ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ರೆ, ಈ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಮಾಡಿ

Posted By:

ಅದೇ ಮಾಮೂಲಿ ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ದರೆ, ಈ ಅವಲಕ್ಕಿ ರೊಟ್ಟಿಯನ್ನೊಮ್ಮೆ ಪ್ರಯತ್ನ ಮಾಡಿ. ಅವಲಕ್ಕಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಈ ರೊಟ್ಟಿ ನಾಲಗೆಗೆ ರುಚಿ ನೀಡುವುದು. ಬೆಳಿಗ್ಗೆ ತಿಂಡಿಗೆ, ಸಂಜೆ ಸ್ನಾಕ್ ಗೆ ಕೂಡ ಈ ರೊಟ್ಟಿ ಮಾಡಬಹುದು. ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ಹಂತಹಂತವಾಗಿ ನೋಡೋಣ.

Avalakki Rotti Recipe | Poha Roti Recipe in Kannada | Avalakki akki rotti
ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ರೆ, ಈ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಮಾಡಿ
ಅಕ್ಕಿ ರೊಟ್ಟಿ ತಿಂದು ಬೇಜಾರಾಗಿದ್ರೆ, ಈ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಮಾಡಿ
Prep Time
5 Mins
Cook Time
15M
Total Time
20 Mins

Recipe By: Shreeraksha

Recipe Type: Vegetarian

Serves: 3

Ingredients
  • ಬೇಕಾಗುವ ಪದಾರ್ಥಗಳು:

    • 1 ಕಪ್ ತೆಳು ಅವಲಕ್ಕಿ
    • 1 ಕಪ್ ಅಕ್ಕಿ ಹಿಟ್ಟು
    • 1 ಈರುಳ್ಳಿ (ನುಣ್ಣಗೆ ಕತ್ತರಿಸಿದ)
    • ಕರಿಬೇವಿನ ಎಲೆಗಳು (ನುಣ್ಣಗೆ ಕತ್ತರಿಸಿದ)
    • 2 ಚಮಚ ಕೊತ್ತಂಬರಿ ಸೊಪ್ಪು
    • 1 ಇಂಚಿನ ಶುಂಠಿ (ನುಣ್ಣಗೆ ಕತ್ತರಿಸಿದ)
    • 2 ಮೆಣಸಿನಕಾಯಿ (ನುಣ್ಣಗೆ ಕತ್ತರಿಸಿದ)
    • 1 ಚಮಚ ಜೀರಿಗೆ
    • ½ ಚಮಚ ಉಪ್ಪು
    • ಬಿಸಿ ನೀರು
    • ಎಣ್ಣೆ
Red Rice Kanda Poha
How to Prepare
  • ತಯಾರಿಸುವ ವಿಧಾನ:

    1. ಮೊದಲಿಗೆ, ಒಂದು ಬಟ್ಟಲಿನಲ್ಲಿ 1 ಕಪ್ ಅವಲಕ್ಕಿ ತೆಗೆದುಕೊಂಡು ನೀರು ಹಾಕಿ ತೊಳೆದು, ಮತ್ತೊಂದು ಬಟ್ಟಲಿಗೆ ವರ್ಗಾಯಿಸಿ.
    2. ಈಗ ಅದಕ್ಕೆ 1 ಕಪ್ ಅಕ್ಕಿ ಹಿಟ್ಟು, 1 ಈರುಳ್ಳಿ, ಕರಿಬೇವು ಮತ್ತು 2 ಚಮಚ ಕೊತ್ತಂಬರಿ ಸೇರಿಸಿ, ಬೆರೆಸಿ.
    3. ನಂತರ ಶುಂಠಿ, 2 ಮೆಣಸಿನಕಾಯಿ, 1 ಚಮಚ ಜೀರಿಗೆ ಮತ್ತು ರುಚಿಗೆ ಉಪ್ಪು ಸೇರಿಸಿ, ಚೆನ್ನಾಗಿ ಹಿಸುಕುತ್ತಾ ಮಿಕ್ಸ್ ಮಾಡಿ.
    4. ಈಗ ಇದಕ್ಕೆ ಬಿಸಿ ನೀರನ್ನು ಸೇರಿಸಿ, ತಟ್ಟಲು ಸರಿಹೊಂದುವಷ್ಟು ಪ್ರಮಾಣ ಹಿಟ್ಟನ್ನು ತಯಾರಿಸಿ.
    5. ನಂತರ ಬಾಳೆ ಎಲೆಯನ್ನು ತೆಗೆದುಕೊಂಡು ಎಣ್ಣೆ ಹಚ್ಚಿ. ಬಾಳೆ ಎಲೆ ಮೃದುವಾಗಿರದಿದ್ದರೆ, ಸ್ವಲ್ಪ ಬಿಸಿ ಮಾಡಿ ನಂತರ ಎಣ್ಣೆ ಹಚ್ಚಿ.
    6. ಅದರ ಮೇಲೆ ಉಂಡೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ನಿಧಾನವಾಗಿ ತೆಳುವಾಗಿ ತಟ್ಟುತ್ತಾ ಬನ್ನಿ.
    7. ಇದರಲ್ಲಿ 3 ರಂಧ್ರಗಳನ್ನು ಮಾಡಿ, ಏಕೆಂದರೆ ಇದರಲ್ಲಿ ಎಣ್ಣೆ ಹಾಕಿ, ಚೆನ್ನಾಗಿ ಹುರಿಯಬಹುದು.
    8. ಈಗ ತಟ್ಟಿದ ರೊಟ್ಟಿಯನ್ನು ಬಿಸಿ ತವಾದ ಮೇಲೆ ಹಾಕಿ, ನಿಧಾನವಾಗಿ ಒತ್ತಿರಿ. ಒಂದು ನಿಮಿಷದ ನಂತರ, ಬಾಳೆ ಎಲೆಯನ್ನು ನಿಧಾನವಾಗಿ ತೆಗೆಯಿರಿ.
    9. ಒಂದು ಕಡೆ ಬೆಂದ ನಂತರ ಮತ್ತೊಂದ ಬದಿ ತಿರುಗಿಸಿ, ಎಣ್ಣೆ ಸೇರಿಸಿ.
    10. ಎರಡೂ ಬದಿ ಸ್ವಲ್ಪ ಗೋಲ್ಡನ್ ಆಗುವವರೆಗೆ ಬೇಯಿಸಿ.
    11. ಅಂತಿಮವಾಗಿ, ತೆಂಗಿನಕಾಯಿ ಚಟ್ನಿಯೊಂದಿಗೆ ಅವಲಕ್ಕಿ ರೊಟ್ಟಿ ಸವಿಯಲು ಸಿದ್ಧ.
Instructions
Nutritional Information
  • People - 3
  • ಕ್ಯಾಲೋರಿಗಳು - 172 ಕೆ
  • ಕೊಬ್ಬು - 1 ಗ್ರಾಂ
  • ಪ್ರೋಟೀನ್ - 3 ಗ್ರಾಂ
  • ಕಾರ್ಬೋಹೈಡ್ರೇಟ್ಗಳು - 38 ಗ್ರಾಂ
  • ಫೈಬರ್ - 2 ಗ್ರಾಂ
[ 5 of 5 - 24 Users]
Story first published: Monday, August 9, 2021, 9:00 [IST]
X
Desktop Bottom Promotion