣ ಮಾತ್ರ ಕೇಳುತ್ತಿದ್ದಾರೆ. ನಾನು ಜಾಹೀರಾತು ನೀಡಿದ್ದು ಕಂಡು ಅವರು ನಾನು ಶ್ರೀಮಂತ ಎಂದುಕೊಂಡಿದ್ದಾರೆ. ಹೀಗಾಗಿ ನನಗೆ ಬರುವ ಕರೆಗಳನ್ನು ಪರಿಶೀಲಿಸಲು ನಾನು ನನ್ನ ಸ್ನೇಹಿತರಿಗೆ ವರ್ಗಾಯಿಸುತ್ತೇನೆ ಅವರು ವಿಚಾರಣೆ ನಡೆಸುತ್ತಾರೆ'' ಎಂದು ಗಿಲ್ಬರ್ಟ್ ಹೇಳಿಕೊಂಡಿದ್ದಾರೆ.
''ನನಗೆ ಸರಿಯಾದ ವ್ತಕ್ತಿ ಸಿಕ್ಕರೆ ನಾನು ಎಲ್ಲಿಗೆ ಬೇಕಾದರು ಪ್ರಯಾಣಿಸುತ್ತೇನೆ. ನಾನು ಸರಿಯಾದ ವ್ಯಕ್ತಿಯನ್ನು ಭೇಟಿಯಾದರೆ ಅವರ ಕಣ್ಣುಗಳನ್ನು ನೋಡಲು ಮತ್ತು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಯಾರನ್ನಾದರೂ ಭೇಟಿಯಾಗಲು ಯುರೋಪಿಗೆ ಬೇಕಾದರು ನಾನು ಹೋಗುತ್ತೇನೆ'' ಎಂದಿದ್ದಾರೆ. ಆತ 2015 ರಿಂದ ಒಂಟಿಯಾಗಿ ಬದುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಇತ್ತ ಜಾಹೀರಾತು ನೋಡಿ ಕರೆ ಮಾಡುವವರು ಮೊದಲಿಗೆ ಹಣ ಮತ್ತು ಆಸ್ತಿ ಕುರಿತು ವಿಚಾರಣೆ ನಡೆಸುತ್ತಾರಂತೆ. ಅಲ್ಲದೆ ಆಸ್ತಿಯನ್ನ ತಮ್ಮ ಹೆಸರಿಗೆ ವರ್ಗಾಯಿಸಿದರೆ ಮಾತ್ರ ಆತನ ಜೊತೆ ಇರಲು ಬಯಸಿರುವುದಾಗಿಯೂ ಕೆಲವರು ಹೇಳಿಕೊಂಡರಂತೆ. ಆದರೆ ತಾನು ಆಸ್ತಿ, ಹಣದ ಹಿಂದೆ ಬಿದ್ದು ಈ ರೀತಿ ಜಾಹೀರಾತು ನೀಡಿಲ್ಲ, ಕೊನೆಯ ದಿನಗಳಲ್ಲಿ ನನ್ನ ಜೊತೆ ಇರುವವರು ಬೇಕಾಗಿದ್ದಾರೆ ಅಂತವರು ಸಿಗುವವರೆಗೆ ಹುಡುಕುತ್ತೇವೆ ಎಂದಿದ್ದಾರೆ.
ಅಲ್ಲದೆ ಜಾಹೀರಾತು ನೋಡಿ ಆ ಮೂಲಕ ಸಂಪರ್ಕಿಸುವವರು ಹೆಚ್ಚಿನವರು ಕುಟುಂಬ, ಮದುವೆಯಾಗಿ ಮಕ್ಕಳು ಇದ್ದವರು ಆಗಿದ್ದಾರಂತೆ. ಅವರಲ್ಲಿ ಕೆಲವರು ಹಣ ನೀಡಿದರೆ ಅವರ ಜೊತೆ ಮನೆಯಲ್ಲಿ ಬಿಟ್ಟುಕೊಳ್ಳುವುದಾಗಿಯೂ ಆಫರ್ ನೀಡಿದ್ದರಂತೆ. ಇದನ್ನು ತಿರಸ್ಕರಿಸಿರುವುದಾಗಿ ಗಿಲ್ಬರ್ಟ್ ಹೇಳಿಕೊಂಡಿದ್ದಾರೆ.
ನನ್ನ ಬಳಿ ಯಾವ ಆಸ್ತಿ ಇಲ್ಲ. ವಯಸ್ಸಿನಲ್ಲಿ ದುಡಿದ ಹಣ, ಒಂದು ಮನೆ ಇದೆ, ಹಣ ಮಾಡುವ ವಯಸ್ಸು ಸಹ ನನಗಿಲ್ಲ. ನಾನು ಶ್ರೀಮಂತನಲ್ಲ. ಜಾಹೀರಾತು ನೀಡಿದ್ದು ನೋಡಿ ಎಲ್ಲರು ನಾನು ಶ್ರೀಮಂತ ಎಂದುಕೊಂಡು ಕರೆ ಮಾಡುತ್ತಿದ್ದಾರೆ. ಹಣವಿಲ್ಲ ಎಂದು ತಿಳಿದ ತಕ್ಷಣ ಕರೆ ಬಂದ್ ಮಾಡುತ್ತಾರೆ ಎಂದು ಗಿಲ್ಬರ್ಟ್ ಹೇಳಿಕೊಂಡಿದ್ದಾರೆ.



Click it and Unblock the Notifications
