Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಮ್ಮನ ದಿನಕ್ಕೊಂದು ಮಗುವಿನ ಲಹರಿ

ಚಂದನ ಕಂಪ ಲಾಲಿ... ಚಂದದ ಹೂವೆ ಲಾಲಿ ಲಾಲಿ...ಜೋ...ಜೋ...
ಹ..ಹ್ಹ...ಹ್ಹ.... ಎಷ್ಟು ಚಂದ ಪದ್ಯ ಹೇಳ್ತೀಯಮ್ಮಾ ನೀನು... ಮೊದಲ ಸಲಾ ನಾನು ನಿನ್ನ ಸ್ವರ ಕೇಳಿದ್ದು... ಆದರೆ ಅದಕ್ಕೂ ಮೊದಲು ಆ ನರ್ಸಮ್ಮ ನನ್ನ ನಿನ್ನ ಕೈಗೆ ಕೊಟ್ಟಾಗ ನೀನು ಮೆತ್ತಗೆ ನನ್ನನ್ನು ಎತ್ತಿ ನಿನ್ನ ಕೆನ್ನೆಗೆ ಒತ್ತಿಕೊಂಡು ಅರೆಕ್ಷಣ ಕಣ್ಣು ಮುಚ್ಚಿಕೊಂಡಾಗ ನಂಗೆ ಎಷ್ಟು ಖುಷಿಯಾಯ್ತು ಗೊತ್ತೇನಮ್ಮಾ...
ಮತ್ತೆ ನನ್ನ ಆ ನರ್ಸಮ್ಮನ ಕೈಗೆ ಕೊಡ್ಬೇಡಮ್ಮಾ... ಅವಳು ಬಿಸಿ ಬಿಸಿ ನೀರು ಮೈಗೆ ಸುರೀತಾಳೆ. ನನ್ನ ಮೈಯೆಲ್ಲಾ ಮತ್ತಷ್ಟು ಕೆಂಪು ಕೆಂಪಗಾಗುವ ಹಾಗೆ. ನಾನು ಎಷ್ಟು ಕೂಗಿದರೂ ಅವಳು ನಿಲ್ಲಿಸೋದೇ ಇಲ್ಲ. ನಾನು ನಿನ್ನ ಹತ್ರವೇ ಮಲಕ್ಕೊಂಡಿರ್ತೀನಿ. ನಿನ್ನ ಮೈಗೆ ಮೈ ತಾಕಿಸಿಕೊಂಡು ಬೆಚ್ಚಗೆ ಮಲಕ್ಕೊಂಡಿದ್ರೆ ನಂಗೆ ಬೇಗ ನಿದ್ರೆ ಬರುತ್ತೆ. ಚಳಿಯೇ ಆಗಲ್ಲ.
ಛೀ... ನಂಗೆ ಜಾಸ್ತಿ ಪೌಡರು ಹಾಕ್ಬೇಡಮ್ಮಾ... ನಿನ್ನೆ ಜೋರು ಆಕ್ಷಿ ಮಾಡಿದ್ದು ನಿಂಗೆ ಗೊತ್ತಿಲ್ವಾ? ಮತ್ತೇ.. ನಂಗೆ ಚಿಕ್ಕ ದೃಷ್ಟಿ ಬೊಟ್ಟು ಹಾಕಿದ್ರೆ ಸಾಕು. ದೊಡ್ಡಕೆ ಹಾಕಿದ್ರೆ ನಾನು ಮುಖಕ್ಕೆಲ್ಲಾ ಮೆತ್ತಿಕೊಳ್ತೀನಲ್ವಾ ಅದಕ್ಕೆ. ಆಮೇಲೆ.. ಜಾಸ್ತಿ ಸಾಂಬ್ರಾಣಿ ಹೊಗೆ ಹಾಕ್ಬೇಡ. ಉಸಿರು ಕಟ್ಟಿದ ಹಾಗೆ ಆಗುತ್ತೆ. ಆಗ ನಾನು ಜೋರು ಅಳ್ತೀನಿ.... ನಾನು ಅತ್ತರೆ ನಿಂಗೆ ಬೇಜಾರಾಗುತ್ತಲ್ಲಾ...
ಮತ್ತೆ ನಂಗೆ ನಿದ್ದೆ ಬಂದಾಗ ನೀನು ಮೆಲ್ಲಗೆ ಕೆನ್ನೆ ಮೇಲೆ ಬೆರಳಾಡಿಸೋದು ನಂಗೆ ಗೊತ್ತಾಗುತ್ತೆ. ಆಗ ನಂಗೆ ಜೋರು ನಗು ಬರುತ್ತೆ. ಆದ್ರೆ ನಾನು ಕಣ್ಣು ಬಿಟ್ರೆ ನೀನು ಹಾಗೆ ಮಾಡೋದನ್ನು ನಿಲ್ಲಿಸುತ್ತಿ. ಅದಕ್ಕೆ ನಾನು ನಿದ್ದೆ ಬಂದ ಹಾಗೆ ಮಾಡ್ತೀನಿ.. ಹ್ಹ...ಹ್ಹ...
ಆದ್ರೆ ನಂಗೆ ನಿದ್ದೆ ಬಂದಾಗ ಮೆಲ್ಲಗೆ ನೀನು ನನ್ನ ಒದ್ದೆ ತಲೆಗೆ ಮುಂಡಾಸು ಕಟ್ಲಿಕೆ ನೋಡ್ತೀಯಲ್ಲಾ... ನಂಗೆ ಅದು ಇಷ್ಟಾನೇ ಆಗಲ್ಲ.. ಕೋಪ ಬರುತ್ತೆ.
ಆದ್ರೂ ನಾನು ಏಳಲ್ಲ.. ಯಾಕೆಂದ್ರೆ ನಾನು ಎದ್ರೆ ನಿಂಗೆ ಊಟ ಮಾಡ್ಲಿಕೆ, ನಿದ್ದೆ ಮಾಡ್ಲಿಕೂ ಸಮಯ ಇರೋದಿಲ್ಲ. ನನ್ನಿಂದಾಗಿ ನಿಂಗೆ ಈಗ ತುಂಬಾ ಹಸಿವಾಗ್ತಿರುತ್ತಲ್ಲಾ? ರಾತ್ರಿಯೂ ನಾನು ಆಗಾಗ ಎದ್ದು ನಿಂಗೆ ನಿದ್ದೆಯಿಲ್ಲದ ಹಾಗೆ ಮಾಡ್ತೀನಿ.
ನಾನು ನಿದ್ದೆ ಮಾಡಿದಾಗಲೇ ನೀನು ಇಷ್ಟೂ ಕೆಲಸ ಮಾಡಿಕೊಳ್ಬೇಕಲ್ಲಾ? ಅದಕ್ಕೆ ನಾನು ಕಣ್ಣು ಮುಚ್ಚಿ ಮಲಕ್ಕೊಳ್ತೀನಿ. ನಿಂಗೆ ತೊಂದ್ರೆ ಕೊಡಲ್ಲ. ನೀನು ಮಲಕ್ಕೊಮ್ಮಾ... ನಾನು ಮಲಕ್ಕೊಂಡಿದ್ದೀನಿ.



Click it and Unblock the Notifications
