ಕಣ್ಣೀರು ಬಾರದಂತೆ ಈರುಳ್ಳಿ ಕತ್ತರಿಸಲು ಈ ಟ್ರಿಕ್ಸ್ ಬಳಸಿ

Posted By:

ಒಂದು, ಎರಡು ಈರುಳ್ಳಿ ಕತ್ತರಿಸುವಾಗ ಕಣ್ಣು ಸ್ವಲ್ಪ ಉರಿ ಉರಿಯಾದರೂ ದೊಡ್ಡ ತೊಂದರೆ ಅನಿಸಲ್ಲ. ಅದೇ ಫಂಕ್ಷನ್‌ಗೆ ಅಥವಾ ಈರುಳ್ಳಿ ಬಜ್ಜಿ ಮಾಡುವಾಗ, ಹಬ್ಬ ಹರಿದಿನಗಳಲ್ಲಿ ಸಾರು, ಪಲ್ಯ ಅಂತ ಮಾಡುವಾಗ ತುಂಬಾನೇ ಈರುಳ್ಳಿ ಬೇಕಾಗುವುದು.

ಆವಾಗ ಮಾತ್ರ ಕಣ್ಣಿಂದ ಕಣ್ಣೀರ ಕೋಡಿ ಹರಿಯಲಾರಂಭಿಸುತ್ತದೆ. ಈರುಳ್ಳಿ ಉರಿಗೆ 4-5 ಈರುಳ್ಳಿ ಕತ್ತರಿಸಿದರೆ ಕತ್ತರಿಸಲು ಕಷ್ಟವಾಗುವುದು ಆದರೆ ಕತ್ತರಿಸಿದೆ ಇರಲೂ ಸಾಧ್ಯವಿಲ್ಲ.

Tips on How to Cut an Onion Without Crying in Kannada

ಇನ್ಮುಂದೆ ಈರುಳ್ಳಿ ಕತ್ತರಿಸುವಾಗ ಈ ಟ್ರಿಕ್ಸ್ ಬಳಸಿನೋಡಿ ಚಕ್‌-ಚಕ್ ಅಂತ ಈರುಳ್ಳಿ ಕತ್ತಿರಿಸಿದರೂ ಒಂದು ತೊಟ್ಟು ಕಣ್ಣೀರು ಬರುವುದಿಲ್ಲ.

1. ಈರುಳ್ಳಿ ಫ್ರೀಜ್ ಮಾಡಿ

ನೀವು ಈರುಳ್ಳಿಯ ಸಿಪ್ಪೆ ಸುಲಿದು ಒಂದು ಅರ್ಧ ಗಂಟೆ ಫ್ರೀಜರ್‌ನಲ್ಲಿ ಇಟ್ಟು ನಂತರ ಕತ್ತರಿಸಿ. ಹೀಗೆ ಮಾಡಿದರೆ ಕಣ್ಣು ಉರಿಯಾಗುವುದಿಲ್ಲ, ಸುಲಭವಾಗಿ ಈರುಳ್ಳಿ ಕತ್ತರಿಸಬಹುದು.

2. ತಣ್ಣೀರಿಲ್ಲಿ ಹಾಕಿಡಿ

ನೀವು ಈರುಳ್ಳಿ ಸಿಪ್ಪೆ ಸುಲಿದು ಅರ್ಧ ಗಂಟೆ ತಣ್ಣೀರಿನಲ್ಲಿ ಹಾಕಿಡಿ. ಆದರೆ ಈ ರೀತಿ ನೀರಿನಲ್ಲಿ ಹಾಕಿಟ್ಟರೆ ಈರುಳ್ಳಿ ಒರೆಸಿ ಕತ್ತರಿಸಿ, ಇಲ್ಲದಿದ್ದರೆ ಈರುಳ್ಳಿ ಜಾರಿ ಕೈಗೆ ಗಾಯವಾಗಬಹುದು, ಎಚ್ಚರವಹಿಸಿ.

3. ಹರಿತವಾದ ನೈಫ್‌ ಬಳಸಿ

ಈರುಳ್ಳಿ ಕತ್ತರಿಸುವಾಗ ಹರಿತವಾದ ನೈಫ್‌ ಬಳಸಿ, ಆಗ ಬೇಗನೆ ಕತ್ತಿರಿಸಿ ಮುಗಿಸಬಹುದು, ಇದರಿಂದ ಈರುಳ್ಳಿ ಕತ್ತರಿಸುವಾಗ ಕಣ್ಣು ಉರಿಯಾಗಿ ಕಡಿಮೆಯಾಗುವುದು.

4. ಬಾಯಲ್ಲಿ ಬ್ರೆಡ್‌ ಇಟ್ಟುಕೊಳ್ಳಿ

ನಿಮಗೆ ತಮಾಷೆ ಅನಿಸಬಹುದು. ಆದರೆ ನಿಜವಾಗಲೂ ಇದು ವರ್ಕ್ ಆಗುತ್ತೆ. ನೀವು ಬಾಯಲ್ಲಿ ಬ್ರೆಡ್‌ ಇಟ್ಟು ಈರುಳ್ಳಿ ಕತ್ತರಿಸಿದಾಗ ಈರುಳ್ಳಿಯಿಂದ ಬಿಡುಗಡೆಯಾಗುವ ಗ್ಯಾಸ್‌ ಅನ್ನು ಬ್ರೆಡ್‌ ಚೂರು ಹೀರಿಕೊಳ್ಳುವುದರಿಂದ ಕಣ್ಣು ಉರಿ ಕಡಿಮೆಯಾಗುವುದು.

Tips on How to Cut an Onion Without Crying in Kannada

5. ಕನ್ನಡಕ ತಯಾರಿಸಿ

ನೀವು ಸನ್‌ಗ್ಲಾಸ್‌ ಬಿಸಿಲಿಗೆ ಹೋಗುವಾಗ ಮಾತ್ರವಲ್ಲ ಈರುಳ್ಳಿ ಕತ್ತರಿಸುವಾಗ ಬಳಸಿದರೂ ಕಣ್ಣು ಉರಿಯಾಗುವುದು ಕಡಿಮೆಯಾಗುವುದು. ಈ ವಿಧಾನ ಕೂಡ ಈರುಳ್ಳಿ ಕತ್ತರಿಸುವಾಗ ತುಂಬಾ ಪ್ರಯೋಜನಕಾರಿಯಾಗಿದೆ.

6. ಕತ್ತರಿಸುವಾಗ ಉಲ್ಟಾ ಇಟ್ಟು ಕತ್ತರಿಸಿ

ಸಾಮಾನ್ಯವಾಗಿ ಈರುಳ್ಳಿ ಕತ್ತರಿಸುವಾಗ ಅದರ ಸಿಪ್ಪೆ ಭಾಗ ಮೇಲೆ ಇರುವಂತೆ ಕತ್ತರಿಸುತ್ತೇವೆ, ಆದರೆ ಉಲ್ಟಾ ಇಟ್ಟು ಕತ್ತರಿಸಿ. ಆವಾಗ ಕಣ್ಣು ಉರಿಯಾಗುವುದು ಸ್ವಲ್ಪ ಕಡಿಮೆಯಾಗುವುದು.

7. ಗ್ಯಾಸ್ ಉರಿಯುತ್ತಿರುವಾಗ ಕತ್ತರಿಸಿ ಅಥವಾ ಕ್ಯಾಂಡಲ್ ಹಚ್ಚಿಟ್ಟು ಕತ್ತರಿಸಿ

ಈರುಳ್ಳಿ ತುಂಬಾ ಕತ್ತರಿಸಲು ಇರುವಾಗ ನೀವು ಗ್ಯಾಸ್‌ ಉರಿಯುತ್ತಾ ಇರುವಾಗ ಅದರ ಸಮೀಪದಲ್ಲಿ ನಿಂತು ಅಥವಾ ಮೇಣದ ಬತ್ತಿ ಹಚ್ಚಿ ಕತ್ತರಿಸಿದರೆ ಈರುಳ್ಳಿಯಲ್ಲಿರುವ ಸಲ್ಫರ್ ಅನ್ನು ಉರಿ ಹೀರಿಕೊಳ್ಳುವುದರಿಂದ ಕಣ್ಣು ಉರಿಯಾಗುವುದು ಕಡಿಮೆಯಾಗುವುದು.

[ of 5 - Users]
Story first published: Tuesday, April 4, 2023, 14:30 [IST]
X
Desktop Bottom Promotion