Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪೈನಾಪಲ್ ರೈಸ್ ಟ್ರೈ ಮಾಡಿದ್ದೀರಾ?
ವಾಂಗೀಬಾತ್, ಪುಳಿಯೋಗರೆ , ಚಿತ್ರಾನ್ನ ಈ ರೀತಿಯ ರೈಸ್ ರೆಸಿಪಿಗಳ ಸಾಲಿಗೆ ಈ ಪೈನಾಪಲ್ ರೈಸ್ ಅನ್ನು ಸೇರಿಸಬಹುದು. ಇದರಿಂದ ಚಟ್ನಿ, ರಾಯತ, ಸಾರು ಈ ರೀತಿಯ ಅಡುಗೆಗಳನ್ನೂ ತಯಾರಿಸಬಹುದು. ಇಲ್ಲಿ ನಾವು ಪೈನಾಪಲ್ ರೈಸ್ ಬಗ್ಗೆ ಹೇಳಿದ್ದೇವೆ.
ಈ ಪೈನಾಪಲ್ ರೈಸ್ ಅನ್ನು ಬೆಳಗ್ಗೆ ಮಾಡಿದರೆ ಬ್ರೇಕ್ ಫಾಸ್ಟ್ ಗೆ ಮಾತ್ರವಲ್ಲ, ಲಂಚ್ ಬಾಕ್ಸ್ ಗೂ ತುಂಬಿಕೊಂಡು ತರಬಹುದು. ಈ ಪೈನಾಪಲ್ ರೈಸ್ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಅನ್ನ 1 ಕಪ್
ಪೈನಾಪಲ್ 1 ಕಪ್ (ಚಿಕ್ಕದಾಗಿ ಕತ್ತರಿಸಿದ್ದು)
ಬೇಯಿಸಿದ ಬಟಾಣಿ ಮತ್ತು ಜೋಳ ಅರ್ಧ ಕಪ್
ಈರುಳ್ಳಿ 1 (ಕತ್ತರಿಸಿದ್ದು)
ಕ್ಯಾರೆಟ್ 1
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ ಸೊಪ್ಪು
ಖಾರದ ಪುಡಿ ಅರ್ಧ ಚಮಚ
ಕರಿ ಮೆಣಸಿನ ಪುಡಿ 1 ಚಮಚ
ಎಣ್ಣೆ 1 ಚಮಚ
ನಿಂಬೆ ರಸ 1 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಅನ್ನ ಮಾಡಿ ಆರಲು ಇಡಬೇಕು.
* ತಳ ದಪ್ಪವಿರುವ ಪಾತ್ರೆಯನ್ನು ಉರಿಯಲ್ಲಿಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಕ್ಯಾರೆಟ್ ಮತ್ತು ಪೈನಾಪಲ್ ತುಂಡುಗಳನ್ನು ಹಾಕಿ 2-3 ನಿಮಿಷ ಹುರಿದಿ ಈರುಳ್ಳಿ , ಬೆಳ್ಳುಳ್ಳಿ ಪೇಸ್ಟ್ ಮತ್ತು ಕತ್ತರಿಸಿ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಬೇಯಿಸಿದ ಬಟಾಣಿ ಮತ್ತು ಜೋಳವನ್ನು ಹಾಕಿ, ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ .
* ನಂತರ ಖಾರದ ಪುಡಿ ಹಾಗೂ ಕರಿ ಮೆಣಸಿನ ಪುಡಿ ಹಾಕಿ ಮಿಶ್ರ ಮಾಡಬೇಕು, ರುಚಿಗೆ ತಕ್ಕ ಉಪ್ಪಿನ ಪುಡಿ ಹಾಕಿ, ಅದಕ್ಕೆ ಅರ್ಧ ಗ್ಲಾಸ್ ನೀರು ಹಾಕಿ 4 ನಿಮಿಷ ಬೇಯಿಸಿ.
* ನಂತರ ಅನ್ನವನ್ನು ಹಾಕಿ ಮಿಶ್ರಣ ಮಾಡಿ ನಿಂಬೆ ರಸವನ್ನು ಹಿಂಡಿದರೆ ಪೈನಾಪಲ್ ರೈಸ್ ರೆಡಿ.



Click it and Unblock the Notifications
