Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಿಂಧಿ ಶೈಲಿಯಲ್ಲಿ ರುಚಿಯಾದ ಚನ್ನಾ ಮಸಾಲ
ಚನ್ನಾ ಮಸಾಲೆ/ಲ ಸಾಮಾನ್ಯವಾಗಿ ಎಲ್ಲರಿಗೆ ಇಷ್ಟವಾಗುವ ಖಾದ್ಯವಾಗಿದೆ. ಚನ್ನಾ ಮಸಾಲವನ್ನು 10ಕ್ಕೂ ಮಿಗಿಲಾದ ರುಚಿಯಲ್ಲಿ ತಯಾರಿಸಬಹುದು. ಗ್ರೇವಿ ರೀತಿ ಮಾಡುವ ಚನ್ನಾ ಮಸಾಲವನ್ನು ಅನ್ನ, ಚಪಾತಿ, ಪೂರಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ.
ಇಲ್ಲಿ ನಾವು ಸಿಂಧಿ ಶೈಲಿಯಲ್ಲಿ ಚನ್ನಾ ಮಸಾಲ ಮಾಡುವ ವಿಧಾನ ಹೇಳಿದ್ಧೇವೆ. ಕೊತ್ತಂಬರಿ ಸೊಪ್ಪನ್ನು ರುಬ್ಬಿ ಮಾಡುವುದೇ ಇದರ ಪ್ರತ್ಯೇಕ ರುಚಿಗೆ ಕಾರಣವಾಗಿದೆ. ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಚನ್ನಾ(ದೊಡ್ಡ ಕಡಲೆ) 2 ಕಪ್
ಈರುಳ್ಳಿ 2
ಸ್ವಲ್ಪ ಕೊತ್ತಂಬರಿ ಸೊಪ್ಪು
ಟೊಮೆಟೊ 2
ಹಸಿ ಮೆಣಸಿನಕಾಯಿ 2-3
ಶುಂಠಿ
ಬೆಳ್ಳುಳ್ಳಿ
ಒಣ ಮಾವಿನ ಪುಡಿ 1 ಚಮಚ
ಕೊತ್ತಂಬರಿ ಪುಡಿ 1 ಚಮಚ
ಅರಿಶಿಣ ಪುಡಿ
ಎಣ್ಣೆ 2 ಚಮಚ
ನೀರು
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಚನ್ನಾವನ್ನು 6 ಗಂಟೆಗಳ ನೀರಿನಲ್ಲಿ ನೆನೆ ಹಾಕಿ.
* ನಂತರ ಚೆನ್ನಾವನ್ನು ತೊಳೆದು ಚನ್ನಾ ಬೇಯಲು ತಕ್ಕ ನೀರು ಹಾಕಿ, ಸ್ವಲ್ಪ ಉಪ್ಪು ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ.
* ಈಗ ಸ್ವಲ್ಪ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ರುಬ್ಬಿ.
* ಈಗ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈ ಪೇಸ್ಟ್ ಹಾಕಿ 2 ನಿಮಿಷ ಹುರಿದು, ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಹುರಿಯಿರಿ.
* ಈಗ ಬೇಯಿಸಿದ ಚನ್ನಾವನ್ನು ಹಾಕಿ, ಅದನ್ನು ಬೇಯಿಸಿದ ನೀರನ್ನು ಗ್ರೇವಿಗೆ ತಕ್ಕಷ್ಟು ಹಾಕಿ, ರುಚಿಗೆ ತಕ್ಕ ಉಪ್ಪು, ಸ್ವಲ್ಪ ಅರಿಶಿಣ, ಒಣ ಮಾವಿನ ಪುಡಿ ಸೇರಿಸಿ ಮತ್ತೆ 5 ನಿಮಿಷ ಬೇಯಿಸಿದರೆ ಚನ್ನಾ ಮಸಾಲ ರೆಡಿ.



Click it and Unblock the Notifications
