Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕುಟುಂಬಸ್ಥರೇ ನಮಗೆ ಅಪರಿಚಿತರಾಗದಿರಲಿ...

ಹಿಂದೆಯೆಲ್ಲಾ ಒಂದು ಮನೆ ಅಂದರೆ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ ಅವರ ಮಕ್ಕಳು ಹೀಗೆ 20-30 ಜನರು ಇರುವ ದೊಡ್ಡ ಕುಟುಂಬವಾಗಿತ್ತು. ಈಗ ಒಂದು ಮನೆಯಲ್ಲಿ ಗಂಡ-ಹೆಂಡತಿ ಅವರಿಗೆ ಎರಡು ಮಕ್ಕಳು ಅಥವಾ ಒಂದೇ ಒಂದು ಮಗು. ಎಷ್ಟೋ ಮಕ್ಕಳಿಗೆ ನಮ್ಮ ಸಂಬಂಧಿಕರು ಯಾರು ಎಂಬುದೇ ಗೊತ್ತಿರುವುದಿಲ್ಲ!
ಇನ್ನು ಆ ಪುಟ್ಟ ಕುಟುಂಬದಲ್ಲಿ ಸಂತೋಷವಾಗಿ ಇದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಒಂದೇ ಮನೆಯಲ್ಲಿ ಇದ್ದರೂ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಲು ಪುರುಸೊತ್ತು ಇರುವುದಿಲ್ಲ. ಶಿಫ್ಟ್ ವರ್ಕ್, ಕೆಲಸದ ಒತ್ತಡ, ಕೆಲಸದ ವಿಷಯದಲ್ಲಿ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ, ಇರುವ ಒಬ್ಬ ಮಗ ಅಥವಾ ಮಗಳು ಮನೆಯಿಂದ ವಿಧ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಹೋಗಿರುತ್ತಾನೆ/ಳೆ.
ಈ ಎಲ್ಲಾ ಕಾರಣಗಳಿಂದ ಎಲ್ಲೋ ಒಂದು ಕಡೆ ಫ್ಯಾಮಿಲಿ ಸೆಂಟಿಮೆಂಟ್ ಕಡಿಮೆಯಾಗುತ್ತಿದೆ ಎಂದು ಅನಿಸುತ್ತಿದೆ ಅಲ್ಲವೇ? ಇದೇ ಕಾರಣದಿಂದ ಎಷ್ಟೋ ಜನರಿಗೆ ಎಲ್ಲರು ಇದ್ದರೂ ತಾನು ಒಂಟಿ ಎಂದು ಅನಿಸುತ್ತಿರುತ್ತದೆ. ಕೆಲಸದ ಒತ್ತಡ ಅಥವಾ ಮತ್ಯಾವುದೋ ಒಂದು ಕಾರಣದಿಂದ ಕುಟುಂಬಸ್ಥರೇ ನಮಗೆ ಅಪರಿಚಿತರಾಗಬಾರದು ಎಂದು ಬಯಸುವುದಾದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿಬಹುದು.
ಫ್ಯಾಮಿಲಿ ಡಿನ್ನರ್: ಒಂದು ದಿನ ಅಂತ ನಿಗದಿ ಮಾಡಿ ಮನೆಗೆ ಎಲ್ಲರನ್ನು ಕರೆದು ಜೊತೆಯಲ್ಲಿ ಕುಳಿತು ಊಟ ಮಾಡಿ. ಈ ರೀತಿ ಮಾಡಿದರೆ ಮನೆಯವರ ನಡುವೆ ಸ್ನೇಹ ಸಂಬಂಧ ಜಾಸ್ತಿಯಾಗುತ್ತದೆ. ಇನ್ನು ಕೆಲ ಮನೆಗಳಲ್ಲಿಯಂತೂ ಅಪ್ಪ-ಅಮ್ಮ, ಮಕ್ಕಳು ಜೊತೆಯಲ್ಲಿ ಕೂತು ಊಟ ಮಾಡಿ ತುಂಬಾ ಕಾಲವಾಗಿರುತ್ತದೆ! ಈ ರೀತಿ ಇದ್ದರೆ ಪೋಷಕರು ಮತ್ತು ಮಕ್ಕಳ ನಡುವೆ ಅಂತರ ಬೆಳೆದು ಬಿಡುತ್ತದೆ. ಹಾಗೇ ಆಗಲು ಬಿಡಬಾರದು. ನಿಮ್ಮೆಲ್ಲಾ ಕೆಲಸದ ಒತ್ತಡ ಬದಿಗೊತ್ತಿ ವಾರದಲ್ಲಿ ಕನಿಷ್ಠ 2-3 ಬಾರಿಯಾದರೂ ಮನೆಯಲ್ಲಿ ಎಲ್ಲರು ಕುಳಿತು ಊಟ ಮಾಡಿ.
ಈ ರೀತಿ ಮಾಡಿದರೆ ಊಟ ಮಾಡುವಾಗ ಸಂತೋಷ ಇರುವುದು ಮಾತ್ರವಲ್ಲ ಆ ಸಮಯದಲ್ಲಿ ಮನೆಯವರ ಜೊತೆ ಹರಟೆ ಹೊಡೆಯುವುದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ ಮತ್ತು ಮನೆಯವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ, ಪರಸ್ಪರ ಅರ್ಥ ಮಾಡಿಕೊಂಡರೆ ಅಂತಹ ಸಂಸಾರದಲ್ಲಿ ಕಲಹಗಳು ಬರುವುದಿಲ್ಲ, ಚಿಕ್ಕ ಪುಟ್ಟ ಕಲಹ ಉಂಟಾದರೂ ಅದು ಬೇಗನೆ ಮರೆತು ಹೋಗುತ್ತದೆ, ಇದರಿಂದ ಸುಂದರ ಸಂಸಾರ ನಿಮ್ಮದಾಗುವುದು.
ಚಿಕ್ಕ ಮಕ್ಕಳಿದ್ದರೆ ಅವರ ಜೊತೆ ಆಟವಾಡಿ, ಇದರಿಂದ ನಿಮ್ಮ ಟೆನ್ಷನ್ ಕಡಿಮೆಯಾಗುತ್ತದೆ, ಅಲ್ಲದೆ ನಿಮ್ಮ ಮತ್ತು ಮಕ್ಕಳ ಮಕ್ಕಳ ನಡುವೆ ಬಾಂಧವ್ಯ ಹೆಚ್ಚಾಗುವುದು.
ಫ್ಯಾಮಿಲಿ ಔಟಿಂಗ್ : ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಔಟಿಂಗ್ ಹೋಗುವುದು, ವರ್ಷದಲ್ಲಿ ಒಮ್ಮೆ ಅಥವಾ ಎರಡು ಬಾರಿ ಪ್ರವಾಸಿತಾಣಗಳಿಗೆ ಹೋಗಿ ಬರುವುದು ಇವೆಲ್ಲಾ ಕುಟುಂಬದವರ ನಡುವೆ ಅನುಬಂಧವನ್ನು ಹೆಚ್ಚು ಮಾಡುತ್ತದೆ.
ಆಟ: ಸಮಯ ಸಿಕ್ಕಿದಾಗ ಮನೆಯವರೆಲ್ಲಾ ಜೊತೆಗೂಡಿ ನಿಮಗೆ ಇಷ್ಟವಾದ ಆಟ ಆಡುವುದು, ಬೀಚ್ ಸ್ವಲ್ಪ ಹತ್ತಿರದಲ್ಲಿದ್ದರೆ ಬೀಚ್ ಗೆ ಹೋಗುವುದು, ಅಪರೂಪಕ್ಕೆ ಟ್ರಕ್ಕಿಂಗ್ ಹೋಗುವುದು ಇತರ ಸಾಹಸ ಕ್ರೀಡೆಗಳನ್ನು ಆಡುವುದು ಮಾಡಿ. ಇದರಿಂದ ಮನೆಯವರ ನಡುವೆ ಆತ್ಮೀಯತೆ ಹೆಚ್ಚಾಗುವುದು. ಇನ್ನೊಂದು ಮುಖ್ಯವಾದ ವಿಷಯವೆಂದರೆ ಮನೆಯವರ ಜೊತೆ ಕಳೆಯುವ ಸಮಯದಲ್ಲಿ ನಿಮ್ಮ ಕೆಲಸದ ಬಗ್ಗೆ ಯೋಚಿಸುವುದಾಗಲಿ ಅದರ ಬಗ್ಗೆ ಮಾತನಾಡುವುದಾಗಲಿ ಮಾಡಬಾರದು. ಎಲ್ಲಾ ಒತ್ತಡಗಳನ್ನು ಬಿಟ್ಟು ಕ್ಷಣ ಕಾಲ ಮರೆತು ಮನೆಯವರ ಜೊತೆ ಕಳೆದು ನೋಡಿ, ನಿಮಗೂ ಹೊಸ ಚೈತನ್ಯ ಬರುತ್ತದೆ ಮನೆಯವರ ನಡುವೆ ಸಂಬಂಧ ತುಂಬಾ ಮಧುರವಾಗಿರುತ್ತದೆ.



Click it and Unblock the Notifications











