Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಶೀತ, ಕೆಮ್ಮು ಹತ್ತಿರ ಸುಳಿಯದಿರಲು ಈ ಅಡುಗೆ!
ಮಳೆಗಾಲ ಶುರುವಾಯಿತು. ಈಗ ಶೀತ, ನೆಗಡಿ, ಜ್ವರ ಸಾಮನ್ಯ. ಜ್ವರ ಬಂದರೆ ಬಾಯಿಗೆ ಯಾವ ಅಡುಗೆಯೂ ರುಚಿಸುವುದಿಲ್ಲ. ಆಗ ಕರಿಮೆಣಸಿನ ಕಾಳು ತಯಾರಿಸಿದ ಸಾರು(ರಸಂ) ಅಥವಾ ಕರಿಮೆಣಸಿ ಕಷಾಯ ಮಾಡಿ ಸೇವಿಸಿದರೆ ಬಾಯಿಗೂ ರುಚಿಸುವುದು ಮತ್ತು ಇದು ಜ್ವರ, ಶೀತ, ನೆಗಡಿ ಕಡಿಮೆ ಮಾಡುವುದರಿಂದ ಆರೋಗ್ಯಕ್ಕೂ ಹಿತ. ಇವತ್ತು ನಾವು ಕರಿಮೆಣಸಿನ ಸಾರು ಮತ್ತು ಕಷಾಯ ಮಾಡುವ ವಿಧಾನ ತಿಳಿಯೋಣ.

1. ಕರಿಮೆಣಸಿನ ಸಾರು ಮಾಡುವ ವಿಧಾನ:
ಬೇಕಾಗುವ ಸಾಮಾಗ್ರಿಗಳು:
* ಕರಿಮೆಣಸಿನ ಕಾಳು 2 ಚಮಚ
* ಕಾಲು ಚಮಚ ಕೊತ್ತಂಬರಿ
*ಕಾಲು ಚಮಚ ಜೀರಿಗೆ
*ಕಾಲು ಚಮಚ ಉದ್ದಿನ ಬೇಳೆ
* ತೆಂಗಿನಕಾಯಿ ತುರಿ ಒಂದು ಕಪ್
* ನಿಂಬೆ ಗಾತ್ರದ ಹುಣಸೆ ಹುಳಿ
* ಹುಳಿಯಷ್ಟು ಗಾತ್ರದ ಬೆಲ್ಲ
* ರುಚಿಗೆ ತಕ್ಕ ಉಪ್ಪು
* ಕರಿಬೇವಿನ ಎಲೆ
* ಬೆಳ್ಳುಳ್ಳಿ
* ಸಾಸಿವೆ
* ಎಣ್ಣೆ
ತಯಾರಿಸುವ ವಿಧಾನ:
1. ತೆಂಗಿನ ಕಾಯಿತುರಿಯನ್ನು ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಬೇಕು.
2. ಈಗ ಕರಿಮೆಣಸಿನ ಕಾಳು, ಜೀರಿಗೆ, ಉದ್ದಿನ ಬೇಳೆ ಕೊತ್ತಂಬರಿ ಹಾಕಿ ಉದ್ದಿನ ಬೇಳೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ಹುರಿದ ತೆಂಗಿನ ಕಾಯಿ ಮತ್ತು ಹುರಿದ ಸಾಮಾಗ್ರಿಗಳನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣನೆ ರುಬ್ಬಬೇಕು. ಅರೆಯುವಾಗ ಬೆಲ್ಲವನ್ನು ತುರಿದು ಜೊತೆಯಲ್ಲಿ ಹಾಕಿ ಅರೆಯಿರಿ.
4. ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಬರುವಾಗ ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆ ಹಾಕಿ ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವಾಗ ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಬೇಕು. ನಂತರ ಉರಿಯಿಂದ ತೆಗೆಯಬೇಕು.
ಈ ರಸವನ್ನು ಬಿಸಿಯಾದ ಅನ್ನದ ಜೊತೆ ಕಲೆಸಿಕೊಂಡು ತಿನ್ನಲು ರುಚಿಕರವಾಗಿರುತ್ತದೆ. ತುಂಬಾ ಶೀತ ಇದ್ದರೆ ಹದ ಬಿಸಿ ಮಾಡಿ ಕುಡಿದರೆ ಶೀತ ಕಡಿಮೆಯಾಗುತ್ತದೆ.
ಈ ರಸ ಮಾಡಿಟ್ಟರೆ ಒಂದು ವಾರದವರೆಗೆ ಬಿಸಿ ಮಾಡಿಕೊಂಡು ತಿನ್ನಬಹುದು.
ಕರಿಮೆಣಸಿನ ಕಷಾಯ ಮಾಡುವ ವಿಧಾನ:
ಬೇಕಾಗುವ ಸಾಮಾಗ್ರಿಗಳು:
* ಕರಿಮೆಣಸು 2 ಚಮಚ
* 1/4 ಚಮಚ ಕೊತ್ತಂಬರಿ
* ಅರ್ಧ ಚಮಚ ಜೀರಿಗೆ
* ಕಾಲು ಚಮಚ ಉದ್ದಿನ ಬೇಳೆ
* ಒಂದು ಏಲಕ್ಕಿ
* ಲವಂಗ 2
* ಒಣ ಶುಂಠಿಯ ತುಂಡು ( ಅರ್ಧ ಇಂಚು)
* ಅರಿಶಿಣ 1/ 4 ಚಮಚ
* ರುಚಿಗೆ ತಕ್ಕ ಉಪ್ಪು
* ತುಳಸಿ ಎಲೆ (ಬೇಕಿದ್ದರೆ)
ಮಾಡುವ ವಿಧಾನ: ಈ ಮೇಲಿನ ಸಾಮಾಗ್ರಿಗಳನ್ನು ಹುರಿದು ಪುಡಿ ಮಾಡಿಡಬೇಕು. ಬೇಕಾದಾಗ ಒಂದು ಚಮಚ ಕಷಾಯದ ಪುಡಿ, ಸ್ವಲ್ಪ ಬೆಲ್ಲದ ಚೂರು, ಸ್ವಲ್ಪ ಉಪ್ಪು ತುಳಸಿ ಎಲೆ, 2 ಲೋಟ ನೀರು ಹಾಕಿ ಆ ನೀರು ಒಂದು ಲೋಟ ಆಗುವವರೆಗೆ ಕುದಿಸಿದರೆ ಕಷಾಯ ರೆಡಿ. ಈ ಕಷಾಯ ಶೀತ, ಕೆಮ್ಮು ಹೋಗಲಾಡಿಸಲು ಸಹಕಾರಿಯಾಗಿದೆ.



Click it and Unblock the Notifications
