Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮೇಕಪ್ ಗಿಂತ ನೈಸರ್ಗಿಕ ಚೆಲುವೆ ಪುರುಷರಿಗೆ ಇಷ್ಟ!

ಮೇಕಪ್ ವಿಷಯದಲ್ಲಿ ಅನೇಕ ಹುಡುಗಿಯರು ತಪ್ಪಾಗಿ ಅರ್ಥೈಹಿಸಿರುವುದು ಮೇಕಪ್ ಮಾಡಿದರೆ ಪುರುಷರಿಗೆ ತುಂಬಾ ಇಷ್ಟವಾಗುತ್ತದೆ. ಗಾಢವಾಗಿ ಮೇಕಪ್ ಮಾಡಿದಷ್ಟು ತನ್ನ ಗೆಳಯ/ ಗಂಡ ಹೊಗಳುತ್ತಾನೆ. ಆದರೆ ಮೇಕಪ್ ಬಗ್ಗೆ ಪುರುಷರ ಅಭಿಪ್ರಾಯವನ್ನು ತುಂಬಾ ಕೂಲಂಕಷವಾಗಿ ತಿಳಿದು ನೋಡಿ. ಮೇಕಪ್ ಗಿಂತ ನೈಸರ್ಗಿಕ ಚೆಲುವೇ ಅವರಿಗೆ ಇಷ್ಟ.
ಹಿತಮಿತವಾದ ಮೇಕಪ್ ಸೌಂದರ್ಯ ಹೆಚ್ಚಿಸುವುದು. ಆದರೆ ಮಿತಿ ಮೀರಿದರೆ ಅಲ್ಲ ನೈಜತೆ ಎಂಬುವುದು ಮಾಯವಾಗಿ ಕೃತಕತೆ ತುಂಬಿ ತುಳುಕುತ್ತಿರುತ್ತದೆ. ಹೆಣ್ಣು ಗಾಢವಾದ ಮೇಕಪ್ ಮಾಡುವಂತೆ ಪ್ರೇರೇಪಿಸುವುದು ಈ ಪುರುಷರೆ. ಗಮನಿಸಿ ನಿಮ್ಮ ಸ್ನೇಹಿತೆ ಅಥವಾ ಕಲೀಗ್ಸ್ ತುಂಬಾ ಮೇಕಪ್ ಮಾಡುವವರಾದರೆ ಎಲ್ಲರೂ ಅವರನ್ನು ತುಂಬಾ ಚೆಂದ ಕಾಣಿಸುತ್ತಿದ್ದೀರಿ ಎಂದು ಹೊಗಳಿ ಹೊನ್ನ ಶೂಲಕ್ಕೇರಿಸಿರುತ್ತಾರೆ.
ಮಾರನೆ ದಿನ ಅವರ ಮೇಕಪ್ ಮತ್ತಷ್ಟು ಜಾಸ್ತಿಯಗುವುದೇ ಹೊರತು ಕಡಿಮೆಯಾಗುವುದಿಲ್ಲ. ಆದರೆ ಅದೇ ಗೆಳಯರ ಬಳಗ ಗುಂಪು ಸೇರಿ ಮಾತನಾಡುವಾಗ ಅತಿಯಾಗಿ ಮೇಕಪ್ ಮಾಡುವವರಿಗೆ ಒಮ್ಮೆಯೂ ಸುಂದರಿ ಎಂಬ ಪಟ್ಟ ಕೊಡುವುದಿಲ್ಲ ಅದರ ಬದಲು ಮೇಕಪ್ ರಾಣಿ, ಮೇಕಪ್ ಇಲ್ಲ ಅಂದರೆ ಕಂಡರೆ ಗುರುತು ಸಿಗುವುದಿಲ್ಲ ಎಂದು ಲೇವಡಿ ಮಾಡುತ್ತಾರೆ ಅಷ್ಟೆ.
ಒಬ್ಬ ವ್ಯಕ್ತಿಯ ಚೆಲುವು ಇರುವುದು ಅವರ ನಡುವಳಿಕೆಯಲ್ಲಿಯೆ ಹೊರತು ಮೇಕಪ್ ನಲ್ಲಿ ಅಲ್ಲ.



Click it and Unblock the Notifications
