Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರೀತಿ ಕುರುಡಾದರೆ ಬಾಳು ಕುರುಡಾಗುವುದು!

ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ-ಪ್ರಮದ ಗುಂಗು ಇದ್ದೇ ಇರುತ್ತದೆ. ಆದರೆ ಪ್ರೀತಿಸುವ ಮೊದಲು ಸ್ವಲ್ಪ ಸ್ವಲ್ಪ ಆಲೋಚನೆ ಮಾಡಿದರೆ ಮುಂದೆ ಸುಖಕರವಾದ ಜೀವನ ಸಿಗುವುದು.
1. ನಡತೆ: ಪ್ರೀತಿಸುವ ಮೊದಲು ಪ್ರೀತಿಸ ಹೊರಟಿರುವ ವ್ಯಕ್ತಿಯ ನಡತೆ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಸಿನಿಮಾದಲ್ಲಿ ತೋರಿಸುವ ರೀತಿ ಒಂದು ಸಲ ವ್ಯಕ್ತಿಯನ್ನು ಕಂಡ ತಕ್ಷಣ ಪ್ರೀತಿಸಿದರೆ ಮುಂದೆ ಬದುಕು ಕೂಡ ದುರಂತ ಸಿನಿಮಾ ಕತೆಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ರೀತಿಸುವ ಮೊದಲು ವ್ಯಕ್ತಿಯ ನಡತೆ ತಿಳಿದುಕೊಳ್ಳಬೇಕು.
2. ಮನೆತನದ ಬಗ್ಗೆ ತಿಳಿದುಕೊಳ್ಳಬೇಕು: ಮದುವೆಯಾಗುವಾಗ ಮುಖ್ಯವಾಗಿ ಗಮನಿಸಬೇಕಾದ ವಿಷಯ ಅಂದರೆ ಹುಡುಗನ ಮನೆತನ. ಆದ್ದರಿಂದಲೆ ಹಿರಿಯರು ಮಾಡುವ ಮದುವೆಯಲ್ಲಿ ಹುಡುಗನಿಗಿಂತ ಅವನ ಮನೆತನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಒಳ್ಳೆಯ ಮನೆತನದಲ್ಲಿ ಬೆಳೆದಿರುವವರೆಗೆ ಮಾತ್ರ ಸಂಬಂಧಗಳ ಬೆಲೆ ಅರ್ಥವಾಗುವುದು.
3. ಆರ್ಥಿಕ ಸ್ಥಿತಿ: ಪ್ರೀತಿಸುವಾಗ ಇದೊಂದು ದೊಡ್ಡ ವಿಷಯವಲ್ಲ ಅಂತ ಅನಿಸಿದರೂ ಮದುವೆ ನಂತರ ಹಣವಿಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ. ಹಣ ಇಲ್ಲದಿದ್ದರೆ ಸಮಸ್ಯೆಗಳು ನಿಧಾನಕ್ಕೆ ಪ್ರಾರಂಭವಾಗಿ ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚು.
4. ಶಿಕ್ಷಣ: ತುಂಬಾ ಓದಿದ ಹುಡುಗಿ ಏನೂ ಓದಿಲ್ಲದ ಹುಡುಗನ ಮದುವೆಯಾದರೆ ಅವನಿಗೆ ಕೀಳರಿಮೆ ಸಹಜ. ಶಿಕ್ಷಣವಿದ್ದರೆ ಮಾತ್ರ ಜೀವನ ಮಾಡಬಹುದು ಅಂತ ಹೇಳುತ್ತಿಲ್ಲ. ಹೆಚ್ಚು ಓದಿಲ್ಲದವರು ಒಳ್ಳೆಯ ಸ್ಥಾನಮಾನ ಗಳಿಸಿದ ನಿದರ್ಶನಗಳಿವೆ, ಆದರೆ ಸಂಖ್ಯೆ ಬೆರಳೆಣಿಕೆಯಷ್ಟೆ.
5. ರೂಪ: ಪ್ರೀತಿ ಮಾಡುವಾಗ ರೂಪ ನೋಡಿದರೂ ನಂತರ ರೂಪಕ್ಕಿಂತ ಗುಣ ಮುಖ್ಯವಾಗುತ್ತದೆ. ಆದ್ದರಿಂದ ಒಳ್ಳೆಯ ಗುಣವಿದ್ದರೆ ಅದರ ಮುಂದೆ ರೂಪ ದೊಡ್ಡ ವಿಷಯವಾಗುವುದಿಲ್ಲ.



Click it and Unblock the Notifications
