Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಬಯಲು ಸೀಮೆಗಾಗಿ ಎಲೆಕೋಸು ಪತ್ರೊಡೆ
ಪತ್ರೊಡೆ ಎಂದಾಕ್ಷಣ ಮಲೆನಾಡು ಮತ್ತು ದಕ್ಷಿಣ ಕನ್ನಡ ಪ್ರಾದೇಶಿಕ ಆಹಾರ ತಿನಿಸು ಎಂದು ಭಾವಿಸಬೇಕಾಗಿಲ್ಲ. ನಿಮಗಿಂತ ನಾವು ಯಾವುದರಲ್ಲಿ ಕಮ್ಮಿ ಅಂತ ಕೇಳುತ್ತಿದ್ದಾರೆ ಬಯಲುಸೀಮೆಯ ಸೃಜನಶೀಲ ಗೃಹಿಣಿ!
- ಪರಿಮಳ ನಾಗಪ್ಪ,ಚಿತ್ರದುರ್ಗ
ಪತ್ರೊಡೆ ಅಥವಾ ಪತ್ರಡೆ ಎಂದು ಕರೆಯುವ ಮಲೆನಾಡಿಗರ ಸ್ವಾದಿಷ್ಟತಿನಿಸು ಬರೀ ಮಲೆನಾಡಿಗಷ್ಟೇ ಸೀಮಿತವಲ್ಲ. ಪತ್ರೊಡೆ ಎಲೆ ಸಿಗದ ಬಯಲು ಸೀಮೆಯವರು ಸಹಾ ಎಲೆಕೋಸಿನ ಪತ್ರೊಡೆಯನ್ನು ಮಾಡಿ ಸವಿಯಬಹುದು. ನಿಮಗಿಂತ ನಾವೇನು ಕಮ್ಮಿ ಎಂದು ಮಲೆನಾಡಿಗರನ್ನು ಕೇಳಬಹುದು.
ಬೇಕಾಗುವ ಪಡಿಪದಾರ್ಥಗಳು:
ಸಣ್ಣಗೆ ತುರಿದ ಎಲೆಕೋಸು: ಕಾಲು ಕೆಜಿ
ಕೊತ್ತಂಬರಿ ಬೀಜ: ಒಂದು ಚಮಚ
ಮೆಂತ್ಯ: ಒಂದು ಚಮಚ
ಉದ್ದಿನ ಬೇಳೆ: ಒಂದು ಚಮಚ
ಕೆಂಪು ಮೆಣಸು: ಐದು ಕಾಳು
ಹುಣಸೆ ಹಣ್ಣು: ಒಂದು ನಿಂಬೆ ಗಾತ್ರದ್ದು
ಬೆಲ್ಲ: ನಾಲ್ಕು ಬೆರಳಿನಷ್ಟಗಲ
ಅರಿಶಿಣ: ಭರ್ತಿ ಒಂದು ಚಿಟಿಕೆ
ಕಾಯಿ ತುರಿ: ಒಂದು ಕಪ್
ಅಕ್ಕಿಯ ಸೋಜಿ: ಅರ್ಧ ಕಪ್
ಉಪ್ಪು : ನಿಮ್ಮ ಜಾಣ್ಮೆಯಾಂದಿಗೆ
ಮಾಡುವ ವಿಧಾನ :
ಮೆಣಸು, ಮೆಂತ್ಯ ಮತ್ತು ಉದ್ದಿನ ಬೇಳೆಯನ್ನು ಸ್ವಲ್ಪ ಹುರಿಯಬೇಕು. ತೆಂಗಿನ ಕಾಯಿ, ಕೊತ್ತಂಬರಿ ಬೀಜ, ಹುಣಸೇ, ಬೆಲ್ಲ , ಅರಿಶಿಣ ಮತ್ತು ಹುರಿದ ಈ ಮಿಶ್ರಣವನ್ನು ಅರೆಯಿರಿ. ಉಪ್ಪು ಸೇರಿಸಿ ಇನ್ನೊಂದು ಸುತ್ತು ಮಿಕ್ಸಿ ತಿರುಗಿಸಿ. ಈ ಮಿಶ್ರಣ, ಅಕ್ಕಿ ಸೋಜಿ ಮತ್ತು ಕತ್ತರಿಸಿಟ್ಟಿರುವ ಎಲೆಕೋಸಿನ ಜೊತೆ ಚೆನ್ನಾಗಿ ಕಲೆಸಿ. ಕಡಿಮೆ ನೀರು ಸೇರಿಸಬೇಕು. ನಂತರ ಮಿಶ್ರಣವನ್ನು ಲಡ್ಡುವಿಗಿಂತ ಸ್ವಲ್ಪ ದೊಡ್ಡ ಸೈಜಿನಲ್ಲಿ ಉಂಡೆ ಮಾಡಿ ಅರ್ಧ ಗಂಟೆ ಕಾಲ ಹಬೆಯಲ್ಲಿ ಬೇಯಿಸಿ.
ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ, ಎರಡು ಚಿಟಿಕೆಯಷ್ಟು ಉದ್ದಿನ ಬೇಳೆ , ಸಾಸಿವೆ, ಕರಿಬೇವಿನಸೊಪ್ಪು ಮತ್ತು ಕೆಂಪು ಮೆಣಸನ್ನು ಹುರಿಯಿರಿ. ಬೆಂದ ಎಲೆಕೋಸು ಪತ್ರೊಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಗ್ಗರಣೆ ಬಾಣಲೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಿಹಿಯಾಗಿರಬೇಕಿದ್ದರೆ ಬೆಲ್ಲ ಒಂದಿಷ್ಟು ಹೆಚ್ಚು, ಖಾರ ಬೇಕಿದ್ರೆ ಎರಡು ಮೆಣಸು ಜಾಸ್ತಿ . ಹೀಗೆ ಪತ್ರೊಡೆ ಪರಿಣತರಾಗುತ್ತಿದ್ದಂತೆ ನಿಮ್ಮದೇ ಆದ ಕೈಗುಣದ ಛಾಪು ಒತ್ತಿರುತ್ತೀರಿ.
ಎಲೆಕೋಸಿಗೆ ಬದಲಿಗೆ ಕೆಸುವಿನೆಲೆ ಅಥವಾ ತಗತ್ತೆ ಸೊಪ್ಪನ್ನೂ ಹೆಚ್ಚಿ ಪತ್ರೊಡೆ ಮಾಡಬಹುದು. ನಿಮ್ಮ ಅಡುಗೆ ಲೆಕ್ಕಾಚಾರಗಳು ಒಂದು ಹದಕ್ಕೆ ಬಂದ ಮೇಲೆ ನಿಮಗೇ ಅಂದಾಜಾಗುತ್ತದೆ.



Click it and Unblock the Notifications
