Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನವರಾತ್ರಿ ರೆಸಿಪಿ: ಕೆಸುವಿನ ಗೆಡ್ಡೆಯ ಪಲ್ಯ
ನೀವು ನವರಾತ್ರಿ ವ್ರತ ಮಾಡುತ್ತಿದ್ದರೆ ಇಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕದೆ ಮಾಡುವ ಕೆಸುವಿನ ಗೆಡ್ಡೆಯ ರೆಸಿಪಿ ನೀಡಿದ್ದೇವೆ. ಇದನ್ನು ಮಾಡುವ ವಿಧಾನ ಸರಳವಾಗಿದೆ ಆದರೆ ರುಚಿ ಮಾತ್ರ ಸೂಪರ್ ಆಗಿದೆ.
ನೀವು ಬೇಬಿ ಪೊಟೆಟೊ ಡ್ರೈ ಇಷ್ಟಪಡುವುದಾದರೆ ಇದು ಕೂಡ ತುಂಬಾ ಇಷ್ಟವಾಗುವುದು ಅಲ್ಲದೆ ಅಷ್ಟೇ ರುಚಿಯಾಗಿರುತ್ತೆ. ಇದನ್ನು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವಂಥ ಸರಳವಾದ ಮಸಾಲೆ ಸಾಮಗ್ರಿ ಬಳಸಿ ತಯಾರಿಸಲಾಗುವುದು.

ನೀವು ಇದನ್ನು ಚಪಾತಿ ಜೊತೆ ನೆಚ್ಚಿಕೊಂಡು ತಿನ್ನಲು ಸೂಪರ್ ಆಗಿರುತ್ತೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Dry
Serves: 4
-
ಬೇಕಾಗುವ ಸಾಮಗ್ರಿ
ಕೆಸದ ಗೆಡ್ಡೆ (ಕೆಸುವಿನ) 200ಗ್ರಾಂ
ನೀರು ಎರಡೂವರೆ ಕಪ್
ಸಾಸಿವೆ ಎಣ್ಣೆ 3 ಚಮಚ
ಜೀರಿಗೆ 1 ಚಮಚ
ಅಜ್ವೈನ್ 2 ಚಮಚ
ಇಂಗು (ಚಿಟಿಕೆಯಷ್ಟು)
ಕಲ್ಲುಪ್ಪು (ರುಚಿಗೆ ತಕ್ಕ ಉಪ್ಪು)
ಅರಿಶಿಣ ಪುಡಿ 1 ಚಮಚ
ಕೊತ್ತಂಬರಿ ಪುಡಿ 2 ಚಮಚ
ಮಾವಿನಕಾಯಿ ಪುಡಿ 1 ಚಮಚ (amchur powder)
ಖಾರದ ಪುಡಿ 1 ಚಮಚ
-
ಮಾಡುವ ವಿದಾನ
ಕೆಸದ ಗೆಡ್ಡೆ ಚೆನ್ನಾಗಿ ತೊಳೆದು (ಸಿಪ್ಪೆ ಸುಲಿಯಬೇಡಿ) ಕುಕ್ಕರ್‌ನಲ್ಲಿ ಹಾಕಿ, ಬೇಯಲು ತಕ್ಕ ನೀರು, ರುಚಿಗೆ ತಕ್ಕ ಉಪ್ಪು ಸೇರಿಸಿ 2 ವಿಶಲ್ ಬರುವವರೆಗೆ ಬೇಯಿಸಿ. ನಂತರ ಸಿಪ್ಪೆ ತೆಗೆಯಬಹುದು.
* ಈಗ ಪ್ಯಾನ್ ಬಿಸಿ ಮಾಡು ಅದಕ್ಕೆ ಸಾಸಿವೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾಗುವಾಗ ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಅಜ್ವೈನ್ ಹಾಗೂ ಚಿಟಿಕೆಯಷ್ಟು ಇಂಗು ಹಾಕಿ.
* ಈಗ ದೊಡ್ಡ-ದೊಡ್ಡದಾಗಿ ಕತ್ತರಿಸಿದ ಕೆಸದ ಗೆಡ್ಡೆ ಹಾಕಿ ಸೌಟ್‌ನಿಂದ ಆಡಿಸಿ, ಪಾತ್ರೆಯ ಬಾಯಿ ಮುಚ್ಚಿ 5 ನಿಮಿಷ ಬೇಯಿಸಿ.
*ಕೆಸದ ಗೆಡ್ಡೆ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ಮೇಲೆ ಅರಿಶಿಣ ಪುಡಿ, ಅರಿಶಿಣ ಪುಡಿ, ಮಾವಿನಕಾಯಿ ಪುಡಿ, ಖಾರದ ಪುಡಿ ಹಾಕಿ ಸೌಟ್‌ನಿಂದ ಆಡಿಸಿ, ಅರ್ಧ ಲೋಟ ನೀರು ಹಾಕಿ ಮಿಶ್ರ ಮಾಡಿ ನಂತರ ಅದರ ನೀರಿನಂಶ ಆವಿಯಾಗಿ ಡ್ರೈಯಾಗುವವರೆಗೆ ಬೇಯಿಸಿ. ಇಷ್ಟು ಮಾಡಿದರೆ ಕೆಸುವಿನ ಗೆಡ್ಡೆಯ ಪಲ್ಯ ರೆಡಿ.
- ನೀವು ವ್ರತದ ರೆಸಿಪಿಯಾಗಿ ಅಲ್ಲದೆ ಬೇರೆ ಸಮಯದಲ್ಲಿ ಮಾಡುವುದಾದರೆ ಈರುಳ್ಳಿ ಸೇರಿಸಬಹುದು.
- ಕ್ಯಾಲೋರಿ - 165ಕ್ಯಾ
- ನಾರಿನಂಶ - 8 ಗ್ರಾಂ



Click it and Unblock the Notifications