Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಕ್ಕಳ ವಿಶೇಷ ರೆಸಿಪಿ ಆಲೂ ಪೂರಿ!
ಹುರಿದ ಮತ್ತು ಗರಿಗರಿಯಾದ ತಿನಿಸು ಮಕ್ಕಳಿಗೆ ಅಚ್ಚುಮೆಚ್ಚು. ನೀವು ಯಾವುದೇ ಡಿಶ್‌ಗೆ ಆಲೂಗಡ್ಡೆ ಹಾಕಿದರೆ ಸಾಕು, ಮಕ್ಕಳು ಅದನ್ನು ಹೆಚ್ಚು ಇಚ್ಟಪಡುತ್ತಾರೆ. ನಿಮ್ಮ ಮಗು ಆಲೂಗಡ್ಡೆಯನ್ನು ಹೆಚ್ಚು ಇಷ್ಟಪಡುತ್ತದೆಂದರೆ, ನೀವು ಖಂಡಿತ ಈ ಫ್ರೈ ಮಾಡಿದ ಆಲೂ ಪೂರಿ ರೆಸಿಪಿಯನ್ನು ನಿಮ್ಮ ಮಗುವಿಗೆ ತಯಾರಿಸಲೇಬೇಕು. ನಮ್ಮ ಪಟ್ಟಿಯಲ್ಲಿರುವ ಅತ್ಯಂತ ಉತ್ತಮ ಡಿಶ್ ಇದಾಗಿದೆ.
ಹುರಿದ ಆಲೂ ರೆಸಿಪಿ ತಯಾರಿಗೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಹಿಟ್ಟು ತಯಾರಿಸಲು ಮತ್ತು ಅದನ್ನು ರೋಲ್ ಮಾಡಲು ತೆಗೆದುಕೊಳ್ಳುವ ಸಮಯವನ್ನು ನೀವು ಮೀಸಲಿಟ್ಟರೆ ಸಾಕು. ಮಕ್ಕಳಿಗೆ ಇಷ್ಟವಾಗುವ ರುಚಿಕರ ಸ್ವಾದಿಷ್ಟ ಆಲೂ ಪೂರು ರೆಸಿಪಿ ತಯಾರಿ ವಿಧಾನ ಇಲ್ಲಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಯಿಯಲ್ಲಿ ನೀರೂರಿಸುವ 10 ಪಂಜಾಬಿ ಖಾದ್ಯಗಳು!

ಪ್ರಮಾಣ: 4
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಿದ್ಧತಾ ಸಮಯ: 25 ನಿಮಿಷಗಳು
ಸಾಮಾಗ್ರಿಗಳು
.ಗೋಧಿ/ಮೈದಾ - ಕಪ್‌ಗಳು
.ಆಲೂಗಡ್ಡೆ - 150 ಗ್ರಾಂ
.ಕೊತ್ತಂಬರಿ ಎಲೆಗಳು - 1 ಗೊಂಚಲು
.ಬೆಳ್ಳುಳ್ಳಿ - 6 ಎಸಳು
.ಹಸಿ ಮೆಣಸು - 4 ತುಂಡುಗಳು
.ಎಣ್ಣೆ - ಕರಿಯಲು
.ಉಪ್ಪು ರುಚಿಗೆ ತಕ್ಕಷ್ಟು
1.ಮೊದಲಿಗೆ ನೀವು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಬೇಕು. ನಂತರ ಅದರ ಸಿಪ್ಪೆ ತೆಗೆದು ಹುಡಿ ಮಾಡಿ.
2.ಈಗ ಕೊತ್ತಂಬರಿ ಎಲೆಯನ್ನು ನುಣ್ಣಗೆ ರುಬ್ಬಿ, ಹಸಿಮೆಣಸು ಬೆಳ್ಳುಳ್ಳಿ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
3.ಹುಡಿ ಮಾಡಿದ ಆಲೂಗಡ್ಡೆಯನ್ನು ಪೇಸ್ಟ್‌ಗೆ ಹಾಕಿ. ಉಪ್ಪು ಸೇರಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಯಲ್ಲಿ ನೀರೂರಿಸುವ ಮಿಡಿ ಉಪ್ಪಿನಕಾಯಿ
4.ಡಿಶ್ ಅನ್ನು ಪಕ್ಕದಲ್ಲಿರಿಸಿ.
5.ಈಗ ಗೋಧಿ ಅಥವಾ ಮೈದಾ ತೆಗೆದುಕೊಂಡು ನೀರು ಎಣ್ಣೆ ಸಮಪ್ರಮಾಣದಲ್ಲಿ ಬೆರೆಸಿ ಹಿಟ್ಟು ನಾದಿಕೊಳ್ಳಿ.
6.ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಆಲೂ ಮಿಶ್ರಣದೊಂದಿಗೆ ಸ್ಟಫ್ ಮಾಡಿ.
7.ರೋಲ್ ತೆಗೆದುಕೊಂಡು ಉಂಡೆಯನ್ನು ಪೂರಿ ಆಕಾರಕ್ಕೆ ಲಟ್ಟಿಸಿ.
8.ಗ್ಯಾಸ್ ಉರಿಸಿಕೊಂಡು ಪ್ಯಾನ್ ಅನ್ನು ಅದರ ಮೇಲಿಡಿ.
9.ಪ್ಯಾನ್‌ಗೆ ರೀಫೈನ್ಡ್ ಎಣ್ಣೆ ಹಾಕಿ ಅದು ಬಿಸಿಯಾಗುವವರೆಗೆ ಕಾಯಿರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚೆನ್ನಾ ಮಸಾಲ ಸಬ್ಜಿಯ ರೆಸಿಪಿ
10.ಎಣ್ಣೆ ಬಿಸಿಯಾದೊಡನೆ, ಪೂರಿಯನ್ನು ಗೋಲ್ಡನ್ ಬಣ್ಣ ಬರುವವರೆಗೆ ಕಾಯಿಸಿ.
ಪುರಿಯನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಹಾಕಿದ ತಟ್ಟೆಯಲ್ಲಿರಿಸಿ ಅದರಲ್ಲಿರುವ ಹೆಚ್ಚು ಎಣ್ಣೆಯನ್ನು ಟಿಶ್ಯೂ ಹೀರಿಕೊಳ್ಳುತ್ತದೆ. ಈ ರುಚಿಕರ ಡಿಶ್ ಅನ್ನು ಮೊಸರಿಗೆ ಅದ್ದಿ ಸೇವಿಸಿ.



Click it and Unblock the Notifications
