Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಳೆಗಾಲದ ತಿಂಡಿ-ಪಾಲಾಕ್ ಪಕೋಡ
ಮಳೆಗಾಲವನ್ನು ಪಕೋಡ ಸೀಸನ್ ಎಂದೇ ಕರೆಯಬಹುದು. ಈ ಸಮಯದಲ್ಲಿಯೇ ಹೆಚ್ಚಾಗಿ ಪಕೋಡ ಮಾಡಿ ತಿನ್ನಲು ಇಷ್ಟಪಡುತ್ತೇವೆ. ಹೊರಗಡೆ ಮಳೆ ಸುರಿಯುತ್ತಿರುವಾಗ ಬಿಸಿ- ಬಿಸಿ ಪಕೋಡ ಮಾಡಿ, ಬಿಸಿ ಕಾಫಿ ಅಥವಾ ಟೀ ಜೊತೆ ಹೀರುವ ಮಜಾನೇ ಬೇರೆ ಅಲ್ವಾ?
ಪಕೋಡವನ್ನು ನೂರಕ್ಕೂ ಹೆಚ್ಚಿನ ರುಚಿಯಲ್ಲಿ ಮಾಡಬಹುದು. ಇಲ್ಲಿ ನಾವು ಸರಳವಾಗಿ ಮಾಡಬಹುದಾದ ಪಾಲಾಕ್ ಪಕೋಡದ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
ಪಾಲಾಕ್ 2 ಕಟ್ಟು
ಕಡಲೆ ಹಿಟ್ಟು ಒಂದೂವರೆ ಕಪ್
ಈರುಳ್ಳಿ 1
ಸೋಂಪು 1 ಚಮಚ
ಜೀರಿಗೆ 1 ಚಮಚ
ಖಾರದ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ನೀರು 1 ಕಪ್
ಎಣ್ಣೆ
ತಯಾರಿಸುವ ವಿಧಾನ:
* ಪಾಲಾಕ್ ಸೊಪ್ಪಿನ ಎಲೆ ಕಿತ್ತು ಚೆನ್ನಾಗಿ ತೊಳೆದು, ಎಲೆಯನ್ನು ಚಿಕ್ಕದಾಗಿ ಕತ್ತರಿಸಿ ಬಟ್ಟಲಿಗೆ ಹಾಕಿ.
* ಈಗ ಅದೇ ಬಟ್ಟಲಿಗೆ ಕಡಲೆ ಹಿಟ್ಟು, ಖಾರದ ಪುಡಿ, ಜೀರಿಗೆ, ಸೋಂಪು, ಈರುಳ್ಳಿ, ರುಚಿಗೆ ತಕ್ಕ ಉಪ್ಪು, ಒಂದು ಗ್ಲಾಸ್ ನೀರು ಹಾಕಿ ಮಿಶ್ರಣವನ್ನು ಗಟ್ಟಿಯಾಗಿ ಕಲೆಸಿ.
* ನಂತರ ಆ ಮಿಶ್ರಣದಿಂದ ಉಂಡೆ ಕಟ್ಟಿ.
* ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ.
* ಈಗ ಕಾದ ಎಣ್ಣೆಗೆ ಉಂಡೆ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ಪಾಲಾಕ್ ಪಕೋಡ ರೆಡಿ.



Click it and Unblock the Notifications
