Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಆಹಾ.. ! ಕೊಬ್ಬರಿ ಮಿಠಾಯಿ ಬಲು ರುಚಿಕರ
Sweets
oi-Staff
By Staff

*ಮನಸ್ವಿನಿ, ನಾರಾವಿ
ತಯಾರಿಸಲು ಬೇಕಾದ ಪದಾರ್ಥಗಳು:
ತೆಂಗಿನಕಾಯಿ -1
ಸಕ್ಕರೆ - ಮುಕ್ಕಾಲು ಕಪ್
ಹಾಲು - 1 ಕಪ್(ಅಥವಾ ಹಾಲಿನಪುಡಿ ಬಳಸಬಹುದು)
5ರಿಂದ 6 ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ
ಶುದ್ಧ ತುಪ್ಪ : 1-2 ಟೀ ಚಮಚ
(ಬೇಕಾದರೆ ದ್ರಾಕ್ಷಿ, ಗೊಡಂಬಿ, ಬಾದಾಮಿ ಪುಡಿ ಹಾಕಬಹುದು)
ಮಾಡುವ ಬಗೆ: ತೆಂಗಿನಕಾಯಿಯನ್ನು ಚೆನ್ನಾಗಿ ತುರಿಯಿರಿ. ಆದಷ್ಟು ಬೆಳ್ಳಗಿರುವ ತುರಿಯನ್ನು ಆರಿಸಿರಿ.ಬಾಣಲೆಯಲ್ಲಿ ಕೊಬ್ಬರಿ, ಸಕ್ಕರೆಯನ್ನು ಹಾಕಿ ಜೊತೆಗೆ ಹಾಲನ್ನು ಹಾಕಿ ಕೆದಕುತ್ತಿರಿ. ಸಣ್ಣ ಉರಿಯಲ್ಲಿ ಸದಾ ಕೆದಕುತ್ತಿರಿ. (ಅರಿಶಿನ ಬಣ್ಣವನ್ನು ಹಾಕಬಹುದು)
ಸುಮಾರು 15-20 ನಿಮಿಷದೊಳಗೆ ಪಾಕ ಗಟ್ಟಿಯಾಗತೊಡಗುತ್ತದೆ. ಏಲಕ್ಕಿ ಪುಡಿ(ಜೊತೆಗೆ ದ್ರಾಕ್ಷಿ ಗೋಡಂಬಿ , ಬಾದಾಮಿ ಮಿಶ್ರಣವನ್ನು ಹಾಕಬಹುದು) ಯನ್ನು ಉದುರಿಸಿ ಬಾಣಲೆಯಿಂದ ಬೇರ್ಪಟ್ಟ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಬಗ್ಗಿಸಿ ಆರಲು ಬಿಡಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ತಿನ್ನಬಹುದು.
Comments
Read more about: ಕೊಬ್ಬರಿ ಮಿಠಾಯಿ manaswini naravi ಸಿಹಿ ತಿನಿಸು ಕರ್ನಾಟಕ ತಿಂಡಿ coconut barfi kobbari mithai ಮನಸ್ವಿನಿ ನಾರಾವಿ
Story first published: Monday, December 8, 2008, 16:26 [IST]
Other articles published on Dec 8, 2008



Click it and Unblock the Notifications
