Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ದಣಿವಿಗೆ ಬೆಸ್ಟ್ ಈ ದಾಲ್ ಖಿಚಡಿ

ಬೇಕಾಗುವ ಸಾಮಗ್ರಿಗಳು:
1. ಉದ್ದಿನ ಬೇಳೆ 1 ಕಪ್
2. ಅಕ್ಕಿ 1 ಕಪ್
3. ಆಲುಗೆಡ್ಡೆ 1 (ಕತ್ತರಿಸಿದ್ದು)
4. ಕ್ಯಾರೆಟ್ 2 (ಕತ್ತರಿಸಿದ್ದು)
5. ಹೂ ಕೋಸು ಸ್ವಲ್ಪ
6. ಈರುಳ್ಳಿ 1
7. ಶುಂಠಿ
8. ಟೊಮೆಟೊ 1
9. ಹಸಿ ಮೆನಸು 3-4
10. ಜೀರಿಗೆ 1 ಚಮಚ
11. ಜೀರಿಗೆ ಪುಡಿ 1 ಚಮಚ
12. ಮೆಣಸಿನ ಪುಡಿ 1 ಚಮಚ
13. ಪಲಾವ್ ಎಲೆ 2
14. ಕರಿಮೆಣಸು 5
15. ಚಕ್ಕೆ 5
16. ಲವಂಗ 5
17. ಏಲಕ್ಕಿ 4
18. ಸಾಸಿವೆ ಎಣ್ಣೆ 2 ಚಮಚ
19. ತುಪ್ಪ 1 ಚಮಚ
20. ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1. ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಉದ್ದಿನ ಬೇಳೆಯನ್ನು ಹಾಕಿ 2-3 ನಿಮಿಷ ಎಣ್ಣೆ ಹಾಕದೆ ಹುರಿಯಬೇಕು.
2. ನಂತರ ಪ್ರೆಶರ್ ಕುಕ್ಕರಿನಲ್ಲಿ ಎಣ್ಣೆ ಹಾಕಿ ಅದರಲಲ್ಇ ಆಲೂಗೆಡ್ಡೆ ಮತ್ತು ಹೂಕೋಸು ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು, ನಂತರ ಅದನ್ನು ಒಂದು ಪೇಪರ್ ನಲ್ಲಿ ತೆಗೆದಿಡಬೇಕು.
3. ಈಗ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿಯನ್ನು ಎಣ್ಣೆಯಲ್ಲಿ ಹಾಕಿ ಅದಕ್ಕೆ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
4. ನಂತರ ಕತ್ತರಿಸಿದ ಶುಂಠಿಯ ತುಂಡುಗಳು ಮತ್ತು ಟೊಮೆಟೊ ಹಾಕಿ, ಉಪ್ಪು ಸೇರಿಸಿ ಮಿಕ್ಸ್ ಮಾಡಬೇಕು. ಇದಕ್ಕೆ ಜೀರಿಗೆ ಪುಡಿ ಮತ್ತು ಹಸಿಮೆಣಸು ಹಾಕಿ 2-3ನಿಮಿಷ ಬೇಯಿಸಬೇಕು.
5. ಈಹ ತೊಳೆದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಹಾಕಿ , ಅದಕ್ಕೆ ಕ್ಯಾರೆಟ್, ಕರಿಮೆಣಸು ಹಾಕಿ ಚೆನ್ನಾಗಿ ತಿರುಗಿಸಿ 2 ಕಪ್ ನೀರು ಹಾಕಬೇಕು.
6. ಹೆಚ್ಚು ಉರಿಯಲ್ಲಿ ಪ್ರೆಶರ್ ಕುಕ್ಕರಿನ ವಿಶಲ್ 3-4, ನಂತರ ಸಣ್ಣ ಉರಿಯಲ್ಲಿ 3-4 ವಿಶಲ್ ಆದ ನಂತರ ಅದನ್ನು ತೆಗೆದು ಅದಕ್ಕೆ ಒಂದು ಚಮಚ ತುಪ್ಪ ಹಾಕಿದರೆ ದಾಲ್ ಖಿಚಡಿ ರೆಡಿ.



Click it and Unblock the Notifications
