Latest Updates
-
ವಿಶ್ವ ಮಧುಮೇಹ ದಿನ: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ₹100ರೊಳಗೆ ಸಿಗುವ ಬೆಸ್ಟ್ ಡಯಟ್ ಟಿಪ್ಸ್! -
ದೆಹಲಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆಯಾ? ವಾಟ್ಸಾಪ್ ಸುಳ್ಳು ಸುದ್ದಿಗಳ ಹಿಂದಿನ ಸತ್ಯ ಇಲ್ಲಿದೆ! -
ತಮಿಳುನಾಡಿನಲ್ಲಿ ಮಳೆ ಅಬ್ಬರ: ಕರೆಂಟ್ ಇಲ್ಲದಿದ್ದರೂ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ವರ್ಕೌಟ್ ಟಿಪ್ಸ್! -
ಹಬ್ಬದ ಫೋಟೋ ಶೇರ್ ಮಾಡ್ತಿದ್ದೀರಾ? ಸಂಬಂಧ ಹಾಳಾಗದಂತೆ ಪ್ರೈವಸಿ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಎಫೆಕ್ಟ್: ಗಂಟಲು ಕೆರೆತ, ಕೆಮ್ಮು ತಡೆಯಲು ಇಂದೇ ಈ ಆರೋಗ್ಯಕರ ಆಹಾರಗಳನ್ನು ಟಿಫಿನ್ನಲ್ಲಿ ಪ್ಯಾಕ್ ಮಾಡಿ! -
ಬಿಗ್ ಬಾಸ್ ಕನ್ನಡ 13: 10ನೇ ವಾರದ ನಾಮಿನೇಷನ್ ಶುರು, ಈ ಬಾರಿ ಯಾರು ಸೇಫ್? ವೋಟ್ ಮಾಡುವುದು ಹೇಗೆ? -
ಛತ್ ಪೂಜೆ 2026: ದೀರ್ಘ ಉಪವಾಸದ ನಡುವೆಯೂ ಆರೋಗ್ಯವಾಗಿರಲು ಈ ಸರಳ ಫಿಟ್ನೆಸ್ ಟಿಪ್ಸ್ ಫಾಲೋ ಮಾಡಿ! -
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್ -
ಹಬ್ಬದ ಸಂಭ್ರಮದಲ್ಲಿ ಬೀದಿಬದಿ ಆಹಾರ ಸೇವಿಸುವ ಮುನ್ನ ಎಚ್ಚರ: ಆರೋಗ್ಯ ಸುರಕ್ಷತೆಗೆ ಇಲ್ಲಿದೆ 5 ಸರಳ ಸೂತ್ರಗಳು -
ಬಿಗ್ ಬಾಸ್ ಕನ್ನಡ 13: ಈ ವಾರ ಯಾರೂ ಎಲಿಮಿನೇಟ್ ಇಲ್ಲ! ಕಿಚ್ಚ ಸುದೀಪ್ ನೀಡಿದ ಅಚ್ಚರಿಯ ಟ್ವಿಸ್ಟ್ ಏನು?
Kayi Holige recipe: ಯುಗಾದಿ ಸ್ಪೆಷಲ್: ಕಾಯಿ ಹೋಳಿಗೆ ರೆಸಿಪಿ
ಹೊಸ ಸಂತ್ಸರದ ನಾಂದಿಯಾಗಿ ಯುಗಾದಿ ಬರುತ್ತಿದೆ. ಏಪ್ರಿಲ್ 2ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುವುದು. ಯುಗಾದಿಗೆ ಬೇವು-ಬೆಲ್ಲ,ಯುಗಾದಿ ಪಚಡಿ ಜೊತೆಗೆ ಹೋಳಿಗೆ ಕೂಡ ಮಾಡಲಾಗುವುದು. ಅನೇಕ ಬಗೆಯ ಹೋಳಿಗೆ ಮಾಡಬಹುದು. ನಾವಿಲ್ಲ ಯುಗಾದಿ ಸ್ಪೆಷಲ್ ಆಗಿ ಕಾಯಿ ಹೋಳಿಗೆ ರೆಸಿಪಿಯನ್ನು ನೀಡಿದ್ದೇವೆ ನೋಡಿ:

Recipe By: Reena TK
Recipe Type: sweet
Serves: 5
-
ಬೇಕಾಗುವ ಸಾಮಗ್ರಿ
ಚಿರೋಟಿ ಅಥವಾ ಸೂಜಿ ರವೆ 1 ಕಪ್
ಮೈದಾ 1/2 ಕಪ್
ಅರಿಶಿಣ ಪುಡಿ 1/4 ಚಮಚ
ನೀರು 1 1/4 ಕಪ್
ತುರಿದ ತೆಂಗಿನಕಾಯಿ 1 ಬೌಲ್
ಬೆಲ್ಲ 1 ಕಪ್
ಏಲಕ್ಕಿ ಪುಡಿ 1/2 ಚಮಚ
ಎಣ್ಣೆ 1 ಕಪ್
ಪ್ಲಾಸ್ಟಿಕ್ ಶೀಟ್
-
ಮಾಡುವುದು ಹೇಗೆ?
* ಒಂದು ದೊಡ್ಡ ಬೌಲ್ಗೆ ಸೂಜಿ ರವೆ ಹಾಕಿ.
* ನಂತರ ಮೈದಾ ಹಾಗೂ ಅರಿಶಿಣ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* 2 ಚಮಚ ಎಣ್ಣೆ ಹಾಕಿ
* ನಂತರ ಮುಕ್ಕಾಲು ಕಪ್ ನೀರು ತೆಗೆದುಕೊಂಡು ಸ್ವಲ್ಪ-ಸ್ವಲ್ಪ ಸೇರಿಸುತ್ತಾ ಮಿಕ್ಸ್ ಮಾಡಿ.
ಒಮ್ಮೆಲೇ ಹಾಕಿದರೆ ನೀರು ಅಧಿಕವಾಗುವ ಸಾಧ್ಯತೆ ಇದೆ. ಆದ್ದರಿಂದ ಸ್ವಲ್ಪ-ಸ್ವಲ್ಪವಾಗಿ ಸೇರಿಸಬೇಕು.
* ನಂತರ 2 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ
* ಮತ್ತೆ 4 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ.
* ನಂತರ ಬೌಲ್ನ ಮುಚ್ಚಿ 5 ನಿಮಿಷ ಬಿಡಿ.
* ಈಗ ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿ ಇಡಿ. ನಿಮಗೆ ತೆಂಗಿನ ತುರಿ ಬಾಯಿಗೆ ಸಿಗಬಾರದು ಎಂದಾದರೆ ಸ್ವಲ್ಪ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಿ, ಆದರೆ ರುಬ್ಬಿದ ಮಿಶ್ರಣ ನೀರಾಗಿರಬಾರದು.
* ಈಗ ಬೆಲ್ಲದ ಪಾಕ ತಯಾರಿಸಿ, ಬೆಲ್ಲದ ಪಾಕ ಗಟ್ಟಿಯಾಗುತ್ತಾ ಬರುವಾಗ ಅದಕ್ಕೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.
* ಈಗ ಮೈದಾ ರವೆ ಮಿಶ್ರಣದಿಂದ ಚಪಾತಿಗೆ ಉಂಡೆ ಕಟ್ಟಿದಂತೆ ಕಟ್ಟಿ.
* ಒಂದು ಪ್ಲೇಟ್ ಅಥವಾ ಚಪಾತಿ ಮಣೆ ಮೇಲೆ ಪ್ಲಾಸ್ಟಿಕ್ ಹಾಕಿ ಎಣ್ಣೆ ಸವರಿ ಮೈದಾ ಮಿಶ್ರಣ ಲಟ್ಟಿಸಿ, ಮಧ್ಯದಲ್ಲಿ ಕೊಬ್ಬರಿ-ಬೆಲ್ಲ ಮಿಶ್ರಣ ಹಾಕಿ ಮತ್ತೆ ಉಂಡೆ ಕಟ್ಟಿ ಲಟ್ಟಿಸಿ.
* ಈಗ ದೋಸೆ ತವಾ ಉರಿ ಮೇಲೆ ಇಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ ಎರಡು ಬದಿ ಬೇಯಿಸಿದರೆ ಕಾಯಿ ಹೋಳಿಗೆ ರೆಡಿ.
ರೆಡಿಯಾದ ಕಾಯಿ ಹೋಳಿಗೆಯನ್ನು ಬಿಸಿ ತುಪ್ಪದ ಜೊತೆ ಸವಿಯಿರಿ.
- * ನೀವು ಎಷ್ಟು ಚೆನ್ನಾಗಿ ಕಲೆಸುತ್ತೀರಾ ಅಷ್ಟು ಮೃದುವಾಗಿರುತ್ತೆ, * ನೀವು ಬೆಲ್ಲ-ಕಾಯಿ ಮಿಶ್ರಣವನ್ನು ಮಧ್ಯದಲ್ಲಿ ಹಾಕಿ ತಟ್ಟಿ * ಹೋಳಿಗೆ ಸುತ್ತ ತೆಳುವಾಗಿರಲಿ, ಮಂದವಾಗಿದ್ದರೆ ಮಧ್ಯದಲ್ಲಿ ಸೀದು ಹೋಗುವುದು
ಮಾಡುವುದು ಹೇಗೆ?
* ಒಂದು ದೊಡ್ಡ ಬೌಲ್ಗೆ ಸೂಜಿ ರವೆ ಹಾಕಿ.
* ನಂತರ ಮೈದಾ ಹಾಗೂ ಅರಿಶಿಣ ಪುಡಿ ಹಾಕಿ ಚೆನ್ನಾಗಿ ಮಿಕ್ಸ್
ಮಾಡಿ.

* ನಂತರ ಮುಕ್ಕಾಲು ಕಪ್ ನೀರು ತೆಗೆದುಕೊಂಡು ಸ್ವಲ್ಪ-ಸ್ವಲ್ಪ ಸೇರಿಸುತ್ತಾ ಮಿಕ್ಸ್ ಮಾಡಿ.

* ನಂತರ 2 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ
* ಮತ್ತೆ 4 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ.
* ನಂತರ ಬೌಲ್ನ ಮುಚ್ಚಿ 5 ನಿಮಿಷ ಬಿಡಿ.
* ಈಗ ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿ ಇಡಿ. ನಿಮಗೆ ತೆಂಗಿನ ತುರಿ
ಬಾಯಿಗೆ ಸಿಗಬಾರದು ಎಂದಾದರೆ ಸ್ವಲ್ಪ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಿ, ಆದರೆ
ರುಬ್ಬಿದ ಮಿಶ್ರಣ ನೀರಾಗಿರಬಾರದು.
* ಈಗ ಬೆಲ್ಲದ ಪಾಕ ತಯಾರಿಸಿ, ಬೆಲ್ಲದ ಪಾಕ ಗಟ್ಟಿಯಾಗುತ್ತಾ ಬರುವಾಗ ಅದಕ್ಕೆ
ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.


* ಈಗ ಮೈದಾ ರವೆ ಮಿಶ್ರಣದಿಂದ ಚಪಾತಿಗೆ ಉಂಡೆ ಕಟ್ಟಿದಂತೆ
ಕಟ್ಟಿ.
* ಒಂದು ಪ್ಲೇಟ್ ಅಥವಾ ಚಪಾತಿ ಮಣೆ ಮೇಲೆ ಪ್ಲಾಸ್ಟಿಕ್ ಹಾಕಿ ಎಣ್ಣೆ ಸವರಿ ಮೈದಾ
ಮಿಶ್ರಣ ಲಟ್ಟಿಸಿ, ಮಧ್ಯದಲ್ಲಿ ಕೊಬ್ಬರಿ-ಬೆಲ್ಲ ಮಿಶ್ರಣ ಹಾಕಿ ಮತ್ತೆ ಉಂಡೆ
ಕಟ್ಟಿ ಲಟ್ಟಿಸಿ.


* ಈಗ ದೋಸೆ ತವಾ ಉರಿ ಮೇಲೆ ಇಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ ಎರಡು ಬದಿ
ಬೇಯಿಸಿದರೆ ಕಾಯಿ ಹೋಳಿಗೆ ರೆಡಿ.

ರೆಡಿಯಾದ ಕಾಯಿ ಹೋಳಿಗೆಯನ್ನು ಬಿಸಿ ತುಪ್ಪದ ಜೊತೆ ಸವಿಯಿರಿ.



Click it and Unblock the Notifications
