Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸವಿರುಚಿಯ ಬಟಾಣಿ ಕಚೋರಿ
ಕಚೋರಿಯನ್ನು ನೂರಕ್ಕೂ ಹೆಚ್ಚಿನ ರುಚಿಯಲ್ಲಿ ತಯಾರಿಸಬಹುದು. ಅದಕ್ಕೆ ಬಳಸುವ ತರಕಾರಿಯ ಮೇಲೆ ಕಚೋರಿಯ ರುಚಿ ಭಿನ್ನವಾಗಿರುತ್ತದೆ. ಇಲ್ಲಿ ನಾವು ಬಟಾಣಿ ಹಾಕಿ ಮಾಡುವ ಕಚೋರಿಯ ರೆಸಿಪಿ ನೀಡಿದ್ದೇವೆ.
ಈ ಕಚೋರಿ ತಯಾರಿಸುವ ವಿಧಾನ ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
1 ಕಪ್ ಮೈದಾ
1 ಸೌಟು ಕಡಲೆ ಹಿಟ್ಟು
2 ಚಮಚ ರವೆ
1/4 ಕಪ್ ನೀರು
1/4 ಕಪ್ ಎಣ್ಣೆ+1 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
ತುಂಬಲು
ಎರಡೂವರೆ ಕಪ್ ಬೇಯಿಸಿದ ಬಟಾಣಿ
ಅರ್ಧ ಚಮಚ ಜೀರಿಗೆ
ಸ್ವಲ್ಪ ಸೋಂಪು
ಅರ್ಧ ಚಮಚ ಅರಿಶಿಣ ಪುಡಿ
1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಅರ್ಧ ಚಮಚ ಹಸಿ ಮೆಣಸಿಕಾಯಿ ಪೇಸ್ಟ್
2 ಚಮಚ ಸಕ್ಕರೆ
1 ಚಮಚ ನಿಂಬೆ ರಸ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ
* ಬ್ಲೆಂಡರ್ ನಲ್ಲಿ ನೀರು, ಎಣ್ಣೆ, ಉಪ್ಪು ಹಾಕಿ ಚೆನ್ನಾಗಿ ರುಬ್ಬಿ. ಆಗ ನೀರು ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಈಗ ಮೈದಾ ಹಾಕಿ ನಂತರ ಕಡಲೆ ಹಿಟ್ಟು ಮತ್ತು ರವೆ ಹಾಕಿ ಮತ್ತೊಮ್ಮೆ ರುಬ್ಬಿ. ಆಗ ಚಿಕ್ಕ-ಚಿಕ್ಕ ಗುಳ್ಳೆಗಳು ಏಳುತ್ತವೆ(ದೋಸೆಗೆ ಅರೆಯುವಾಗ ಬರುವಾಗೆ). ಮಿಶ್ರಣ ಪೂರಿಯ ಹದಕ್ಕೆ ಗಟ್ಟಿಯಾಗಿರಲಿ.
* ಈಗ ಬಾಣಲಿಯನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ನೆ ಹಾಕಿ, ಎಣ್ಣೆ ಬಿಸಿಯಾದಾಗ ಇಂಗು ಹಾಕಿ 1 ನಿಮಿಷದ ಬಳಿಕ, ಜೀರಿಗೆ, ಸೋಂಪು ಹಾಕಿ ನಂತರ ಬೇಯಿಸಿ ತರಕಾರಿ ಹಾಕಬೇಕು. ಹಸಿ ಮೆಣಸು, ಬೆಳ್ಳುಳ್ಳಿ, ಪೇಸ್ಟ್ ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕೆಲೆಸಿ. ನಂತರ ಸಕ್ಕರೆ ಹಾಕಿ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿ. ನಂತರ ಇವುಗಳನ್ನು ಉಂಡೆ ಕಟ್ಟಿ.
* ಇದೇ ಸಮಯದಲ್ಲಿ ಎಣ್ಣೆ ಕಾಯಲು ಇಟ್ಟಿರಬೇಕು.
* ಹಿಟ್ಟನ್ನು ಚಪಾತಿಗೆ ತಟ್ಟುವ ರೀತಿಯಲ್ಲಿ ಸ್ವಲ್ಪ ಮಂದವಾಗಿ ತಟ್ಟಿ ಅದರ ಒಳಗೆ ಬೇಯಿಸಿ ಉಂಡೆ ಕಟ್ಟಿದ ತರಕಾರಿ ಹಾಕಿ, ತರಕಾರಿ ಎಣ್ಣೆಗೆ ಹಾಕಿದಾಗ ಹೊರಗಡೆ ಹೋಗದಂತೆ ಮಡಚಿ, ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದರೆ ಬಟಾಣಿ ಕಚೋರಿ ರೆಡಿ.



Click it and Unblock the Notifications
