Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸುಲಭ ಅಂತ ಹೆಚ್ಚಿನ ಬಾರಿ ರವೆ ಉಪ್ಪಿಟ್ಟೇ ಮಾಡಬೇಡಿ!

ಈ ಸಮಯದಲ್ಲಿ ಅಮ್ಮಂದಿರು ಸುಲಭವಾಗಿ ಮಾಡಬಹುದಾದ ಅಡುಗೆಯನ್ನು ತಯಾರಿಸುತ್ತಾರೆ. ಅದರಲ್ಲಿ ರವೆ ಉಪ್ಪಿಟ್ಟೂ ಒಂದು, ಆದರೆ ಈ ರವೆ ಉಪ್ಪಿಟ್ಟು ಹೆಚ್ಚಿನವರಿಗೆ ಇಷ್ಟವಾಗಲ್ಲ. ಇದೇ ರವೆಯಿಂದ ರುಚಿಕರವಾದ ಪಡ್ಡು ಮಾಡಬಹುದಾದರೆ ಹೆಚ್ಚಿನ ಬಾರಿ ಉಪ್ಪಿಟ್ಟು ಅಂತ ಮಾಡುವ ಬದಲು ಇದನ್ನೇ ಮಾಡಬಹುದಲ್ಲವೇ? ಏಕೆಂದರೆ ಇದನ್ನು ಮಾಡಲು ಉಪ್ಪಿಟ್ಟು ಮಾಡುವಷ್ಟೇ ಶ್ರಮ ಸಾಕಾಗಿದ್ದು ಮಕ್ಕಳಿಗೆ ಲಂಚ್ ಬಾಕ್ಸ್ ಗೂ ತುಂಬಬಹುದು. ಬೆಳಗ್ಗಿನ ತಿಂಡಿಗೂ ಕೊಡಬಹುದು.
ಬೇಕಾಗುವ ಸಾಮಾಗ್ರಿಗಳು:
* ಅರ್ಧ ಕಪ್ ಸೂಜಿ ರವೆ
* ಒಂದು ಈರುಳ್ಳಿ
* ಅರ್ಧ ಕಪ್ ಇಡ್ಲಿ ರವೆ
* ಅರ್ಧ ಕಪ್ ಅಕ್ಕಿ ಹಿಟ್ಟು
* ಎರಡು ಚಮಚ ಗಟ್ಟಿ ಮೊಸರು ಅಥವಾ ಹಾಲಿನ ಕೆನೆ
* 3-5 ಹಸಿ ಮೆಣಸಿನ ಕಾಯಿ
* ಒಂದು ಚಮಚ ಜೀರಿಗೆ
* 1/4 ಚಮಚ ಅಡುಗೆ
* ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕ ಉಪ್ಪು
* ಎಣ್ಣೆ
* ಕರಿ ಬೇವಿನ ಎಲೆ
ತಯಾರಿಸುವ ವಿಧಾನ:
1. ಈರುಳ್ಳಿಯ ಸಿಪ್ಪೆ ಸುಲಿದು ಕತ್ತರಿಸಬೇಕು. ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಕತ್ತರಿಸಿಡಿ.
2. ಈಗ ಎಣ್ಣೆಯನ್ನು ಬಿಟ್ಟು, ಸೂಜಿ ರವೆ, ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು , ಅಕ್ಕಿ ಹಿಟ್ಟು, ಇಡ್ಲಿ ರವೆ, ಜೀರಿಗೆ, ಕತ್ತರಿಸಿದ ಹಸಿ ಮೆಣಸಿನ ಕಾಯಿಹಾಕಿ, ಕೆನೆ ಅಥವಾ ಗಟ್ಟಿ ಮೊಸರು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.
3. ಈಗ ಪಡ್ಡು ಮಾಡಲು ಬಳಸುವ ತವಾವನ್ನು ಉರಿಯಲ್ಲಿಟ್ಟು ಅದು ಬಿಸಿಯಾದಾಗ ಅದರ ಪ್ರತಿಯೊಂದು ಗುಂಡಿಗೆ ಅರ್ಧ ಚಮಚದಷ್ಟು ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಸ್ವಲ್ಪ ಹಿಟ್ಟು ತೆಗೆದು ಹಾಕಿದರೆ ಅದು ಬೇಗನೆ ಬೇಯುವುದು, ಆಗ ಎಣ್ಣೆ ಸರಿಯಾದ ಉಷ್ಣತೆಗೆ ಬಿಸಿಯಾಗಿದೆ ಎಂದು ಅರ್ಥ. ಈಗ ಕಲೆಸಿದ ಹಿಟ್ಟನ್ನು ತವಾಕ್ಕೆ ಹಾಕಿ ಮತ್ತೊಂದು ಪಾತ್ರೆಯಿಂದ ತವಾವನ್ನು ಮುಚ್ಚಿ 2-3 ನಿಮಿಷ ಬಿಡಬೇಕು. ಹಿಟ್ಟು ಬೆಂದಿದೆ ಅಂದಾದರೆ ಒಂದು ಸ್ಪೂನ್ ತೆಗೆದು ಅದನ್ನು ಮಗುಚಿ ಹಾಕಬೇಕು.
4. ಆಗ ಪಡ್ಡು ಸ್ವಲ್ಪ ಕಂದು ಬಣ್ಣಕ್ಕೆ ಬರುತ್ತದೆ. ಆಗ ಅದನ್ನುತೆಗೆದು ಪಾತ್ರೆಯಲ್ಲಿ ಹಾಕಬೇಕು. ಈ ರೀತಿ ಉಳಿದ ಹಿಟ್ಟಿನಿಂದ ತಯಾರಿಸಿದರೆ ಮಕ್ಕಳಿಗೆ ತಿನ್ನಲು ರುಚಿಕರವಾದ ರವೆ ಪಡ್ಡು ರೆಡಿಯಾಗಿರುತ್ತದೆ.
ರವೆ ಪಡ್ಡುವನ್ನು ತೆಂಗಿನ ಕಾಯಿ ಚಟ್ನಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಸಲಹೆ:
* ಈ ಪಡ್ಡು ಮಾಡುವಾಗ ಈ ಮೇಲೆ ಹೇಳಿದ ಸಾಮಾಗ್ರಿಗಳಲ್ಲಿ ಹಸಿ ಮೆಣಸಿನಕಾಯಿ ಹಾಕದೆ ಸ್ವಲ್ಪ ತುರಿದ ತೆಂಗಿನ ಕಾಯಿ ಮತ್ತು ಸ್ವಲ್ಪ ಸಕ್ಕರೆ ಹಾಕಿ ಮಿಶ್ರ ಮಾಡಿದರೆ ಆ ಮಿಶ್ರಣದಿಂದ ಸಿಹಿಯಾದ ರವೆ ಪಡ್ಡು ತಯಾರಿಸಬಹುದು. ಈ ರೀತಿ ತಯಾರಿಸಿದರೆ ಮಕ್ಕಳಿಗೆ ತಿಂಡಿ ಡಬ್ಬದಲ್ಲಿ ತುಂಬಿ ಕಳುಹಿಸಲು ಸುಲಭವಾಗುವುದು.
* ಹಸಿ ಮೆಣಸಿನಕಾಯಿ ಹಾಕಿ ತಯಾರಿಸುವ ಪಡ್ಡು ತಿಂಡಿಗೆ ಒಂದು ಮೊಟ್ಟೆ ಹಾಕಿದರೂ ತುಂಬಾ ರುಚಿಯಾಗಿರುತ್ತದೆ.



Click it and Unblock the Notifications
