Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಿಹಿ ಮತ್ತು ಖಾರ ಮಿಶ್ರಿತ ಆಲೂದಮ್ ರೆಸಿಪಿ
ಆಲೂ ದಮ್ ಉತ್ತರ ಭಾರತದ ಕಡೆ ತುಂಬಾ ಪ್ರಸಿದ್ಧಿಯನ್ನು ಪಡೆದಂತಹ ಅಡುಗೆಯಾಗಿದೆ. ಈ ಅಡುಗೆಯನ್ನು ರೊಟ್ಟಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರುಚಿಯಲ್ಲಿ ಆಲೂದಮ್ ಅನ್ನು ಮಾಡುತ್ತಾರೆ.
ಇಲ್ಲಿ ನಾವು ಸಿಹಿ ಮತ್ತು ಖಾರ ಮಿಶ್ರಿತ ಆಲೂದಮ್ ನ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
* ಆಲೂಗೆಡ್ಡೆ 5-6 (ಬೇಯಿಸಿದ್ದು)
* ಈರುಳ್ಳಿ 2
* ಟೊಮೆಟೊ 1
* ಹಸಿ ಮೆಣಸಿನಕಾಯಿ 3-4
* ಶುಂಠಿ ಪೇಸ್ಟ್ 1 ಚಮಚ
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಅರಿಶಿಣ ಪುಡಿ ಅರ್ಧ ಚಮಚ
* ತೆಂಗಿನ ತುರಿ 1 ಚಮಚ
* ಕೆಂಪು ಮೆಣಸಿನ ಪುಡಿ 1/2 ಚಮಚ
* ಕೊತ್ತಂಬರಿ ಪುಡಿ 2 ಚಮಚ
* ಟೊಮೆಟೊ ಪೇಸ್ಟ್ ಅರ್ಧ ಕಪ್
* ಲವಂಗ 1
* ಹುಣಸೆ ಹಣ್ಣಿನ ರಸ 2 ಚಮಚ
* ಚಕ್ಕೆ 1 ಪೀಸ್
* ಏಲಕ್ಕಿ 1
* ಪಲಾವ್ ಎಲೆ 1
* ಎಣ್ಣೆ
* ರುಚಿಗೆ ತಕ್ಕ ಉಪ್ಪು
* ಸಕ್ಕರೆ 1 ಚಮಚ
ತಯಾರಿಸುವ ವಿಧಾನ:
1. ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
2. ಈಗ ಒಂದು ಬಟ್ಟಲಿನಲ್ಲಿ ಹುಣಸೆ ಹಣ್ಣಿನ ರಸ, ಖಾರದ ಪುಡಿ, ಕೊತ್ತಂಬರಿ ಪುಡಿ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿ.
3. ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಪಲಾವ್ ಎಲೆ, ಚಕ್ಕೆ ಮತ್ತು ಏಲಕ್ಕಿ ಹಾಕಬೇಕು.
4. ಈಗ ರುಬ್ಬಿದ ಮಿಶ್ರಣವನ್ನು ಹಾಕಿ 2-3 ನಿಮಿಷ ಹುರಿದು ನಂತರ ಕಲೆಸಿದ ಮಸಾಲೆಯನ್ನು ಹಾಕಿ ಸ್ವಲ್ಪ ನೀರು ಹಾಕಿ ಕುದಿಸಬೇಕು. ಟೊಮೆಟೊ ಪೇಸ್ಟ್ ಹಾಕಿ, ನಂತರ ತೆಂಗಿನ ತುರಿ, ಗರಂ ಮಸಾಲ ಸೇರಿಸಬೇಕು.
5. ಮಿಶ್ರಣ ಕುದಿ ಬರುವಾಗ ಒಂದು ಆಲೂಗೆಡ್ಡೆಯನ್ನು 4 ತುಂಡುಗಳಾಗಿ ಮಾಡಿ ಗ್ರೇವಿಯಲ್ಲಿ ಹಾಕಿ, ಸಕ್ಕರೆ ಸೇರಿಸಿ ಕುದಿಸಿ. ಮಿಶ್ರಣ ಗ್ರೇವಿ ರೀತಿಯಲ್ಲಿ ಆದ ತಕ್ಷಣ ಉರಿಯಿಂದ ಇಳಿಸಿ. ಈಗ ಆಲೂದಮ್ ರೊಟ್ಟಿ ಅಥವಾ ಚಪಾತಿ ಜೊತೆ ತಿನ್ನಲು ರೆಡಿ.



Click it and Unblock the Notifications
