Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಯುಗಾದಿ ಸಿಹಿ ಖಾದ್ಯ ಹೂರಣ ಹೋಳಿಗೆ!
ಯುಗಾದಿ ಹಬ್ಬದಂದು ತಯಾರಿಸಲಾಗುವ ಒಂದು ಸಿಹಿ ಖಾದ್ಯವಾಗಿದೆ ಹೂರಣದ ಹೋಳಿಗೆ. ಇದೊಂದು ವಿಶೇಷ ಮಹಾರಾಷ್ಟ್ರಿಯನ್ ಡಿಶ್ ಆಗಿದ್ದು, ಈ ಸ್ಟಫ್ ಮಾಡಿದ ಸಿಹಿಯನ್ನು ಯುಗಾದಿಯಂದು ಸಿದ್ಧಪಡಿಸಲಾಗುತ್ತದೆ. ಹೂರಣದ ಹೋಳಿಗೆ ಅಥವಾ ಒಬ್ಬಟ್ಟು ಎಂದೂ ಕೂಡ ಈ ಸಿಹಿಯನ್ನು ಕರೆಯುತ್ತಾರೆ.
ಯುಗಾದಿಯನ್ನು ವಿಜೃಂಭಣೆಯಿಂದ ಆಚರಿಸಲು, ಈ ಸಾಂಪ್ರದಾಯಿಕ ಸಿಹಿಯನ್ನು ತಯಾರಿಸಿ. ಬೆಲ್ಲ ಹಾಗೂ ಕಡಲೆಬೇಳೆಯನ್ನು ಬಳಸಿ ಹೋಳಿಗೆಯನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದ ಕೆಲವೆಡೆಗಳಲ್ಲಿ, ಹೂರಣದ ಹೋಳಿಗೆಯನ್ನು ತೆಂಗಿನ ಕಾಯಿಯನ್ನು ಬಳಸುತ್ತಾರೆ.
ತುರಿದ ತೆಂಗಿನ ಕಾಯೊಯೊಂದಿಗೆ ಬೆಲ್ಲವನ್ನು ಮಿಶ್ರ ಮಾಡಿ ಹೋಳಿಗೆಯನ್ನು ಸಿದ್ಧಪಡಿಸುತ್ತಾರೆ. ತೆಂಗಿನ ಕಾಯಿಯ ಸುವಾಸನೆ ಮತ್ತು ಅಸಾಮಾನ್ಯ ರುಚಿ ಹೋಳಿಗೆಗೆ ವಿಶೇಷ ಸ್ವಾದವನ್ನು ನೀಡುತ್ತದೆ. ಹೂರಣದ ಹೋಳಿಗೆಯನ್ನು ಮಾಡುವುದು ಹೇಗೆ ಎಂಬುದನ್ನು ಕುರಿತು ಸಚಿತ್ರ ವಿವರ ಮುಂದೆ ಓದಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಕಿಕ್ ಮಾಡಿ: ವಾವ್! ಮಜ್ಜಿಗೆ ಹುಳಿ: ಯುಗಾದಿ ಸ್ಪೆಶಲ್

ಪ್ರಮಾಣ: 10 ಹೂರಣದ ಹೋಳಿಗೆಗಳು
ಸಿದ್ಧತಾ ಸಮಯ: 60 ನಿಮಿಷಗಳು
ಅಡುಗೆಗೆ ಬೇಕಾದ ಸಮಯ - 5 ನಿಮಿಷಗಳು
ಸಾಮಾಗ್ರಿಗಳು:
1.ಮೈದಾ - 2 ಕಪ್‌ಗಳು
2.ರವೆ - 2 ಸ್ಪೂನ್
3.ಅರಶಿನ ಹುಡಿ - ಸ್ವಲ್ಪ
4.ಬೆಲ್ಲ - 11/2 ಕಪ್
5.ತೆಂಗಿನ ತುರಿ - 2 ಕಪ್ (ತುರಿದದ್ದು)
6.ಏಲಕ್ಕಿ - 2-3 (ಹುಡಿಮಾಡಿದ್ದು)
7.ತುಪ್ಪ - 2ಸ್ಫೂನ್
8.ನೀರು - 1 ಕಪ್
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಕಿಕ್ ಮಾಡಿ: ಈ ಯುಗಾದಿ ಗರಿಗರಿ ಬಾಳೆಕಾಯಿ ಬಜ್ಜಿಯೊಂದಿಗೆ ಆಚರಿಸಿ!
ಮಾಡುವ ವಿಧಾನ:
1.ಒಂದು ಪಾತ್ರೆಯಲ್ಲಿ, ಮೈದಾ, ರವೆ, ಅರಶಿನ ಹುಡಿಯನ್ನು ಸೇರಿಸಿ ಮತ್ತು ಸ್ವಲ್ಪ ನೀರು ಬಳಸಿ ಮೃದುವಾದ ಹಿಟ್ಟು ತಯಾರಿಸಿ. 30 ನಿಮಿಷಗಳವರೆಗೆ ಹಿಟ್ಟನ್ನು ತೆಗೆದಿರಿಸಿ.
2.ಇದೇ ಸಮಯದಲ್ಲಿ, ಪ್ಯಾನ್‌ಗೆ 1/2 ಕಪ್ ನೀರು ಹಾಕಿ ಬೆಲ್ಲವನ್ನು ಕರಗಿಸಿ. ಪ್ಯಾನ್‌ಗೆ ಬೆಲ್ಲ ಅಂಟಿಕೊಳ್ಳದಿರಲು ಬೆಲ್ಲವನ್ನು ಕರಗಿಸುತ್ತಿರಿ.
3.ಪ್ಯಾನ್‌ಗೆ ತುರಿದ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬೆಲ್ಲ ದಪ್ಪಗಾಗುವವರೆಗೆ ಬೇಯಿಸಿ.
4.ಗ್ಯಾಸ್ ಆಫ್ ಮಾಡಿ ಪ್ಯಾನ್ ತಣಿಯಲು ಬಿಡಿ.
5.ಹಿಟ್ಟನ್ನು ತೆಗೆದುಕೊಂಡು ಸಣ್ಣ ಉಂಡೆಗಳನ್ನು ತಯಾರಿಸಿ. ಬೆಲ್ಲದ ಮಿಶ್ರಣವನ್ನು ಸ್ಟಫ್ ಮಾಡಿ. ಉಂಡೆಯ ಬದಿಗಳನ್ನು ಬೆಲ್ಲದ ಪಾಕದಲ್ಲಿ ಕವರ್ ಮಾಡಿ.
6.ತುಪ್ಪದಿಂದ ಸವರಿದ ಪ್ಲಾಸ್ಟಿಕ್ ಹಾಳೆಯನ್ನು ಹಾಸಿ ಅದೆ ಮೇಲೆ ಈ ಉಂಡೆಯನ್ನಿಡಿ. ನಂತರ ಉಂಡೆಯನ್ನು ಚಪಾತಿ ಆಕಾರದಲ್ಲಿ ಲಟ್ಟಿಸಿ.
7.ತವಾ ಬಿಸಿ ಮಾಡಿ ಹಾಗೂ ಬೆಲ್ಲ ಬಳಸಿಕೊಂಡು ಹೂರಣದ ಹೋಳಿಗೆಯನ್ನು ಬೇಯಿಸಿ.
ಹೂರಣದ ಹೋಳಿಗೆ ಸವಿಯಲು ಸಿದ್ಧವಾಗಿದೆ. ಬಿಸಿ ಬಿಸಿಯಾದ ಹೋಳಿಗೆಯನ್ನು ಸವಿಯಲು ನೀಡಿ.



Click it and Unblock the Notifications
