Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹೊಟ್ಟೆ ತುಂಬಲು ಈ ವಡೆ ಒಂದು ಸಾಕು!

ತುಂಬಾ ಹೊಟ್ಟೆ ಹಸಿವು ಆದಾಗ ಈ ವಡೆ ಒಂದು ತಿಂದರೆ ಸಾಕು ಹೊಟ್ಟೆ ತುಂಬುವುದು. ಆದ್ದರಿಂದ ಸಾಯಾಂಕಾಲದ ತಿಂಡಿಗೆ ಸೂಕ್ತವಾದ ವಡೆಯಾಗಿದೆ. ಇದನ್ನು ಸುಲಭವಾಗಿ ಮಾಡಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಕಡಲೆ ಬೇಳೆ 1 ಕಪ್
* ಈರುಳ್ಳಿ 3
* 1/4 ಕಪ್ ಗಿಂತ ಸ್ವಲ್ಪ ಕಡಿಮೆ ಉದ್ದಿನ ಬೇಳೆ
* ಶುಂಠಿ
* ಕರಿಬೇವು
* ಕೊಬ್ಬರಿ ತೆಂಗಿನ ಕಾಯಿಯ 1/2 ದಷ್ಟು
* ಕತ್ತರಿಸಿದ ಹಸಿಮೆಣಸಿನ ಕಾಯಿ 3-4
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕಡಲೆ ಬೇಳೆ ಸ್ವಲ್ಪವೇ ಸ್ವಲ್ಪ ಉದ್ದಿನಬೇಳೆಯನ್ನು ನೀರಿನಲ್ಲಿ ಒಂದು ಗಂಟೆಯಷ್ಟು ಕಾಲ ನೆನೆಸಿಡಬೇಕು. ಉದ್ದಿನಬೇಳೆ ಸ್ವಲ್ಪಕ್ಕಿಂತ ಜಾಸ್ತಿ ಹಾಕಬಾರದು. ನಂತರ ಮಿಕ್ಸಿಯಲ್ಲಿ ಹಾಕಿ ಗಟ್ಟಿಯಾಗಿ ನುಣ್ಣಗೆ ಅರೆಯಬೇಕು.
2. ಈಗ ಕೊಬ್ಬರಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಬೇಕು.
3. ಅದಕ್ಕೆ ಶುಂಠಿ, ಕರಿಬೇವು, ಕೊಬ್ಬರಿ ತೆಂಗಿನಕಾಯಿ ತುಂಡು, ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ ಇವೆಲ್ಲವೂ ಸಣ್ಣಗೆ ಕತ್ತರಿಸಿರಬೇಕು. ಆಮೇಲೆ ಉಪ್ಪು ಹಾಕಿ ಕಲೆಸಿ.
4. ಒಲೆಯ ಮೇಲೆ ಇಟ್ಟ ಎಣ್ಣೆ ಹದ ಕಾವು ಬಂದ ಕೂಡಲೇ, ಕಲಸಿಟ್ಟ ಹಿಟ್ಟನ್ನು ಸ್ವಲ್ಪ ದೊಡ್ಡ ಉಂಡೆ ಮಾಡಿ, ಕೈಯಲ್ಲಿ ತಟ್ಟಿ ಎಣ್ಣೆಗೆ ಹಾಕಬೇಕು. ವಡೆ ಕಂದು ಬಣ್ಣಕ್ಕೆ ಬರುವಾಗ ತೆಗೆಯಬೇಕು. ತುಂಬಾ ಕರಿದರೆ ಈರುಳ್ಳಿ ಕಹಿಯಾಗುವುದು.
ಸಲಹೆ:
1. ವಡೆ ಗರಿಗರಿಯಾಗಿ ಬೇಕೆಂದು ಬಯಸಿದರೆ ಈರುಳ್ಳಿ ಹಾಕದೇ ಬೇಕಾದರೇ ತಯಾರಿಸಬಹುದು. ಆದರೆ ಈರುಳ್ಳಿ ಹಾಕಿದ ವಡೆಗೆ ರುಚಿ ಜಾಸ್ತಿ.
2. ಈರುಳ್ಳಿ ಹಾಕಿದರೆ, ಮಾರನೇ ದಿನ ಇಟ್ಟ ವಡೆ ತಿನ್ನಲು ಕಷ್ಟ, ತುಂಬಾ ಗಟ್ಟಿಯಾಗಿರುತ್ತದೆ. ಈರುಳ್ಳಿ ಹಾಕದಿದ್ದರೆ ಮೂರು ದಿನ ವಡೆ ಇಟ್ಟರೂ ಹಾಳಾಗದು.
3. ಶುಂಠಿ ಹಾಕಿದರೆ ಇಂಗು ಹಾಕುವ ಅವಶ್ಯಕತೆಯಿಲ್ಲ.
4. ಕೆಲವರು ಉದ್ದಿನ ಬೇಳೆ ಹಾಕದೆ ಮಾಡುತ್ತಾರೆ, ಅದರೆ ಸ್ವಲ್ಪ ಉದ್ದಿನ ಬೇಳೆ ಹಾಕದಿದ್ದರೆ ವಡೆ ತುಂಬಾ ಗಟ್ಟಿಯಾಗುವುದು
5. ಬೇಳೆಯನ್ನು ಕನಿಷ್ಠ ಒಂದು ಗಂಟೆಯಾದರೂ ನೆನೆ ಹಾಕಿರಬೇಕು.



Click it and Unblock the Notifications
