Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರೀತಿ ಬೇಕೆಂದು ಹಂಬಲಿಸುವುದೇಕೆ?

ಏಕಾಂಗಿಯಾಗಿರುವವರಿಗೆ ಪ್ರೇಮಿಗಳನ್ನು ನೋಡಿದಾಗ ನಮ್ಮನ್ನು ಪ್ರೀತಿಸುವ ವ್ಯಕ್ತಿ ಬೇಕು ಅನಿಸಿದರೆ, ಪ್ರೀತಿಯಲ್ಲಿರುವವರಿಗೆ ಸಣ್ಣ ಪುಟ್ಟ ಮುನಿಸುಗಳಾದಾಗ ಏಕೆ ಬೇಕಿತ್ತು ಈ ಪ್ರೀತಿ ಪ್ರೇಮ ಅನಿಸುತ್ತದೆ ಆದರೆ ಅದು ಕ್ಷಣಿಕವಷ್ಟೆ, ಕೋಪ ತಣಿದ ಮೇಲೆ ಮನಸ್ಸು ಮಾತ್ರ ಸದಾ ಪ್ರೀತಿಗಾಗಿ ಹಂಬಲಿಸುತ್ತಿರುತ್ತದೆ. ಒಂದೊಂದು ಪ್ರೀತಿಯ ಹಿಂದೆ ಹೇಳಲು ಒಂದೊಂದು ಕತೆ ಇರುತ್ತದೆ. ಪ್ರತಿಯೊಬ್ಬರು ಪ್ರೀತಿಗಾಗಿ ಹಂಬಲಿಸಲು ಈ ಕೆಳಗಿನ ಸಾಮಾನ್ಯ ಅಂಶಗಳು ಮುಖ್ಯವಾದ ಕಾರಣಗಳಾಗಿವೆ.
1. ಇಷ್ಟ: ದಿನ ನಿತ್ಯ ಅನೇಕ ವ್ಯಕ್ತಿಗಳನ್ನು ನೋಡುತ್ತೇವೆ, ಮಾತನಾಡಿಸುತ್ತೇವೆ ಆದರೆ ಆ ಎಲ್ಲಾ ವ್ಯಕ್ತಿಗಳಿಗಿಂತ ನಾವು ಪ್ರೀತಿಸುವ ವ್ಯಕ್ತಿ ಬೇರೆಯಾಗಿ ಕಾಣುತ್ತಾನೆ, ತುಂಬಾ ಆಪ್ತ ಅನಿಸುತ್ತಾನೆ. ನಮ್ಮ ಬದುಕನ್ನು ಆ ವ್ಯಕ್ತಿ ಜೊತೆ ಕಳೆಯಬೇಕೆಂದು ಅನಿಸುತ್ತದೆ. ಇದನ್ನೇ ಪ್ರೀತಿ ಅನ್ನುವುದು. ಆ ವ್ಯಕ್ತಿಯೆಡೆಗೆ ಮನಸ್ಸು ಸೆಳೆಯುವಾಗೆ, ಮಿಡಿಯುವ ಹಾಗೆ ಇತರ ವ್ಯಕ್ತಿಗಳನ್ನು ನೋಡಿದಾಗ ಅನಿಸುವುದಿಲ್ಲ. ಈ ಪ್ರೀತಿಗಾಗಿಯೆ ಪ್ರತಿಯೊಬ್ಬರು ಹಂಬಲಿಸುತ್ತಿರುತ್ತಾರೆ.
2. ನಮ್ಮ ಜೊತೆಯಾಗಿ ನಡೆಯಲು: ಬಾಳಿನಲ್ಲಿ ಒಂಟಿಯಾಗಿ ಪ್ರಯಾಣಿಸುವವರಿಗೆ ನಮ್ಮನ್ನು ಪ್ರೀತಿಸುವ, ಮುದ್ದಿಸುವ ಜೊತೆಗಾರರು ಬೇಕು ಅನಿಸಿರುತ್ತದೆ. ನಮ್ಮ ನಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದು ನಮ್ಮ ಬದುಕಿನ ಜೊತೆಗಾರರ ಜೊತೆ ಮಾತ್ರ. ನಮಗೆ ಅಂತ ಒಬ್ಬರು ಇದ್ದಾರೆ ಅಂದರೆ ಮನಸ್ಸಿಗೆ ಖುಷಿಯಾಗುತ್ತದೆ. ಈ ಎಲ್ಲಾ ಖುಷಿ ಅನುಭವ ಪಡೆಯಲು ನಮ್ಮನ್ನು ಪ್ರೀತಿಸುವವರು ಬೇಕು ಅನಿಸುತ್ತದೆ.
3. ಹಂಚುಕೊಳ್ಳುವಿಕೆ: ಒಂಟಿಯಾಗಿರುವಾಗ ಖಿನ್ನತೆ ಉಂಟಾಗುವುದು, ನಮಗಿಂತ ಯಾರೂ ಇಲ್ಲ, ಎಲ್ಲರಿಗೂ ಅವರದ್ದೆ ಜೀವನ, ನಮ್ಮ ಬಗ್ಗೆ ಯೋಚಿಸಲು ಯಾರಿಗೂ ಟೈಮ್ ಇಲ್ಲ ಅನಿಸುತ್ತದೆ. ಆದರೆ ಪ್ರೀತಿ ಮಾಡಲು ಪ್ರಾರಂಭಿಸಿದ ಮೇಲೆ ನನಗೋಸ್ಕರ, ನನ್ನ ಮಾತ್ರ ಪ್ರೀತಿಸುವ ಜೀವ ಒಂದಿದೆ ಎಂಬ ಸಮಧಾನವಿರುತ್ತದೆ. ಭಾವನೆ, ಮನಸ್ಸು, ಆಲೋಚನೆ, ದೇಹ , ಸುಖ-ದುಃಖ ಇವೆಲ್ಲಾ ಹಂಚಿಕೊಳ್ಳಲು ಸಾಧ್ಯವಾಗುವುದು ಬಾಳ ಸಂಗಾತಿ ಜೊತೆ ಮಾತ್ರ. ನಮಗೋಸ್ಕರ ಬಾಳದೆ ನಾವು ನಮ್ಮನ್ನು ಪ್ರೀತಿಸುವ ವ್ಯಕ್ತಿಗೋಸ್ಕರ ಬಾಳಲಾರಂಭಿಸುತ್ತೇವೆ. ಈ ಎಲ್ಲಾ ಅನುಭವಗಳು ಪವಿತ್ರವಾದ ಪ್ರೀತಿ ಸಂಬಂಧದಲ್ಲಿ ಮಾತ್ರ ಪಡೆಯಲು ಸಾಧ್ಯ.



Click it and Unblock the Notifications
