Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಬೇಕರಿಯ ಪಫ್ಸ್ ಯಾಕೆ? ನೀವೇ ಮಾಡಿದ್ರೂ ಓಕೆ!

3-ದೊಡ್ಡ ಗಾತ್ರದ ಆಲೂಗಡ್ಡೆ (ಅವುಗಳನ್ನು ಕುದಿಸಿ, ಸಿಪ್ಪೆ ತೆಗೆದು, ಹಿಸುಕಿಟ್ಟುಕೊಳ್ಳಿ)
1/4-ಕಪ್ ಬೇಯಿಸಿದ ಬಟಾಣಿ
1-ಕಪ್ ಕತ್ತರಿಸಿಬೇಯಿಸಿದ ಗಜ್ಜರಿ
1-ಕಪ್ ಕತ್ತರಿಸಿ ಬೇಯಿಸಿದ ಬೀಟ್ರೂಟ್
1-ಕತ್ತರಿಸಿದ ಈರುಳ್ಳಿ
1/2- ಟೀ ಸ್ಪೂನ್ ಜೀರಿಗೆ
1/2- ಟೀ ಸ್ಪೂನ್ ಸಾಸಿವೆ
1/2- ಟೀ ಸ್ಪೂನ್ ಅರಿಶಿಣ ಪುಡಿ
3- ಕತ್ತರಿಸಿದ ಹಸಿಮೆಣಸಿನ ಕಾಯಿ
1/2- ತುರಿದ ಹಸಿಶುಂಠಿ
1/2- ಟೀ ಸ್ಪೂನ್ ಧನಿಯಾ ಪುಡಿ
1- ಟೀ ಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
1- ಟೀ ಸ್ಪೂನ್ ಗರಮ್ ಮಸಾಲಾ
1- ಟೀ ಸ್ಪೂನ್ ನಿಂಬೆ ಹಣ್ಣಿನ ರಸ
1-ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ
2- ಟೇಬಲ್ ಸ್ಪೂನ್‌ಅಡುಗೆ ಎಣ್ಣೆ
ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ. ಕಾಯ್ದ ಬಳಿಕ ಜೀರಿಗೆ-ಸಾಸಿವೆ ಹಾಕಿ. ಅದು ಸಿಡಿಯ ತೊಡಗಿದಾಗ ಮೊದಲೇ ಕತ್ತರಿಸಿಟ್ಟುಕೊಂಡ ಶುಂಠಿ, ಹಸಿಮೆಣಸಿನ ಕಾಯಿ, ಬೀಟ್‌ರೂಟ್, ಗಜ್ಜರಿ(ಕ್ಯಾರೆಟ್), ಬಟಾಣಿ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ಆನಂತರ ಅದರೊಳಗೆ ಕುದಿಸಿ ಹಿಸುಕಿದ(ಮಿಶ್ರಣ) ಆಲೂಗಡ್ಡೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ. ಅದಕ್ಕೆ ಗರಮ್ ಮಸಲಾ, ಕೆಂಪು ಮೆಣಸಿನ ಕಾಯಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬಾಣಲೆಯನ್ನು ಮುಚ್ಚಿಡಿ. ಆನಂತರ ಅದನ್ನು ಕೆಳಗಿಳಿಸಿ ನಿಂಬೆ ಹಣ್ಣಿನ ರಸ ಮತ್ತು ಕತ್ತರಿಸಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿಕೊಳ್ಳಿ.
ಇನ್ನೊಂದೆಡೆ ಮೈದಾ ಹಿಟ್ಟಿನಲ್ಲಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇರಿಸಿ ಮೃದುವಾಗಿ ಕಲೆಸಿ, ಚಪಾತಿ ಹಿಟ್ಟಿನಂತೆ ಮಾಡಿ ಕೊಳ್ಳಿ. ಅದನ್ನು ಚೌಕಾಕಾರದಲ್ಲಿ ಲಟ್ಟಿಸಿ(ತೀಡುವುದು) ನಾಲ್ಕು ಪದರುಗಳಾಗಿ ಮಾಡಿಕೊಳ್ಳಿ. ಪದರಿನ ಮಧ್ಯದಲ್ಲಿ ತಯಾರಿಸಿದ ಮಿಶ್ರಣವನ್ನು ಹಾಕಿ, ಪದರು ಬಿಚ್ಚಿಕೊಳ್ಳದಂತೆ ನೀರಿನಿಂದ ತೀಡಿಕೊಳ್ಳಿ. ಆಮೇಲೆ ಮೈಕ್ರೋ ವೇವ್‌ಓವನ್‌ನಲ್ಲಿ ಬೇಯಲು ಬಿಡಿ. ಕಂದು ಬಣ್ಣಕ್ಕೆ ತಿರುಗಿದ ನಂತರ ಹೊರ ತೆಗೆಯಿರಿ.
ಈಗ ಬಾಯಲ್ಲಿ ನೀರೂರಿಸುವ ಬಿಸಿಬಿಸಿ ವೆಜಿಟೆಬಲ್ ಪಫ್ಸ್ ರೆಡಿ.



Click it and Unblock the Notifications
