Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನವರಾತ್ರಿ ಸ್ಪೆಷಲ್ ರೆಸಿಪಿ: ಸಾಬುದಾನ ಹಾಗೂ ಸಿಹಿಗೆಣಸಿನ ಪಾಯಸ
ನವರಾತ್ರಿ ಹಬ್ಬದ ಸಡಗರ ಹೆಚ್ಚಿದೆ. ಅಕ್ಟೋಬರ್ 25ರಂದು ನಾವೆಲ್ಲಾ ವಿಜಯದಶಮಿ ಆಚರಿಸಲಿದ್ದೇವೆ. ನವರಾತ್ರಿಯಲ್ಲಿ ಒಂಭತ್ತು ದಿನವೂ ತುಂಬಾ ವಿಶೇಷವಾದದ್ದು. ಭಾನುವಾರ ನವಮಿಯಾಗಿದ್ದು ನೀವು ಈ ವಿಶೇಷ ಸಂದರ್ಭದಲ್ಲಿ ವಿಶೇಷ ತಿನಿಸು ಮಾಡಬಯಸುವುದಾದರೆ ಇಲ್ಲಿದೆ ನೋಡಿ ಸ್ಪೆಷಲ್ ರೆಸಿಪಿ.

ನಾವಿಲ್ಲಿ ಸಾಬುದಾನ ಹಾಗೂ ಸಿಹಿ ಗೆಣಸು ಹಾಕಿ ಮಾಡುವ ಪಾಯಸದ ರೆಸಿಪಿ ನೀಡಿದ್ದೇವೆ. ನೀವು ಸಾಬುದಾನ ಹಾಕಿ ಪಾಯಸ ಮಾಡಬಯಸುವುದಾದರೆ ಈ ರೀತಿ ಟ್ರೈ ಮಾಡಿ ನೋಡಿ:
Recipe By: Reena TK
Recipe Type: Sweet
Serves: 4
-
ಬೇಕಾಗುವ ಸಾಮಗ್ರಿ
ಸಾಬುದಾನ 3 ಚಮಚ
ಸಕ್ಕರೆ 1 ಕಪ್
ಸಿಹಿ ಗೆಣಸು 1
ಗೋಡಂಬಿ 1 ಚಮಚ
ಬಾದಮಿ 1 ಚಮಚ
ಹಾಲು 3 ಕಪ್
ಏಲಕ್ಕಿ 2
-
ಮಾಡುವುದು ಹೇಗೆ?
* ಸಾಬುದಾನವನ್ನು 2 ಗಂಟೆ ನೀರಿನಲ್ಲಿ ನೆನೆಹಾಕಿ.
* ಸಿಹಿ ಗೆಣಸು ತೊಳೆದು ಅದನ್ನು ಕುಕ್ಕರ್‌ನಲ್ಲಿ 2 ವಿಶಲ್ ಬರುವವರೆಗೆ ಬೇಯಿಸಿ(ಕೆಲವೊಂದು ಕುಕ್ಕರ್‌ನಲ್ಲಿ 4 ವಿಶಲ್ ಬೇಕಾಗುವುದು).
* ಈಗ ಸಕ್ಕರೆ ಗೆಣಸಿನ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ.
* ಈಗ ಪಾತ್ರೆಗೆ ಹಾಲು ಹಾಕಿ ಕುದಿಸಿ.
* ಹಾಲು ಕುದಿ ಬಂದ ಮೇಲೆ ಅದರಲ್ಲಿ ಸಾಬುದಾನ ಹಾಕಿ 5-6 ನಿಮಿಷ ಬೇಯಿಸಿ. ಹೀಗೆ ಬೇಯಿಸುವಾಗ ಸೌಟ್‌ನಿಂದ ಆಗಾಗ ತಿರುಗಿಸಿ.
* ಈಗ ಸಕ್ಕರೆ, ಗೋಡಂಬಿ ಪುಡಿ, ಬಾದಾಮಿ ಪುಡಿ ಹಾಕಿ 2 ನಿಮಿಷ ಕುದಿಸಿ.
* ನಂತರ ಸಿಹಿ ಗೆಣಸಿನ ತುಂಡುಗಳನ್ನು ಹಾಕಿ 2 ನಿಮಿಷ ಕುದಿಸಿ.
* ಕೊನೆಗೆ ಕೇಸರಿ, ಏಲಕ್ಕಿ ಹಾಕಿ ತಿರುಗಿಸಿ ಒಂದು ನಿಮಿಷ ಬಳಿಕ ಉರಿಯಿಂದ ಇಳಿಸಿ.
* ಈಗ ಗೋಡಂಬಿ, ಬಾದಾಮಿ, ಕೇಸರಿ, ಪಿಸ್ತಾ ಇವುಗಳಿಂದ ಅಲಂಕರಿಸಿ ಸರ್ವ್ ಮಾಡಿ.
- * ಸಾಬುದಾನ ಮುಟ್ಟುವಾಗ ಮೆದುವಾಗುವಷ್ಟು ಹೊತ್ತು ನೆನೆಹಾಕಬೇಕು. ಸಿಹಿ ಗೆಣಸನ್ನು ಮ್ಯಾಶ್ ಮಾಡುವ ಬದಲು ಚಿಕ್ಕದಾಗಿ ಕತ್ತರಿಸಿ.
- ಸರ್ವ್ : - 1 ಕಪ್
- ಕ್ಯಾಲೋರಿ: - 147ಕ್ಯಾ
- ಕೊಬ್ಬು: - 5ಗ್ರಾಂ
- ಪ್ರೊಟೀನ್: - 4 ಗ್ರಾಂ
- ಕಾರ್ಬ್ಸ್: - 21ಗ್ರಾಂ
- ನಾರಿನಂಶ: - 2 ಗ್ರಾಂ



Click it and Unblock the Notifications