Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ರಾಗಿ ಹಾಲಿನ ರೆಸಿಪಿ: ಉರಿಮೂತ್ರ ಶಮನಕ್ಕೆ ತುಂಬಾ ಒಳ್ಳೆಯದು
ಬೇಸಿಗೆ ಕಾಲಕ್ಕೆ ಸೂಕ್ತವಾದ ಪಾನೀಯ ರೆಸಿಪಿ ಇದಾಗಿದೆ. ಈ ಪಾನೀಯ ದೇಹವನ್ನು ತಂಪಾಗಿ ಇಡುತ್ತದೆ, ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ, ಉರಿ ಮೂತ್ರದಂಥ ಸಮಸ್ಯೆ ತಡೆಗಟ್ಟುತ್ತದೆ, ಅಲ್ಲದೆ ಈ ಪಾನೀಯವನ್ನು ಟೀ-ಕಾಫಿ ಬದಲಿಗೆ ಮಾಡಿ ಸವಿಯಬಹುದು, ರೆಸಿಪಿಯಂತೂ ತುಂಬಾ ಸುಲಭವಾಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಲೋಟ ರಾಗಿ
1 ಏಲಕ್ಕಿ
ಒಂದು ದುಂಡು ಬೆಲ್ಲ
ಚಿಟಿಕೆಯಷ್ಟು ಉಪ್ಪು
ಮಾಡುವ ವಿಧಾನ
- ಒಂದು ಲೋಟ ರಾಗಿಯನ್ನು ತೊಳೆದು ನೆನೆ ಹಾಕಿ
- ನಂತರ ರಾಗಿಗೆ ಅದೇ ನೀರು ಹಾಕಿ, 1 ಏಲಕ್ಕಿ ಹಾಕಿ ನುಣ್ಣನೆ ರುಬ್ಬಿ ಆ ರಾಗಿ ನೀರನ್ನು ಒಂದು ಪಾತ್ರೆಗೆ ಸೋಸಿ
- ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ
- ಈಗ ಈ ರಾಗಿ ಹಾಲನ್ನು ಬಿಸಿ ಮಾಡಿ
- ಚಿಟಿಕೆಯಷ್ಟು ಕಲ್ಲುಪ್ಪು ಹಾಕಿ
- ಒಂದು ತುಂಡು ಬೆಲ್ಲ ಹಾಕಿ
- ಈ ಪಾನೀಯ ಬಿಸಿಯಾಗುವಾಗ ಸೌಟ್‌ನಿಂದ ಆಡಿಸುತ್ತಾ ಇರಿ
- ರಾಗಿ ಬೇಯುತ್ತಾ ಬರುವಾಗ ಹಾಲನ್ನು ಹಾಕಿ
- ರಾಗಿ ಪಾನೀಯ ಬಿಸಿ ಬಿಸಿಯಾಗಿಯೂ ಕುಡಿಯಬಹುದು ಅಥವಾ ತಣ್ಣಗಾದ ಮೇಲೆ ಕೂಡ ಕುಡಿಯಬಹುದು.
- ಬೇಸಿಗೆಗೆ ಇಂಥ ಪಾನೀಯ ಕುಡಿಯಬಹುದು ತುಂಬಾ ಒಳ್ಳೆಯದು, ಕೆಲವರಿಗೆ ಬೇಸಿಗೆಯಲ್ಲಿ ತುಂಬಾನೇ ಉರಿಮೂತ್ರದ ಸಮಸ್ಯೆ ಕಂಡು ಬರುತ್ತದೆ, ಅದನ್ನು ತಡೆಗಟ್ಟಲು ಈ ಪಾನೀಯ ತುಂಬಾನೇ ಸಹಕಾರಿ.
- ಉರಿಮೂತ್ರದ ಸಮಸ್ಯೆ ಇರುವವರು ಇದನ್ನು ಪ್ರತಿನಿತ್ಯ 1-2 ಲೋಟ ಕುಡಿಯಿರಿ.
ಇನ್ನು ಸಿಹಿ ಬೇಡ, ಹಾಲು ಬೇಡ ಎನ್ನುವವರು ರಾಗಿ ಹಾಲಿಗೆ ಸ್ವಲ್ಪ ಉಪ್ಪು ಹಾಕಿ ಕಾಯಿಸಿ ಕುಡಿಯಬಹುದು, ಆದರೆ ರುಚಿಯಾಗಿ ಬೇಕೆಂದರೆ ಮೇಲೆ ಹೇಳಿದಂತೆ ಮಾಡಬೇಕು.
ರಾಗಿ ಹಾಲು ಈ ಸಮಸ್ಯೆ ಇರುವವರೆಗೆ ತುಂಬಾೇ ಒಳ್ಳೆಯದು
ಮಧುಮೇಹಿಗಳಿಗೆ ಅತ್ಯುತ್ತಮ ಆಹಾರ: ಬೆಲ್ಲ ಸೇರಿಸದೆ ಬರಿ ಉಪ್ಪು ಮಾತ್ರ ಹಾಕಿ
ಮಾಡಿದ ಪಾನೀಯ ಕುಡಿಯಿರಿ
ರಕ್ತ ಹೀನತೆ ಸಮಸ್ಯೆ ತಡೆಗಟ್ಟಲು ಸಹಕಾರಿ: ರಕ್ತಹೀನತೆ ಸಮಸ್ಯೆ ಇರುವವರು ಈ
ಪಾನೀಯ ಕುಡಿಯುವುದರಿಂದ ದೇಹದಲ್ಲಿ ಹೀಮೋಗ್ಲೋಬಿನ್ ಸಮಸ್ಯೆ ಹೆಚ್ಚಾಗುವುದು
ಬಾಣಂತಿಯರಿಗೆ ಒಳ್ಳೆಯದು: ಬಾಣಂತಿಯರಿಗೆ ಎದೆ ಹಾಲಿನ ಉತ್ಪತ್ತಿಗೆ, ದೇಹಕ್ಕೆ
ಶಕ್ತಿಗೆ ತುಂಬಾನೇ ಒಳ್ಳೆಯುದ.
ರೋಗ ನಿರೋಧಕ ಶಕ್ತಿ ಹೆಚ್ಚಿದೆ: ಇದರಲ್ಲಿ ಪೋಷಕಾಂಶ ಅಧಿಕವಿರುವುದರಿಂದ ರೋಗ
ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ
ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.



Click it and Unblock the Notifications
