Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಣ್ಣ ಪ್ರಾಯದಲ್ಲಿ ಮದುವೆ: ಜೀವನ ಅತಂತ್ರ

ಈ ಮದುವೆಯೆನ್ನುವುದು ಮಕ್ಕಳಾಟಿಕೆಯಲ್ಲ. ಮದುವೆಯಾಗುವಾಗ ಇಬ್ಬರಲ್ಲೂ ಪಕ್ವತೆ ಇದ್ದರೆ ಮಾತ್ರ ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯ. ಆದರೆ ಪ್ರೀತಿ, ಪ್ರೇಮದ ಗುಂಗಿನಲ್ಲಿ ಸಣ್ಣ ಪ್ರಾಯದಲ್ಲಿಯೆ ಮದುವೆಯಾದರೆ ಪಕ್ವತೆ ಇಲ್ಲದೆ ಜೀವನ ನಡೆಸಲು ಕಷ್ಟವಾಗುವುದು.
ಜೀವನದಲ್ಲಿ ಬರುವ ಕಷ್ಟಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವಿರುವುದಿಲ್ಲ, ಆಗಲೇ ಸಮಸ್ಯೆಗಳು ಪ್ರಾರಂಭವಾಗುವುದು. ಬೇಗನೆ ಮದುವೆಯಾದರೆ ಮುಖ್ಯವಾಗಿ ಕಾಣಿಸಿಕೊಳ್ಳುವ ತೊಂದರೆಗಳೇನು ಎಂದು ತಿಳಿಯಲು ಮುಂದೆ ಓದಿ.
1. ಚಿಕ್ಕ ಪ್ರಾಯದಲ್ಲಿ ಮದುವೆಯಾದರೆ ಅವರಿಗೆ ಜೀವನದಲ್ಲಿ ಬರುವ ಸಣ್ಣ-ಪುಟ್ಟ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವಿರುವುದಿಲ್ಲ.
2. ಸಣ್ಣ ಪ್ರಾಯದಲ್ಲಿ ಮದುವೆಯಾದರೆ ಯೌವನದ ಸಂತೋಷ, ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಿಲ್ಲ. ಮದುವೆಯಾದ ಮೇಲೆ ಜವಬ್ದಾರಿ ಹೆಚ್ಚು ಬರುವುದರಿಂದ ಜೀವನದಲ್ಲಿ ಸ್ವಾರಸ್ಯ ಅನ್ನುವುದು ಕಡಿಮೆಯಾಗುವುದು.
3. ಚಿಕ್ಕ ಪ್ರಾಯದಲ್ಲಿ ತಾಯಿ ಆದರೆ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚು.
4. ಪರಸ್ಪರ ಅರ್ಥೈಹಿಸಿಕೊಂಡು ಬಾಳುವಷ್ಟು ಪಕ್ವತೆ ಬೆಳೆದಿರುವುದಿಲ್ಲವಾದ್ದರಿಂದ ಚಿಕ್ಕ ಪ್ರಾಯದಲ್ಲಿ ಮದುವೆಯಾದವರು ವಿಚ್ಛೇದನ ತೆಗೆದು ಕೊಳ್ಳುವ ಸಾಧ್ಯತೆ ಹೆಚ್ಚು, ಒಂದು ವೇಳೆ ಜೊತೆಯಲ್ಲಿಯೆ ಬಾಳಿದರೂ ಸಂತೋಷದಿಂದ ಬಾಳುವುದು ತುಂಬಾ ವಿರಳ.
5. ಬೇಗನೆ ಮದುವೆಯಾಗುವುದರಿಮದ ಹೆಣ್ಣು ಮಕ್ಕಳಿಗೆ ಉನ್ನತ ವಿಧ್ಯಾಭ್ಯಾಸ ಪಡೆಯಲು ಸಾಧ್ಯವಾಗುವುದಿಲ್ಲ.
6. ಬೇಗನೆ ಮದುವೆಯಾದವರಲ್ಲಿ ಹೆಚ್ಚಿನ ಹುಡುಗರು ಸ್ವಲ್ಪ ವರ್ಷದ ಬಳಕ ಮತ್ತೊಂದು ಸಂಬಂಧದತ್ತ ಆಕರ್ಷಿತರಾಗುತ್ತಾರೆ.
ಬೇಗನೆ ಮದುವೆಯಾಗಿ ಜೀವನ ಅತಂತ್ರವಾಗುವ ಬದಲು, ಗಂಡು- ಹೆಣ್ಣಿಗೆ ಜವಬ್ದಾರಿ ಹೊರುವ ಪಕ್ವತೆ ಬಂದ ಮೇಲೆ ಮದುವೆಯಾಗುವುದು ಒಳ್ಳೆಯದು.



Click it and Unblock the Notifications
