Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಇಡ್ಲಿ, ದೋಸೆಗೆ ಹೇಳಿ ಮಾಡಿಸಿದ ರುಚಿ! ಕೇವಲ 2 ಟೊಮೆಟೊ ಸಾಕು.. ಹೋಟೆಲ್ ರುಚಿಯ ಚಟ್ನಿ ರೆಡಿ
ಇಡ್ಲಿ, ದೋಸೆಗೆ ಹೇಳಿ ಮಾಡಿಸಿದ ರುಚಿ! ಹೋಟೆಲ್ ರುಚಿಯ ಚಟ್ನಿ ಈಗ 5 ನಿಮಿಷದಲ್ಲಿ ಮನೆಯಲ್ಲೇ ಮಾಡಿ. ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ಮಾಡ್ತೀರಾ. ಹೌದು, ಬಹುತೇಕರಿಗೆ ಬೆಳಗಿನ ಉಪಾಹಾರದಲ್ಲಿ ಇಡ್ಲಿ ಅಥವಾ ದೋಸೆ ಸದಾ ಪ್ರಿಯ. ಆದರೆ, ಈ ತಿಂಡಿಗಳ ನಿಜವಾದ ರುಚಿ ಅಡಗಿರುವುದು ಅದರ ಜೊತೆ ಸವಿಯುವ ಚಟ್ನಿಯಲ್ಲಿ (Chutney).
ನಿತ್ಯ ತಯಾರಿಸುವ ಸಾಧಾರಣ ತೆಂಗಿನಕಾಯಿ ಚಟ್ನಿಯಿಂದ ಬೇಸರವಾಗಿದ್ದರೆ, 'ಟೊಮೆಟೊ-ತೆಂಗಿನಕಾಯಿ ಚಟ್ನಿ' (Tomato Coconut Chutney) ಒಂದು ಅತ್ಯುತ್ತಮ ಬದಲಾವಣೆ. ಟೊಮೆಟೊದ ಹುಳಿ, ತೆಂಗಿನಕಾಯಿಯ ಸಿಹಿ ಮತ್ತು ಒಣಮೆಣಸಿನಕಾಯಿಯ ಖಾರ ಮಿಶ್ರಿತ ಈ ಚಟ್ನಿ ಹೋಟೆಲ್ ರುಚಿಯನ್ನು ನೆನಪಿಸುತ್ತದೆ. ಇದನ್ನು ತಯಾರಿಸುವುದು ಅತ್ಯಂತ ಸುಲಭ ಹಾಗೂ ಕಡಿಮೆ ಸಮಯ ಸಾಕು.

ಸಾಮಾನ್ಯ ಟೊಮೆಟೊ ಚಟ್ನಿಗಿಂತ ಭಿನ್ನವಾಗಿ, ಈ ರೆಸಿಪಿಯಲ್ಲಿ ತೆಂಗಿನಕಾಯಿ ಸೇರಿಸುವುದರಿಂದ ಚಟ್ನಿಗೆ ವಿಶಿಷ್ಟ ವಿನ್ಯಾಸ ಮತ್ತು ಹದವಾದ ರುಚಿ ಸಿಗುತ್ತದೆ. ಇದು ಕೇವಲ ಇಡ್ಲಿ-ದೋಸೆಗೆ ಮಾತ್ರ (Red Chutney for Idli Dosa) ಸೀಮಿತವಲ್ಲದೆ, ಬಿಸಿಬಿಸಿ ವಡೆ, ರುಚಿಕರ ಪೋಂಗಲ್ ಹಾಗೂ ಬಿಸಿ ಅನ್ನದೊಂದಿಗೂ ಅದ್ಭುತವಾಗಿ ಹೊಂದಿಕೊಳ್ಳುತ್ತದೆ. ಹೀಗಾಗಿ, ಹಲವು ಭಕ್ಷ್ಯಗಳಿಗೆ ಇದು ಉತ್ತಮ ಜೊತೆಯಾಗಿದೆ. ಈ ರುಚಿಕರ ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ (Tomato Coconut Chutney Recipe) ಇಲ್ಲಿದೆ.
ಈ ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಹಣ್ಣಾದ ಟೊಮೆಟೊ
• ತೆಂಗಿನಕಾಯಿ ತುರಿ
• ಒಣ ಮೆಣಸಿನಕಾಯಿ (ಖಾರಕ್ಕೆ ತಕ್ಕಂತೆ)
• ಶುಂಠಿ ತುಂಡು (ತುರಿದಿದ್ದು)
• ಬೆಳ್ಳುಳ್ಳಿ ಎಸಳು
• ಉದ್ದಿನ ಬೇಳೆ
• ಕಡಲೆ ಬೇಳೆ
• ರುಚಿಗೆ ತಕ್ಕಷ್ಟು ಉಪ್ಪು
• ಎಣ್ಣೆ
ಒಗ್ಗರಣೆಗೆ ಬೇಕಾದ ಸಾಮಗ್ರಿಗಳು
• ಸಾಸಿವೆ
• ಕರಿಬೇವು ಎಲೆಗಳು
• ಚಿಟಿಕೆ ಇಂಗು
• ಒಣ ಮೆಣಸಿನಕಾಯಿ
ಚಟ್ನಿ ತಯಾರಿಸುವ ವಿಧಾನ ಹೀಗಿದೆ
- ಮೊದಲು ಟೊಮೆಟೊಗಳನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಒಣ ಮೆಣಸಿನಕಾಯಿಯನ್ನು ಹಾಕಿ ಚನ್ನಾಗಿ ಕೆಂಪಾಗುವವರೆಗೆ ಹುರಿಯಿರಿ.
- ನಂತರ ಅದಕ್ಕೆ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಒಮ್ಮೆ ಕಲಸಿ.
- ಇದೇ ಬಾಣಲೆಗೆ ಹೆಚ್ಚಿದ ಟೊಮೆಟೊ ತುಂಡುಗಳು ಮತ್ತು ಶುಂಠಿಯನ್ನು ಸೇರಿಸಿ. ಟೊಮೆಟೊ ಸಂಪೂರ್ಣವಾಗಿ ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಬೇಕು.
- ಟೊಮೆಟೊ ಬೆಂದ ಬಳಿಕ ಸ್ಟೌವ್ ಆಫ್ ಮಾಡಿ, ಮಿಶ್ರಣವನ್ನು ಚೆನ್ನಾಗಿ ತಣ್ಣಗಾಗಲು ಬಿಡಿ.
- ನಂತರ, ಈ ಮಿಶ್ರಣವನ್ನು ಮಿಕ್ಸಿ ಜಾರ್ಗೆ ಹಾಕಿ. ಅದಕ್ಕೆ ತೆಂಗಿನಕಾಯಿ ತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸ್ವಲ್ಪ ನೀರು ಬಳಸಿ ನುಣುಪಾದ ಪೇಸ್ಟ್ನಂತೆ ರುಬ್ಬಿಕೊಳ್ಳಿ.
- ಕೊನೆಯಲ್ಲಿ, ಸಣ್ಣ ಪ್ಯಾನ್ನಲ್ಲಿ ಉಳಿದ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ.
- ಸಾಸಿವೆ ಸಿಡಿಯಲು ಆರಂಭಿಸಿದಾಗ ಕರಿಬೇವು, ಒಣ ಮೆಣಸಿನಕಾಯಿ ತುಂಡು ಮತ್ತು ಚಿಟಿಕೆ ಇಂಗು ಸೇರಿಸಿ.
- ಈ ಘಮಘಮಿಸುವ ಬಿಸಿ ಒಗ್ಗರಣೆಯನ್ನು ರುಬ್ಬಿಕೊಂಡ ಚಟ್ನಿಯ ಮೇಲೆ ಸುರಿದು ಮಿಕ್ಸ್ ಮಾಡಿ.
- ಈಗ ರುಚಿಕರವಾದ ಟೊಮೆಟೊ-ತೆಂಗಿನಕಾಯಿ ಚಟ್ನಿ ಸವಿಯಲು ಸಿದ್ಧ.
- ಚಟ್ನಿಯ ರುಚಿ ಇನ್ನಷ್ಟು ಹೆಚ್ಚಿಸಲು, ರುಬ್ಬುವಾಗ ಒಂದು ಸಣ್ಣ ಹುಣಸೆಹಣ್ಣಿನ ತುಂಡು ಅಥವಾ ಅರ್ಧ ಚಮಚ ಬೆಲ್ಲವನ್ನು ಸೇರಿಸಬಹುದು. ಇದು ಚಟ್ನಿಗೆ ವಿಭಿನ್ನ ಆಯಾಮವನ್ನು ನೀಡುತ್ತದೆ.
- ಈ ಚಟ್ನಿ ಸ್ವಲ್ಪ ದಪ್ಪವಾಗಿದ್ದರೆ ತಿನ್ನಲು ಹೆಚ್ಚು ರುಚಿಯಾಗಿರುತ್ತದೆ. ಆದ್ದರಿಂದ ನೀರು ಸೇರಿಸುವಾಗ ಜಾಗ್ರತೆ ವಹಿಸಿ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ನಲ್ಲಿಟ್ಟರೆ 1-2 ದಿನಗಳವರೆಗೆ ತಾಜಾ ಆಗಿ ಇಡಬಹುದು.
ಕಡಿಮೆ ಖರ್ಚಿನಲ್ಲಿ, ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ ಮಾಡುವ ಈ ಟೊಮೆಟೊ-ತೆಂಗಿನಕಾಯಿ ಚಟ್ನಿ ನಿಮ್ಮ ಬೆಳಗಿನ ತಿಂಡಿಯನ್ನು ವಿಶೇಷವಾಗಿಸುತ್ತದೆ. ಒಮ್ಮೆ ಈ ರೆಸಿಪಿ ಟ್ರೈ ಮಾಡಿದರೆ, ನಿಮ್ಮ ಮನೆಯ ಸದಸ್ಯರು ಪದೇ ಪದೆ ಇದನ್ನೇ ತಯಾರಿಸಲು ಕೇಳುವುದು ಖಚಿತ.



Click it and Unblock the Notifications