Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕಿಡ್ನಿ ಆರೋಗ್ಯ ಕಾಪಾಡುತ್ತೆ ಈ ಪಲ್ಯ

ಬಾಳೆ ಡಿಂಡಿನಿಂದ ಅಡುಗೆ ಮಾಡಿ ವಾರಕ್ಕೊಮ್ಮೆಯಾದರೂ ತಿನ್ನಬೇಕು. ಈ ದಿಂಡಿಗೆ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುವ ಸಾಮರ್ಥ್ಯ ಇದೆ ಹಾಗೂ ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು. ಈ ಬಾಳೆ ದಿಂಡಿನಿಂದ ರುಚಿಕರವಾದ ಪಲ್ಯ ಮಾಡಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.
ಬೇಕಾದ ಸಾಮಾಗ್ರಿಗಳು
* ಬಾಳೆ ದಿಂಡಿನ ತುಂಡುಗಳು
* ನೆನೆಸಿದ ಕಡಲೆಕಾಳು 1ಕಪ್
* ಈರುಳ್ಳಿ 1 (ಕತ್ತರಿಸಿದ್ದು)
* ಟೊಮೆಟೊ 2(ಕತ್ತರಿಸಿದ್ದು)
* ಮಸಾಲೆ ಪುಡಿ 1 ಚಮಚ
* ಬೆಳ್ಳುಳ್ಳಿ
* ಸಾಸಿವೆ
* ಕರಿಬೇವಿನ ಎಲೆ
* ಹಸಿಮೆಣಸಿನ ಕಾಯಿ 2
* ರುಚಿಗೆ ತಕ್ಕ ಉಪ್ಪು
* ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
1. ಬಾಳೆದಿಂಡಿನ ನಾರು ತೆಗೆದು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಈರುಳ್ಳಿ, ಟೊಮೆಟೊ ಸಹ ಸಣ್ಣದಾಗಿ ಹೆಚ್ಚಿಕೊಳ್ಳಬೇಕು.
2. ಈಗ ನೆನೆಸಿದ ಕಡಲೆಕಾಯಿ ಮತ್ತು ಹೆಚ್ಚಿದ ಬಾಳೆದಿಂಡನ್ನು ಸ್ವಲ್ಪ ನೀರು ಹಾಕಿ , ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಬೇಯಿಸಿದ ನಂತರ ನೀರನ್ನು ಬಸಿದು ಕಡಲೆ ಮತ್ತು ಬಾಳೆ ದಿಂಡನ್ನು ಒಂದು ಪಾತ್ರೆಯಲ್ಲಿ ಹಾಕಿ ಇಡಬೇಕು.
3. ಈಗ ಬಾಣಲೆಯನ್ನು ಬಿಸಿ ಮಾಡಿ ಎಣ್ಣೆ ಹಾಕಿ , ಸಾಸಿವೆ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ನಂತರ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ಬೇಯಿಸಿ, ಹೆಚ್ಚಿದ ಟೊಮ್ಯಾಟೋ, ಕರಿಬೇವು ಹಾಕಿ ನೀರು ಹಾಕದೇ ಎಣ್ಣೆಯಲ್ಲಿಯೇ ಬೇಯಿಸಿ. ಬೆಂದ ನಂತರ ಖಾರದ ಪುಡಿ, ಮಸಾಲೆ ಪುಡಿ ಹಾಕಿ ಇದಕ್ಕೆ ಬೇಯಿಸಿದ ಬಾಳೆದಿಂಡು, ಕಡಲೆಕಾಳು, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಹೊತ್ತು ಸೌಟ್ ನಿಂದ ತಿರುಗಿಸುತ್ತಾ ಬೇಯಿಸಿಬೇಕು. ನಂತರ ಉರಿಯಿಂದ ಇಳಿಸಬೇಕು. ಹೀಗೆ ಮಾಡಿದರೆ ಆರೋಗ್ಯಕರ ಮತ್ತು ರುಚಿಕರವಾದ ಪಲ್ಯ ರೆಡಿ.



Click it and Unblock the Notifications
