Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರೀತಿಯ ಬಗ್ಗೆ ಕೆಲ ಕೂಲ್ ಫ್ಯಾಕ್ಟ್ಸ್
ಪ್ರೀತಿಯನ್ನು ಕೇವಲ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಪ್ರೀತಿ ಅನ್ನುವ ಪದ ಒಂದೇ ಆದರು ಪ್ರತಿಯೊಬ್ಬರ ಪ್ರೀತಿನ ಕಥೆಯೂ ಒಬ್ಬರಿಗಿಂತ ಭಿನ್ನವಾಗಿರುತ್ತದೆ. ಪ್ರೀತಿ ನಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ. ಒಂದೊಂದು ಸಲ ಯೋಚಿಸಿದಾಗ ಈ ಪ್ರೀತಿ ಅನ್ನುವುದು ಎಷ್ಟು ಮಾಯೆ ಅನಿಸುತ್ತದೆ. ನಮಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿ ಪರಿಚಯವಾಗಿ, ಪರಿಚಯ ಪ್ರೇಮವಾಗಿ ಬಿಟ್ಟಿರಲಾರದಷ್ಟು ಹತ್ತಿರವಾಗಿ ಬಿಡುತೇವೆ.
ಪ್ರತಿಯೊಬ್ಬರ ಪ್ರೇಮ ಕಥೆಗಳು ಭಿನ್ನವಾಗಿರಬಹುದು, ಆದರೆ ಪ್ರೀತಿಯ ಬಗ್ಗೆ ಕೆಲವೊಂದು ಅಂಶಗಳು ಕಾಮನ್. ಆ ಕಾಮನ್ ಕೂಲ್ ಫ್ಯಾಕ್ಟ್ಸ್ ಯಾವುವು ಎಂದು ಈ ಕೆಳಗೆ ನೀಡಲಾಗಿದೆ ನೋಡಿ:

ಪ್ರೀತಿ ಇಂದು, ನೆನ್ನೆಯದಲ್ಲ
ಪ್ರೀತಿ ಅನ್ನುವುದು ಮನುಷ್ಯನಿಗೆ ನಾಗರೀಕತೆ ತಿಳಿದ ಕಾಲದಿಂದಲೂ ಇದೆ. ಮೊದಲು ಪ್ರೇಮಗೀತೆ 4,500 ವರ್ಷಗಳ ಹಿಂದೆ ಬರೆಯಲ್ಪಟ್ಟಿದೆ.
ಪ್ರೀತಿ ನಿಮ್ಮನ್ನು ಆರೋಗ್ಯವಾಗಿಡುತ್ತದೆ
ಪ್ರೀತಿ ಮನಸ್ಸು ಹಾಗೂ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ಹೆಂಡತಿಗೆ ಕಿಸ್ ಕೊಡುವ ವ್ಯಕ್ತಿ, ಬ್ರಹ್ಮಚಾರಿಗಳಿಗಿಂತ, ಕಮ್ಮಿ ಭಾವನಾತ್ಮಕ ವ್ಯಕ್ತಿಗಳಿಗಿಂತ ಹೆಚ್ಚು ಸಂತೋಷವಾಗಿ, ನೆಮ್ಮದಿಯಿಂದ ಇರುತ್ತಾನೆ ಎಂದು ಹೇಳಿದರೆ ಸಿಲ್ಲಿ ಅನಿಸಬಹುದು ಆದರೆ ವೈಜ್ಞಾನಿಕ ಇದು ಸತ್ಯವಾದ ಅಂಶವಾಗಿದೆ.
ರೋಸ್ ಪ್ರೀತಿಯ ಸಂಕೇತ
ಗುಲಾಬಿ ಪ್ರೀತಿಯ ಸಂಕೇತವಾಗಿದೆ. ಅದರಲ್ಲಿ ಬಿಳಿ ಬಣ್ಣದ ಗುಲಾಬಿ ದೈವ ಪ್ರೀತಿಯ ಸಂಕೇತವಾಗಿದೆ. ಮುಳ್ಳಿಲ್ಲದ ಗುಲಾಬಿ ಲವ್ ಎಟ್ ಫಟ್ಸ್ ಸೈಟ್ ನ ಸಂಕೇತವಾಗಿದೆ.
ಪ್ರೀತಿ ಮತ್ತು ಕಾಮ ಭಿನ್ನವಾದದು
ಪ್ರೀತಿ ಹಾಗೂ ಕಾಮವನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಪ್ರೀತಿ ಅನ್ನುವುದು ಬರೀ ಸೆಕ್ಸ್ ಮಾತ್ರವಲ್ಲ, ಅಲ್ಲಿ ಮನಸ್ಸಿನ ಭಾವನೆಗಳ ಹೊಂದಾಣಿಕೆಯಿರುತ್ತದೆ. ಆದರೆ ಕಾಮದಲ್ಲಿ ಮನಸ್ಸಿನ ಭಾವನೆಗೆ ಬೆಲೆಯಿಲ್ಲ.
ಪ್ರೀತಿ ನೋವನ್ನು ತರುತ್ತದೆ
ಪ್ರೀತಿಸಿದ ವ್ಯಕ್ತಿ ಯಾವುದೋ ಒಂದು ಕಾರಣಕ್ಕೆ ನೋವನ್ನು ಅನುಭವಿಸಿಯೇ ತೀರುತ್ತಾನೆ. ಹೆಚ್ಚಿನ ಹುಡುಗರು ಯಾವುದೇ ಕಾರಣಕ್ಕೆ ಕಣ್ಣಿನಲ್ಲಿ ನೀರು ಹಾಕುವುದಿಲ್ಲ, ಪ್ರೇಮ ಅಂತ ಬಂದಾಗ ಅವರ ಕಣ್ಣಿನಲ್ಲಿ ನೀರು ಬಂದೇ ಬರುತ್ತದೆ.
ಪುರುಷರ ಪ್ರೀತಿ ಸ್ತ್ರೀಯರಂತೆ ಇರುವುದಿಲ್ಲ
ಸ್ತ್ರೀಯರು ಚಿಕ್ಕ-ಪುಟ್ಟ ವಿಷಯವನ್ನು ನೆನೆಪಿನಲ್ಲಿಟ್ಟುಕೊಳ್ಳುತ್ತಾರೆ. ಪುರುಷರು ತಮ್ಮ ಹುಡುಗಿನ ತುಂಬಾ ಪ್ರೀತಿಸುತ್ತಾರೆ. ಹಾಗಂತ ಪುರುಷರಿಗೆ ಹುಟ್ಟಿದ ದಿನ, ಮೊದಲು ಭೇಟಿಯಾದಾಗ ಯಾವ ಡ್ರೆಸ್ ಹಾಕಿದ್ದೆ ಅಂತೆಲ್ಲಾ ಕೇಳಿದರೆ ಹೆಚ್ಚಿನವರು ನೆನೆಪಿನಲ್ಲಿಟ್ಟುಕೊಂಡಿರುವುದಿಲ್ಲ.
ಅಪಾಯಕಾರಿ ಸಂದರ್ಭದಲ್ಲಿ ಪ್ರೀತಿಯಲ್ಲಿ ಬೀಳುತ್ತೇವೆ
ಸಾಕಷ್ಟು ಪ್ರೇಮಕಥೆಗಳಲ್ಲಿ ಯಾವುದೋ ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ವ್ಯಕ್ತಿಯ ಮೇಲೆ, ನಮ್ಮ ನೋವನ್ನು ಕೇಳಿದ ವ್ಯಕ್ತಿಯ ಮೇಲೆ ಪ್ರೇಮ ಬಂದಿರುತ್ತದೆ. ಪ್ರೀತಿಯ ಬಗ್ಗೆ ಇಲ್ಲಿ ಹೇಳಿದ ಅಂಶಗಳು ನಿಮಗೂ ಒಪ್ಪಿಗೆಯಾಗಿದೆಯೇ? ನಿಮ್ಮ ಅಭಿಪ್ರಾಯ ಏನೇ ಇರಲಿ ನಮ್ಮಗೆ ಕಾಮೆಂಟ್ ಹಾಕಬಹುದು.



Click it and Unblock the Notifications
