Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ದಟ್ಸ್ ಪಾಕಶಾಲೆ: ನವರತ್ನ ಪಲಾವ್
ಕೂಲ್ ಕೂಲ್ ನವರತ್ನ ಆಯಿಲ್ ನೋಡಿದ್ದೀವಿ ಇದ್ಯಾವುದು ನವರತ್ನ ಪಲಾವ್ಎಂದು ತಲೆಕೆಡಿಸಿಕೊಳ್ಳದೆ ಕೂಲಾಗಿ ನವರತ್ನ ಪಲಾವ್ ಮಾಡಲು ಸಿದ್ಧರಾಗಿ. ಇಷ್ಟಕ್ಕೂ ನವರತ್ನ ಪಲಾವ್ ಎಂದರೆ ಇದರಲ್ಲಿ ನವಧಾನ್ಯಗಳನ್ನೇನು ಬಳಸಿಲ್ಲ ಆದರೆ ಒಂಬತ್ತು ವಿಧದ ತರಕಾರಿಗಳನ್ನು ಬಳಸಲಾಗಿದೆ. ಹಾಗಾಗಿ ಇದಕ್ಕೆ ನವರತ್ನ ಪಲಾವ್ ಎಂದು ಹೆಸರಿಸಲಾಗಿದೆ. ಬೇಕಿದ್ದರೆ ಒಂದೆರಡು ತರಕಾರಿಗಳನ್ನು ಕಡಿಮೆ ಮಾಡಿಕೊಂಡು ಪಂಚರತ್ನ, ತ್ರಿರತ್ನ... ಎಂಥಲೂ ಒಂದೆರಡು ಹೆಚ್ಚಿಗೆ ಸೇರಿಸಿ ಏಕಾದಶಿ, ದ್ವಾದಶಿ...ಪಲಾವ್ ಎಂದು ಕರೆದುಕೊಂಡರೆ ಅಡ್ಡಿಯಿಲ್ಲ. ಆದರೆ ನವರತ್ನ ಪಲಾವ್ ತಿಂದ ಮೇಲೆ ಕೂಲ್ ಆಗುತ್ತೀರೋ ಅಥವಾ ಗರಂ ಆಗುತ್ತೀರೋ ಅನ್ನುವುದನ್ನು ತಪ್ಪದೆ ನಮಗೆ ತಿಳಿಸಿ.
*ಶ್ರೀರಕ್ಷಾ, ಬೆಂಗಳೂರು
ಹೊಂದಿಸಿಕೊಳ್ಳಬೇಕಾದ ಸಾಮಗ್ರಿ
ಬಾಸ್ಮತಿ ಅಕ್ಕಿ: 1 ಲೋಟ
ಹೆಚ್ಚಿಕೊಂಡ ಆಲೂಗಡ್ಡೆ: ¼ ಲೋಟ
ಪನ್ನೀರಿನ ತುಂಡುಗಳು: ¼ ಲೋಟ
ದಪ್ಪ ಮೆಣಸಿನಕಾಯಿ: 2
ಕ್ಯಾರೆಟ್: 2
ಬಟಾಣಿ: ¼ ಲೋಟ
ಚಪ್ಪರದ ಅವರೆಕಾಯಿ: 100 ಗ್ರಾಂ
ಒಣ ದ್ರಾಕ್ಷಿ: 1 ಚಮಚ
ತುಪ್ಪ: 4 ಚಮಚ
ಪಲಾವ್ ಎಲೆ:1
ಗೋಡಂಬಿ: 1 ಚಮಚ
ಉಪ್ಪು, ಸಕ್ಕರೆ: ರುಚಿಗೆ ಸರಿಹೊಂದುವಷ್ಟು
ತಾಜಾ ಗಟ್ಟಿ ಮೊಸರು: 1 ಲೋಟ
ರುಬ್ಬಿಕೊಂಡ ಟೊಮ್ಯಾಟೋ: 3
ಅನಾನಸ್ ತುಂಡುಗಳು: ¼ ಲೋಟ
ಕತ್ತರಿಸಿಟ್ಟ ಚೆರಿ ಹಣ್ಣು: 2 ಚಮಚ
ರುಬ್ಬಿಕೊಳ್ಳಬೇಕಾದ ಪದಾರ್ಥಗಳು
ಹಸಿ ಮೆಣಸಿನಕಾಯಿ: 4
ಕಾಶ್ಮೀರಿ ಕೆಂಪು ಮೆಣಸಿನಕಾಯಿ: 5
ಶುಂಠಿ: ½ ಇಂಚಿನ ತುಂಡು
ಬೆಳ್ಳುಳ್ಳಿ: 6 ತೊಳೆ
ಕೊತ್ತಂಬರಿ ಬೀಜ: 1 ಚಮಚ
ಜೀರಿಗೆ: ¼ ಚಮಚ
ಏಲಕ್ಕಿ: 2
ಕಪ್ಪು ಜೀರಿಗೆ(ಶಾಹಿ ಜೀರಿಗೆ): ¼ ಚಮಚ
ಮಾಡುವ ವಿಧಾನ
ಶುದ್ಧವಾದ ನೀರಿನಲ್ಲಿ ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ಹೆಚ್ಚಿಕೊಂಡ ಆಲೂಗಡ್ಡೆ ಹಾಗೂ ಪನ್ನೀರ್ ತುಂಡುಗಳನ್ನು ಎಣ್ಣೆಯಲ್ಲಿ ಕರಿಯಿರಿ. ಹೆಚ್ಚಿಕೊಂಡ ಕ್ಯಾರೆಟ್, ಚಪ್ಪರದ ಅವರೆಕಾಯಿ ಮತ್ತು ಬಟಾಣಿಯನ್ನು ಕುಕ್ಕರಿನಲ್ಲಿ ಬೇಯಿಸಿ. ದಪ್ಪ ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಮೊಸರನ್ನು ಕಡೆದಿಟ್ಟುಕೊಳ್ಳಿ. ಟೊಮ್ಯಾಟೋವನ್ನು ಬಿಸಿನೀರಿನಲ್ಲಿ ನೆನೆಸಿ, ಸಿಪ್ಪೆ ಸುಲಿದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ದಪ್ಪ ತಳದ ಅಗಲವಾದ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿರಿ. ಇದಕ್ಕೆ ಪಲಾವ್ ಎಲೆ, ದಪ್ಪ ಮೆಣಸಿನಕಾಯಿ ಮತ್ತು ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ ಎಣ್ಣೆ ಇಂಗುವವರೆಗೂ ಹುರಿಯಿರಿ. ಇದಕ್ಕೆ ನೆನೆಸಿದ ಅಕ್ಕಿಯನ್ನು ಬೆರಸಿ ಕೆಲ ನಿಮಿಷಗಳ ಕಾಲ ಹುರಿಯಿರಿ. ಬೇಯಿಸಿದ ತರಕಾರಿ, ಮೊಸರು, ಟೊಮ್ಯಾಟೋ ರಸ, ಉಪ್ಪು ಮತ್ತು ಒಂದು ಲೋಟ ನೀರಿನೊಂದಿಗೆ ಸಕ್ಕರೆಯನ್ನು ಇದಕ್ಕೆ ಸೇರಿಸಿ ಕಲಸಿ.
ಉರಿಯನ್ನು ಸಣ್ಣಗೆ ಮಾಡಿ ಮುಚ್ಚಳ ಹಾಕಿ ಅನ್ನವನ್ನು ಬೇಯಿಸಿಕೊಳ್ಳಿರಿ. ಅನ್ನ ಬೆಂದ ನಂತರ ಅದಕ್ಕೆ ಆಲೂಗಡ್ಡೆ, ಪನ್ನೀರಿನ ತುಂಡುಗಳು, ಹುರಿದ ಗೋಡಂಬಿ, ದ್ರಾಕ್ಷಿ, ಅನಾನಸ್ ತುಂಡುಗಳು ಮತ್ತು ಚೆರಿ ಹಣ್ಣುಗಳನ್ನು ಹದವಾಗಿ ಬೆರೆಸಿರಿ. ಹೀಗೆ ತಯಾರಾದ ಬಿಸಿಬಿಸಿ ನವರತ್ನ ಪಲಾವನ್ನು ಉಣ ಬಡಿಸಬಹುದು



Click it and Unblock the Notifications