Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಂಬಂಧ ಗಟ್ಟಿಯಾಗಿಸಲು ಚಿಕ್ಕದೊಂದು ಬ್ರೇಕ್...

ಸಂಬಂಧದಲ್ಲಿ ಏನಾದರೂ ಬಿರುಕು ಕಂಡು ಬಂದು ಇನ್ನು ಇವನ/ಳ ಜೊತೆ ಸಂಬಂಧ ಮುಂದುವರೆಸಿಕೊಂಡು ಹೋಗಲು ಸಾಧ್ಯವಿಲ್ಲ ಅನ್ನುವಾಗ ರಿಲೇಷನ್ ಶಿಪ್ ಅನ್ನು ಬ್ರೆಕ್ ಅಪ್ ಮಾಡಿಕೊಳ್ಳುವವರನ್ನು ನೋಡುತ್ತೇವೆ. ಆದರೆ ನಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕೆಂದು ಸ್ವಲ್ಪ ಕಾಲ ಬ್ರೇಕ್ ಮಾಡುವವರು ತುಂಬಾ ವಿರಳ! ಬ್ರೇಕ್ ಅಪ್ ಮಾಡಿಕೊಂಡರೆ ಬ್ರೇಕ್ ಅಪ್ ಮಾಡಿಕೊಂಡು ಪ್ರೀತಿ ಹೆಚ್ಚಿಸುವುದು ಹೇಗೆ? ಇವಳೇನು ಹುಚ್ಚು-ಹುಚ್ಚಾಗಿ ಹೇಳುತ್ತಿದ್ದಾಳೆ ಅಂದುಕೊಳ್ಳುತ್ತಿದ್ದೀರಾ? ಹಾಗಾದರೆ ಮುಂದೆ ಓದಿ ನಿಮಗೇ ಗೊತ್ತಾಗುತ್ತದೆ:
ಜೊತೆಯಲ್ಲಿದ್ದರೆ ಪ್ರೀತಿ, ಆಗಾಗ ಮುನಿಸ್ಸು ಇವೆಲ್ಲಾ ಸಾಮಾನ್ಯ. ಆದರೆ ಕೆಲವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರೂ ಅಷ್ಟೇ ಜಗಳ ಕೂಡ ಆಡುತ್ತಾರೆ. ಅಂತಹವರು ಸ್ವಲ್ಪ ಕಾಲ ಬೇರೆ ಇರಿ. ಈ ರೀತಿ ಸಂಬಂಧದಲ್ಲಿ ಬ್ರೇಕ್ ತೆಗೆದುಕೊಂಡು ದೂರವಿದ್ದಾಗ ಅವರಿಗೆ ಫೋನ್ ಮಾಡಿ ಮಾತನಾಡುವುದು ಕೂಡ ಮಾಡಬಾರದು. ಈ ರೀತಿ ಮಾಡಿದಾಗ ನೀವು ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಅನ್ನುವುದು ಅರ್ಥವಾಗುತ್ತದೆ.
ಕೆರಿಯರ್ ಬಿಲ್ಡ್ ಮಾಡಬೇಕು, ಅದಕ್ಕಾಗಿ ತನ್ನೆಲ್ಲಾ ಗಮನವನ್ನು ಅದರ ಮೇಲೆ ಹರಿಸಬೇಕು ಎಂದು ಬಯಸುವವರು ಸಂಬಂಧದಿಂದ ಬ್ರೇಕ್ ತೆಗೆದುಕೊಳ್ಳುವುದು ಒಳ್ಳೆಯದು. ಈ ರೀತಿ ಬ್ರೇಕ್ ತೆಗೆದುಕೊಳ್ಳುವಾಗ ನಮ್ಮ ಭವಿಷ್ಯಕ್ಕಾಗಿ ಈ ಬ್ರೇಕ್. ಆದ್ದರಿಂದ ಸ್ವಲ್ಪ ಸಮಯಾವಕಾಶ ಕೊಡು ನಂತರ ನಾವು ಜೊತೆಯಾಗಿ ಬಾಳುವ ಅನ್ನುವುದನ್ನು ನೀವು ನಿಮ್ಮನ್ನು ಇಷ್ಟಪಡುತ್ತಿರವವರಿಗೆ ಮನದಟ್ಟು ಮಾಡಿಕೊಡಬೇಕು.
ಅಲ್ಲದೆ ಈ ರೀತಿಯ ಬ್ರೇಕ್ ಮಾನಸಿಕವಾಗಿ ನಮ್ಮನ್ನು ಗಟ್ಟಿ ಮಾಡುತ್ತದೆ. ಜೀವನದ ಬಗ್ಗೆ ಅವಲೋಕನ ಮಾಡಬಹುದು. ಜೊತೆಯಲ್ಲಿ ಬಾಳಲು ನಮ್ಮಲ್ಲಿ ಆಗಬೇಕಾದ ಬದಲಾವಣೆಗಳೇನು ಎಂಬುದೆಲ್ಲಾ ತಿಳಿಯುತ್ತದೆ. ಒಂದು ಬ್ರೇಕ್ ನ ನಂತರ ಒಂದಾದರೆ ಪರಸ್ಪರ ಅರ್ಥ ಮಾಡಿಕೊಂಡು ಬಾಳುವ ಗುಣ ನಿಮ್ಮಲ್ಲಿ ಬೆಳೆಯುವುದು, ಮೊದಲಿನಂತೆ ಚಿಕ್ಕ-ಪುಟ್ಟ ವಿಷಯಗಳಿಗೆ ಜಗಳವೂ ಬರುವುದಿಲ್ಲ. ನಮ್ಮ ಸಂಬಂಧ ಗಟ್ಟಿಯಾಗುತ್ತದೆ ಅಂದರೆ ನಮ್ಮ ಪ್ರೀತಿಯ ವ್ಯಕ್ತಿಯಿಂದ ಸ್ವಲ್ಪ ಕಾಲ ದೂರವಿರುವುದು ಏನೂ ಕಷ್ಟವಿಲ್ಲ ಅಲ್ಲವೇ? ನನ್ನ ಅಭಿಪ್ರಾಯವನ್ನು ಇಲ್ಲಿ ಹೇಳಿರುವೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಏನು?



Click it and Unblock the Notifications
