Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮೆಂತ್ಯ ಭಾತ್

ಸೋನಾಮಸೂರಿ ಅಕ್ಕಿ : ಅರ್ಧ ಕೆಜಿ
ಮೆಂತ್ಯ ಎರಡು ಚಮಚ
ಕ್ಯಾರೆಟ್: 100 ಗ್ರಾಂ
ಹುರುಳೀ ಕಾಯಿ : 100 ಗ್ರಾಂ
ದಪ್ಪ ಮೆಣಸಿನ ಕಾಯಿ: 1
ಶುಂಠಿ : ಹೆಬ್ಬೆರಳಿನಷ್ಟು
ಈರುಳ್ಳಿ : 2
ಎಣ್ಣೆ, ಉಪ್ಪು, ಗರಂ ಮಸಾಲೆ : 3-4 ಚಿಟಿಕೆ
ಹಸಿ ಮೆಣಸಿನ ಕಾಯಿ : 10 ರಿಂದ 12
ಖಾರ ಬೇಕಾದಷ್ಟು, ಸ್ವಲ್ಪ ಜೀರಿಗೆ
ಮಾಡುವ ವಿಧಾನ : ಅಕ್ಕಿಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ತರಕಾರಿಗಳನ್ನು ಸಣ್ಣಗೆ ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ. ತರಕಾರಿ ಹೋಳುಗಳ ಆಕಾರ ವಿಕಾರಗಳು ನಿಮ್ಮ ಕೌಶಲ್ಯ ಜಾಣ್ಮೆಗೆ ಬಿಟ್ಟದ್ದು. ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಹಚ್ಚಿಕೊಂಡರೆ ಒಳ್ಳೆಯದು.
ಮೆಂತ್ಯಾ ಬಾತ್ ಮಾಡುವುದಕ್ಕೆ ಕುಕ್ಕರ್ ಬೇಡ. ದಪ್ಪ ತಳದ ಪಾತ್ರೆಯಾದರೆ ಚೆನ್ನಾಗಿರುತ್ತದೆ. ಮೊದಲು ಅರ್ಧಬಟ್ಟಲು ಎಣ್ಣೆ ಹಾಕಿ ಕಾಯಿಸಿ. ನಂತರ ಜೀರಿಗೆ, ಮೆಂತ್ಯಹಾಕಿ.
ಬೆಳ್ಳುಳ್ಳಿ- ಶುಂಠಿ ಅರೆದು ಬೇಯುತ್ತಿರುವ ಮಿಶ್ರಣಕ್ಕೆ ಸೇರಿಸಿ. ಅರ್ಧ ನಿಮಿಷಕ್ಕೆಲ್ಲ ಘಂ ಅಂತ ಪರಿಮಳ ಬರುತ್ತದೆ. ಅಂದರೆ ಬೆಳ್ಳುಳ್ಳಿ ಮಿಶ್ರಣ ಚೆನ್ನಾಗಿ ಬೆಂದಿದೆ ಎಂಬ ಸಂಕೇತ. ಈಗ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಬಾಡಿಸಿ ತರಕಾರಿ ಬಟಾಣಿ ಸುರಿಯಿರಿ. ಆಗಾಗ ಮಿಶ್ರಣವನ್ನು ಚೆನ್ನಾಗಿ ಮಗುಚುತ್ತಿರಬೇಕು. ಬೆಂಕಿ ತೀರಾ ಜೋರಾಗಿದ್ದರೆ ಬಾತ್ ತಳ ಹಿಡಿಯುತ್ತದೆ. ಈಗ ಉರಿ ಆರಿಸಿ ಪಾತ್ರೆಗೆ ಪ್ಲೇಟ್ ಮುಚ್ಚಿಟ್ಟು ಹಬೆಯಲ್ಲಿ ಬೇಯಲು ಬಿಡಿ.
ಹಬೆಯ ನೀರು ಬಸಿದು 5-6 ನಿಮಿಷಕ್ಕೆ ತೊಳೆದ ಅಕ್ಕಿ ಹಾಕಿ ಮತ್ತೆ ಮಗುಚಿ. ಒಂದು ಕಪ್ ಅಕ್ಕಿಗೆ ಎರಡೂವರೆ ಕಪ್‌ನಂತೆ ನೀರು ಹಾಕಿ ಮಗುಚಿ, ಪ್ಲೇಟ್ ಮುಚ್ಚಿಟ್ಟು ಬೇಯಿಸಿ. ಅಕ್ಕಿ ಬೇಯುತ್ತಾ ಅನ್ನ ಅರಳಲು ಪ್ರಾರಂಭವಾದಾಗ ರುಚಿಗೆ ತಕ್ಕಷ್ಟು ಉಪ್ಪು , ಅಗತ್ಯವಿದ್ದರೆ ನಿಂಬೆ ರಸ, 2 ಚಮಚ ತುಪ್ಪ ಹಾಕಿ ಕೆದಕಿ ಮತ್ತೆ ಮುಚ್ಚಿ ಬೇಯಿಸಿ. ನೀರು ಇಂಗುತ್ತಿದ್ದಂತೆಯೇ ತಯಾರು.
ತುಪ್ಪ, ಮೆಂತ್ಯ, ಶುಂಠಿ, ಜೀರಿಗೆ...ಇದೆಲ್ಲ ಹಾಕುವುದರಿಂದ ಇದು ಹೊಟ್ಟೆಗೂ ತಂಪು. ಮೂಗರಳಿಸುವ ಪರಿಮಳದ ನಡುವೆ ಮೆಂತ್ಯದ ಕಹಿಯೂ ಮಾಯವಾಗಿರುತ್ತದೆ. ಇದಕ್ಕೆ ಹೆಚ್ಚು ತೆಂಗಿನ ಕಾಯಿ, ಎಣ್ಣೆ - ಹೆಚ್ಚು ಮಸಾಲೆ ಹಾಕದೇ ಇರುವುದರಿಂದ ಆರೋಗ್ಯಕ್ಕೂ ಉತ್ತಮ. ಸರಿ. ಶುರು ಮಾಡಿ ಅಡುಗೆ, ಆಲ್ ದ ಬೆಸ್ಟ್!



Click it and Unblock the Notifications
