Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Year Ender 2023: ಈ ವರ್ಷ ಸಿಕ್ಕಾಪಟ್ಟೆ ವೈರಲ್ ಆದ 5 ವಿಚಿತ್ರ ಫುಡ್ ಕಾಂಬಿನೇಷನ್
ಕೆಲವೊಂದು ಫುಡ್ ಕಾಂಬಿನೇಷನ್ ತುಂಬಾನೇ ವಿಚಿತ್ರವಾಗಿರುತ್ತದೆ, ಆ ಕಾಂಬಿನೇಷನ್ ಕೇಳುವಾಗಲೇ ಹೀಗೂ ಇರುತ್ತಾ ಎಂದು ಅಚ್ಚರಿ ಉಂಟು ಮಾಡುವುದು, ಈ ವರ್ಷ ಕೆಲವೊಂದು ವಿಚಿತ್ರ ಫುಡ್ ಕಾಂಬಿನೇಷನ್‌ಗಳು ವೈರಲ್ ಆಗಿತ್ತು, ಆ ಫುಡ್ ಕಾಂಬಿನೇಷನ್ ಕೇಳುವಾಗ ಹೀಗೂ ತಿನ್ನಬಹುದಾ ಎಂದು ಅನಿಸದೆ ಇರಲ್ಲ. 2023ರಲ್ಲಿ ವೈರಲ್ ಆದ ವಿಚಿತ್ರ ಫುಡ್ ಕಾಂಬಿನೇಷನ್‌ಗಳು ಇವೇ ನೋಡಿ:

ಟೊಮೆಟೊ ಐಸ್ ಕ್ರೀಮ್
ಈ ವೀಡಿಯೋ ಜೂನ್ 2023ರಲ್ಲಿ ತುಂಬಾನೇ ಸೆಳೆದಿತ್ತು, ಬೀದಿ ಬದಿಯ ವ್ಯಾಪಾರಿಯೊಬ್ಬರು ತುಂಬಾನೇ ವಿಭಿನ್ನ ಐಸ್‌ಕ್ರೀಮ್ ಮಾಡುತ್ತಿದ್ದರು. ಟೊಮೆಟೊವ್ನು ಕತ್ತರಿಸಿ, ಅದನ್ನು ಐಸ್ ಟ್ರೇಗೆ ಹಾಕಿ, ಹಾಲು, ಕಾರಮೆಲ್ ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ, ನಂತರ ಕತ್ತರಿಸಿದ ಟೊಮೆಟೊವನ್ನು ಟಾಪ್‌ನಲ್ಲಿ ಹಾಕಿ , ಕಾರಮಲ್ ಸಾಸ್ ಹಾಕಿ ಸರ್ವ್ ಮಾಡುತ್ತಿದ್ದರು.
ಒರೆಯೋ ಪಕೋಡಾ
ಇದು ಕೂಡ ತುಂಬಾನೇ ವಿಚಿತ್ರ ಕಾಂಬಿನೇಷನ್ ಅಲ್ವಾ? ಒರೆಯೋ, ವಾಕೋಲೆಟ್,
ಕ್ರೀಮ್‌ಕುಕ್ಕೀಸ್ ಅನ್ನು ಕಡ್ಲೆ ಹಿಟ್ಟಿನಲ್ಲಿ ಅದ್ದಿ ಪಕೋಡಾ ಮಾಡುವುದನ್ನು
ಊಹಿಸಿದರನೇ ಸಕತ್ ಕ್ರೇಝಿ ಅನಿಸುತ್ತೆ, ಆದರೆ ಇಂಥದ್ದೊಂದು ಪ್ರಯತ್ನ ಈ ವರ್ಷ
ನಡೆದಿದೆ.
ಮೊಸರು ಜೊತೆಗೆ ಗುಲಾಬ್ ಜಾಮೂನು
ಎತ್ತಣಿಂದೆತ್ತ ಸಂಬಂಧ ಅಲ್ವೇ? ಎಲ್ಲಿಯ ಮೊಸರು-ಎಲ್ಲಿಯ ಜಾಮೂನು ಆದರೆ ಇವೆರಡರ
ಕಾಂಬಿನೇಷನ್ ಹೇಗಿರಬೇಡ. ಈ ರೀತಿಯ ಫುಡ್ ಕಾಂಬಿನೇಷನ್ ಜನ ಇಷ್ಟಪಟ್ಟು
ಸವಿದಿದ್ದರು. ಒಂದು ಪ್ಲೇಟ್‌ಗೆ 50 ರುಪಾಯಿ ಕೊಟ್ಟು ಜನ ಈ ಕಾಂಬನೇಷನ್
ಸವಿದಿದ್ದಾರೆ, ನೀವು ಮನೆಯಲ್ಲಿಯೇ ಟ್ರೈ ಮಾಡಿ... ನಂತರ ಟೇಸ್ಟ್ ಹೇಗಿತ್ತು ಅಂತ
ತಿಳಿಸಿ..
ತಂದೂರಿ ಚಿಕನ್ ಐಸ್‌ಕ್ರೀಮ್
ಐಸ್‌ಕ್ರೀಮ್ ತಂದೂರಿ ಚಿಕನ್ ಸಿಕ್ಕರೆ ಹೇಗಿರಬೇಡ, ಆದರೆ ಅಂಥ ಫುಡ್ ಕೂಡ ಈ
ವರ್ಷದಲ್ಲಿ ಟ್ರೈ ಮಾಡಲಾಗಿದೆ. ಐಸ್‌ಕ್ರೀಮ್ ತಿನ್ನುವಾಗ ಚಾಕೋಲೆಟ್ ಸಿಗುವಾಗ
ಖುಷಿಯಾಗುತ್ತೆ, ಆದರೆ ಐಸ್‌ಕ್ರೀಮ್ ಸಿಗುವಾಗ ತಂದೂರಿ ಚಿಕನ್ ಸಿಕ್ಕರೆ?
ಮ್ಯಾಂಗೋ ಪಾನಿಪುರಿ
ಪಾನಿಪುರಿ ಟೇಸ್ಟ್ ಮಾಡಿರುತ್ತೀರಿ, ಆದರೆ ಮ್ಯಾಂಗೋ ಪಾನಿಪುರಿ ಟೇಸ್ಟ್
ಮಾಡಿದ್ದೀರಾ? ಮ್ಯಾಂಗೋಪಾನಿಪುರಿ ಈ ವರ್ಷ ತುಂಬಾನೇ ವೈರಲ್ ಆಗಿತ್ತು. ಪಾನಿಪುರಿ
ರಸದ ಜೊತೆಗೆ ಮಾವಿನ ರಸ ಕೂಡ ಹಾಕಿ ನೀಡುತ್ತಿದ್ದರು. ಈ ವೀಡಿಯೋ ತುಂಬಾ ವೈರಲ್
ಆಗಿತ್ತು.



Click it and Unblock the Notifications
