Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಇದು ಅತಿ ಪ್ರೀತಿಯಲ್ಲ, ಸಂಶಯ!

ಯಾವಾಗ ಸಂಶಯ ಎಂಬ ಭೂತ ಮನಸ್ಸಿಗೆ ಹೊಕ್ಕು ಬಿಡುತ್ತದೆಯೊ ಅಲ್ಲಿಗೆ ಐಶ್ವರ್ಯವಿದ್ದರೂ, ನಮ್ಮ ಬಾಳ ಸಂಗಾತಿ ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದರೂ ಅ ಜೀವನ ನರಕವಾಗಿ ಬಿಡುತ್ತದೆ, ಅಂತಹ ವಾತಾವರಣದಲ್ಲಿ ಇರಲು ಉಸಿರು ಕಟ್ಟುತ್ತದೆ.
ಯಾರೂ 'ನಿನ್ನ ಮೇಲೆ ನನಗೆ ಸಂಶಯವಿದೆ' ಎಂದು ಬಾಯಿ ಬಿಟ್ಟು ಹೇಳುವುದಿಲ್ಲ. ಆದರೆ ಅವರ ನಡುವಳಿಕೆ ನೋಡಿದರೆ ತಿಳಿಯಬಹುದು. ಅದರಲ್ಲೂ ಈ ಕೆಳಗಿನ ನಡುವಳಿಕೆ ತೋರಿಸಿದರೆ ಅವರಿಗೆ ನಿಮ್ಮ ಮೇಲೆ ಸಂಶಯವಿದೆ ಎಂದು ಅರ್ಥ.
ನಿಮ್ಮನ್ನು ಟ್ರ್ಯಾಕ್ ಮಾಡುವುದು: ಪದೇ ಪದೇ ಕಾಲ್ ಮಾಡುವುದು, ನಿಮ್ಮ ಪ್ರತಿಯೊಂದು ಚಲನವಲನ ಮೇಲೆ ಕಣ್ಣಿಟ್ಟಿರುವುದು ಮಾಡುತ್ತಿರುತ್ತಾರೆ. ಅದು ಅವರು ನಿಮ್ಮ ಮೇಲೆ ಇಟ್ಟ ಅತೀಯಾದ ಪ್ರೀತಿಯೆಂದು ನೀವು ಭಾವಿಸಿದರೆ ಅದು ಭ್ರಮೆ. ಅವರು ನಿಮ್ಮನ್ನು ಸಂಶಯಪಡುತ್ತಿದ್ದಾರೆ, ಆದ್ದರಿಂದ ಆ ರೀತಿ ವರ್ತಿಸುತ್ತಾರೆ. ಪ್ರೀತಿಯಲ್ಲಿ ಕಾಳಜಿ ಇರಬೇಕೆ ಹೊರತು, ಸಂಶಯ ಇರಬಾರದು. ಈ ರೀತಿ ಸಂಶಯ ಗುಣವಿದ್ದರೆ ಅವರು ನೆಮ್ಮದಿ ಕಳೆದುಕೊಳ್ಳುತ್ತರೆ, ನಿಮ್ಮ ನೆಮ್ಮದಿಯೂ ಹಾಳು ಮಾಡುತ್ತಾರೆ.
ಸ್ವತಂತ್ರವಿರುವುದಿಲ್ಲ: ನಿಮ್ಮ ವಿಷಯಗಳಿಗೆ ಮನ್ನಣೆ ಕೊಡುವುದಿಲ್ಲ, ಪ್ರತಿಯೊಂದು ವಿಷಯದಲ್ಲಿ ಅವರು ಬಯಸಿದಂತೆ ಇರಬೇಕೆಂದು ಬಯಸುತ್ತಾರೆ. ಈ ರೀತಿಯ ನಡುವಳಿಕೆ ತೋರಿಸುತ್ತಿದ್ದಾರೆ ಅಂದರೆ ಅವರು ನಿಮ್ಮನ್ನು ಸಂಶಯ ಪಡುತ್ತಿದ್ದಾರೆ ಎಂದು ಅರ್ಥ.
ನಿಮ್ಮನ್ನು ಇತರರಿಂದ ಪ್ರತ್ಯೇಕಿಸುತ್ತಾರೆ: ಅವರು ಜೊತೆ ಮಾತನಾಡ, ಅವರಿಗೆ ಕರೆ ಮಾಡಬೇಡ, ಸ್ನೇಹಿತರ ಸಹವಾಸ ಬಿಡು ಎಂದು ಹೇಳುತ್ತಾ ನಿಮ್ಮನ್ನು ಸದಾ ಅವರ ಬಳಿಯೇ ಇರುವಂತೆ ನೋಡಿಕೊಳ್ಳುತ್ತಾರೆ. ಈ ರೀತಿಯ ಗುಣವಿದ್ದರೆ ನಿಮ್ಮನ್ನು ಸಂಶಯ ಪಡುತ್ತಿದ್ದಾರೆ ಎಂದು ಅರ್ಥ. ನಿಮಗೆ ಸ್ವತಂತ್ರ ಎಂಬುದು ಇಲ್ಲದಾಗುತ್ತದೆ.
ಈ ಮೇಲಿನ ಲಕ್ಷಣಗಳು ಕಂಡು ಬಂದರೆ ಅದನ್ನು ಮೊದಲ ಹಂತದಲ್ಲಿಯೇ ಕಿತ್ತೊಗೆಯಬೇಕು. ಅದಕ್ಕಾಗಿ ಈ ಕೆಳಗಿನಂತೆ ಮಾಡಿ:
ಅವರ ಜೊತೆ ಇದರ ಬಗ್ಗೆ ನೇರವಾಗಿ ಮಾತನಾಡಿ: ನಾನು ನಿನ್ನ ಬಿಟ್ಟು ಬೇರೆ ಯಾರನ್ನೂ ಇಷ್ಟಪಡಲ್ಲ, ಸಂಶಯ ಪಡಬೇಕಾದ ಅಗತ್ಯವಿಲ್ಲ. ಸಂಶಯವಿದ್ದರೆ ನಮ್ಮ ಸಂಬಂಧ ಹಾಳಾಗುತ್ತದೆ, ಆದ್ದರಿಂದ ಸಂಶಯ ಬುದ್ಧಿ ಬಿಡಲು ಹೇಳಿ. ನೀವೂ ಅಷ್ಟೆ ಅವರಿಂದ ಯಾವುದೇ ವಿಷಯವನ್ನು ಬಚ್ಚಿಡಬೇಡಿ.
ಸಂಶಯ ಸುಮ್ಮನೆ ಬರುವುದಿಲ್ಲ. ಯಾವುದೋ ಒಂದು ಕಾರಣಕ್ಕೆ ಸಂಶಯ ಬಂದಿರುತ್ತದೆ. ಅವರ ಸಂಶಯವನ್ನು ಹೋಗಲಾಡಿಸಲು ಅವರನ್ನು ತುಂಬಾ ಪ್ರೀತಿಸಿ ಮತ್ತು ಅವರ ಜೊತೆ ಯಾವುದನ್ನು ಮರೆಮಾಚಲು ಹೋಗಬೇಡಿ, ಈ ರೀತಿ ಮಾಡಿದರೆ ನಿಮ್ಮ ನಡುವೆ ಪ್ರೀತಿ ಮರುಹುಟ್ಟುವುದು, ಸಂಶಯ ಸಾಯುವುದು.



Click it and Unblock the Notifications
