Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಉಪ್ಪಿಟ್ಟು ಮೇಲೆ ಮುನಿಸೇ, ಬಿರಿಯಾನಿ ತಿನ್ನು ಕೂಸೇ..!

ಬೇಕಾಗುವ ಸಾಮಾಗ್ರಿಗಳು:
*ಬಾಸುಮತಿ ಅಕ್ಕಿ
* ಬಟಾಣಿ 1/2 ಕಪ್
* ಬೀನ್ಸ್, ಕ್ಯಾರೆಟ್, ಹೂಕೋಸು( ಒಂದು ಬಟ್ಟಲು)
* ತುಪ್ಪ 2 ಚಮಚ
* ಈರುಳ್ಳಿ 1
* ಟೊಮೆಟೊ 1
* ಹಸಿ ಮೆಣಸು 5-6
* ಬೆಳ್ಳುಳ್ಳಿ ಎಸಳು 7-8
* ಗರಂ ಮಸಾಲ ಪುಡಿ ಅಥವಾ ಚಕ್ಕೆ, ಲವಂಗ, ಪಲಾವ್ ಎಲೆ
* ಕೆಂಪು ಮೆಣಸಿನ ಪುಡಿ (ನಿಮ್ಮ ಖಾರದ ಅಳತೆಗೆ ತಕ್ಕಷ್ಟು)
* ಅರಿಶಿಣ ಪುಡಿ 1/2 ಚಮಚ
* ಉಪ್ಪು
* ಕೊತ್ತಂಬರಿ ಸೊಪ್ಪು
* ಗೋಡಂಬಿ
* ಒಣದ್ರಾಕ್ಷಿ
* ಬೇಯಿಸಿದ ಮೊಟ್ಟೆ 2 ( ಬೇಕಿದ್ದರೆ)
ತಯಾರಿಸುವ ವಿಧಾನ:
1. 2 ಕಪ್ ಅಕ್ಕಿಯನ್ನು ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆ ಹಾಕಬೇಕು.
2. ನಂತರ ನೀರನ್ನು ಚೆಲ್ಲಿ ಅಕ್ಕಿಯನ್ನು ಒಂದು ಪಾತ್ರೆಯಲ್ಲಿಡಿ.
3. ಫ್ರೆಶರ್ ಕುಕ್ಕರಿನಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಹುರಿಯಿರಿ.
4. ಎಲ್ಲಾ ಮಸಾಲ ಪುಡಿಯನ್ನುಸೇರಿಸಿ
5. ಹಸಿ ಮೆಣಸು ಮತ್ತು ಟೊಮೆಟೊ ಹಾಕಿ 2-3 ನಿಮಿಷ ಸೌಟಿನಿಂದ ಆಡಿಸುತ್ತಾ ಇರಬೇಕು. ಆಗ ಮಸಾಲೆ ಮತ್ತು ಟೊಮೆಟೊ ಚೆನ್ನಾಗಿ ಮಿಶ್ರ ಆಗುತ್ತದೆ.
6. ಈಗ ಆ ಮಿಶ್ರಣಕ್ಕೆ ತರಕಾರಿಗಳನ್ನು ಸೇರಿಸಿ 2-3 ನಿಮಿಷ ಹುರಿಯಬೇಕು.
7.ರುಚಿಗೆ ತಕ್ಕ ಉಪ್ಪು ಹಾಕಿ.
8. ಈಗ ಅಕ್ಕಿಯನ್ನು ಆ ಮಿಶ್ರಣಕ್ಕೆ ಹಾಕಿ 1-2 ನಿಮಿಷ ಹುರಿದು 4 ಕಪ್ ನೀರು ಹಾಕಿ ಕುಕ್ಕರಿನಲ್ಲಿ 2 ವಿಶಲ್ ಬರುವವರೆಗೆ ಬೇಯಿಸಿ.
9. ಈಗ ಕುಕ್ಕರ್ ನಿಂದ ಆವಿ ಚೆನ್ನಾಗಿ ಹೋದ ಮೇಲೆ ಕುಕ್ಕರ್ ಓಪನ್ ಮಾಡಿ ಗೋಡಂಬಿ, ಒಣದ್ರಾಕ್ಷಿಗಳನ್ನು ಸೇರಿಸಿದರೆ ಬಿರಿಯಾನಿ ರೆಡಿ.
ಇದಕ್ಕೆ ಬೇಕಾದರೆ ಬೇಯಿಸಿದ ಮೊಟ್ಟೆಗಳನ್ನು ಕತ್ತರಿಸಿ ಸೇರಿಸಬಹುದು.



Click it and Unblock the Notifications
