For Quick Alerts
ALLOW NOTIFICATIONS  
For Daily Alerts

ಪನ್ನೀರ್‌ ಸ್ಯಾಂಡ್‌ವಿಚ್‌ ರೆಸಿಪಿ: ಮಕ್ಕಳಿಗೆ ಆರೋಗ್ಯಕರವಾದ ತಿನಿಸು

Posted By:
|

ಸ್ಯಾಂಡ್‌ವಿಚ್‌ ನೂರಕ್ಕೂ ಅಧಿಕ ಬಗೆಯಲ್ಲಿ ನೀವು ತಯಾರಿಸಬಹುದು. ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಪಟ್ ಅಂತ ತಯಾರಿಸಲು, ಸಂಜೆ ಸ್ನ್ಯಾಕ್ಸ್‌ ಆಗಿ ಸವಿಯಲು ಆರೋಗ್ಯಕರವಾದ ಆಯ್ಕೆ ಇದಾಗಿದೆ.

sandwitch recipe

ನೂಡಲ್ಸ್‌, ಮ್ಯಾಗಿ ಈ ರೀತಿಯ ಆಯ್ಕೆಗಳ ಬದಲಿಗೆ ಸ್ಯಾಂಡ್‌ವಿಚ್‌ ಆಯ್ಕೆ ಅತ್ಯುತ್ತಮ, ಏಕೆಂದರೆ ಇದು ಆರೋಗ್ಯಕರ. ಸ್ಯಾಂಡ್‌ವಿಚ್‌ ನೀವು ವ್ಹೀಟ್‌ ಬ್ರೆಡ್‌ ಬಳಸಿ ತಯಾರಿಸಿದರೆ ಮತ್ತಷ್ಟೂ ಒಳ್ಳೆಯದು, ಇಲ್ಲಿ ಪನ್ನೀರ್‌ ಸ್ಯಾಂಡ್‌ವಿಚ್ ರೆಸಿಪಿ ನೀಡಲಾಗಿದ್ದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Paneer Sandwitch Recipe , ಪನ್ನೀರ್‌ ಸ್ಯಾಂಡ್‌ವಿಚ್‌ ರೆಸಿಪಿ
Paneer Sandwitch Recipe , ಪನ್ನೀರ್‌ ಸ್ಯಾಂಡ್‌ವಿಚ್‌ ರೆಸಿಪಿ
Prep Time
15 Mins
Cook Time
5M
Total Time
20 Mins

Recipe By: Reena TK

Recipe Type: breakfast

Serves: 3

Ingredients
  • ಬೇಕಾಗುವ ಸಾಮಗ್ರಿ

    ಸ್ಯಾಂಡ್‌ವಿಚ್‌ ಬ್ರೆಡ್‌ ಥವಾ ಸಾದಾ ಬ್ರೆಡ್‌ 8 ಪೀಸ್

    ಪನ್ನೀರ್ ಅರ್ಧ ಕಪ್

    1/4 ಕಪ್ ಕ್ಯಾರೆಟ್ (ಚಿಕ್ಕದಾಗಿ ಕತ್ತರಿಸಿದ್ದು)

    2 ಚಮಚ ಸೌತೆಕಾಯಿ (ಚಿಕ್ಕದಾಗಿ ಕತ್ತರಿಸಿದ್ದು)

    2 ಚಮಚ ಟೊಮೆಟೊ

    3 ಚಮಚ ಸ್ವೀಟ್ ಕಾರ್ನ್

    2 ಚಮಚ ಕೊತ್ತಂಬರಿ ಸೊಪ್ಪು

    1 ಹಸಿ ಮೆಣಸಿನ ಕಾಯಿ

    1 ಚಮಚ ಸಾಸ್‌ (ಸಾಸ್ ಅಥವಾ ಚಟ್ನಿ ಬಳಸಬಹುದು)

    1/2 ಚಮಚ ಚಾಟ್ ಮಸಾಲ (ಅಥವಾ 1ಚಮಚ ನಿಂಬೆ ರಸ)

    (ಇಲ್ಲಿ ಈರುಳ್ಳಿ ಬಳಸಿಲ್ಲ, ನೀವು ಬೇಕಾದರೆ ಸೇರಿಸಬಹುದು, ತರಕಾರಿ ಕೂಡ ನಿಮಗೆ ಇಷ್ಟವಾಗಿದ್ದನ್ನು ಬಳಸಬಹುದು)

Red Rice Kanda Poha
How to Prepare
  • ತಯಾರಿಸುವ ವಿಧಾನ:

    * ಬ್ರೆಡ್‌ ಬಿಟ್ಟು ಎಲ್ಲಾ ಸಾಮಗ್ರಿ ಒಂದು ಬೌಲ್‌ನಲ್ಲಿ ಹಾಕಿ ಮಿಶ್ರ ಮಾಡಿ.

    * ಈಗ ಸ್ಯಾಂಡ್‌ ವಿಚ್‌ ಬ್ರೆಡ್‌ಗಳನ್ನು ಸ್ಯಾಂಡ್‌ವಿಷ್‌ ಗ್ರಿಲ್ಡ್‌ನಲ್ಲಿ ಅಥವಾ ತವಾದಲ್ಲಿ ಸ್ವಲ್ಪ ಹೊತ್ತು ರೋಸ್ಟ್‌ ಮಾಡಿ. ನಂತರ ಅದರ ಒಂದು ಬದಿಗೆ ಪನ್ನೀರ್‌ ಮಿಶ್ರಣ ಹಾಕಿ, ಮತ್ತೊಂದು ಸ್ಯಾಂಡ್‌ವಿಚ್‌ಗೆ ಮಯೋನೈಸ್‌ ಅಥವಾ ಗಟ್ಟಿ ಮೊಸರು ಅಥವಾ ಚೀಸ್ ಹಾಕಿ.

    * ಈಗ ಎರಡು ಸ್ಯಾಂಡ್‌ವಿಚ್‌ ಕವರ್‌ ಮಾಡಿ, ಒಂದು ನಿಮಿಷ ತವಾದಲ್ಲಿ ಬಿಸಿ ಮಾಡಿ ನಂತರ ಪ್ಲೇಟ್‌ಗೆ ಹಾಕಿ ಸರ್ವ್ ಮಾಡಿ.

Instructions
  • ಟಿಪ್ಸ್ * ಮಕ್ಕಳಿಗೆ ಮಾಡುವಾಗ ಖಾರ ಸ್ವಲ್ಪ ಕಡಿಮೆ ಬಳಸಿ. * ಹಾಲಿಗೆ ನಿಂಬೆರಸ ಹಿಂಡಿ, ಒಡೆದ ಹಾಲಿನಿಂದ ಪನ್ನೀರ್ ನೀವೇ ತಯಾರಿಸಬಹುದು. * ಇದರಲ್ಲಿ ತರಕಾರಿ, ಪನ್ನೀರ್, ಚೀಸ್ ಎಲ್ಲಾ ಬಳಸಿರುವುದರಿಂದ ಆರೋಗ್ಯಕರ ಹಾಗೂ ಇದನ್ನು ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ನೀಡಿದರೆ ಅವರ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ.
Nutritional Information
  • ಸರ್ವ್ - 1 ಸ್ಯಾಂಡ್‌ವಿಚ್
  • ಕ್ಯಾಲೋರಿ - 158ಕ್ಯಾ
  • ಕೊಬ್ಬು - 4ಗ್ರಾಂ
  • ಪ್ರೊಟೀನ್ - 4.5ಗ್ರಾಂ
  • ಕಾರ್ಬ್ಸ್ - 25ಗ್ರಾಂ
  • ನಾರಿನಂಶ - 2ಗ್ರಾಂ
[ 4.5 of 5 - 30 Users]
X
Desktop Bottom Promotion