Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪಾಕಶಾಲೆ:ಎಳೆ ಕ್ಯಾರಟ್ ರಸಾಯನ
ತರಕಾರಿ ಬೆಲೆ ಏನೋ ಗಗನಕ್ಕೇರಿದೆ ಆದರೆ ನಾಲಿಗೆ ಇದನ್ನೆಲ್ಲಾ ಕೇಳುವ ಸ್ಥಿತಿಯಲ್ಲಿಲ್ಲ ಎನ್ನುತ್ತಿದ್ದಾರೆ ಪಾಕ ಪ್ರವೀಣೆ ಬೆಂಗಳೂರಿನ ಶ್ರೀರಕ್ಷಾ! ಅಂದಹಾಗೆ ಈ ಕ್ಯಾರಟ್ ರಸಾಯನವನ್ನು ಅನ್ನಹುಳಿಯೊಂದಿಗೆ ವ್ಯಂಜನವಾಗಿ ಬಳಸಬಹುದು.
ಬೇಕಾಗುವ ಪದಾರ್ಥಗಳು
ಎಳೆ ಕ್ಯಾರೆಟ್: 2 ಕಪ್ಪು (ಚಕ್ರಾಕಾರದಲ್ಲಿ ಹೆಚ್ಚಿದ)
ಕೊತ್ತಂಬರಿ ಸೊಪ್ಪು: ½ ಹಿಡಿ
ನಿಂಬೆ ಹಣ್ಣಿನ ಹೋಳು: 2
ಮಸಾಲೆ ಪದಾರ್ಥಗಳು
ಸಾಸಿವೆ ಕಾಳು: ¼ ಟೀ ಚಮಚ
ಉದ್ದಿನ ಬೇಳೆ: ½ ಟೀ ಚಮಚ
ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ: 1
ಈರುಳ್ಳಿ: 1 ಸಣ್ಣಗೆ ಹೆಚ್ಚಿಕೊಳ್ಳಬೇಕು
ಉಪ್ಪು: ರುಚಿಗೆ ತಕ್ಕಷ್ಟು
ಮಾಡುವ ವಿಧಾನ
1. ವೃತ್ತಾಕಾರದಲ್ಲಿ ಹೆಚ್ಚಿಕೊಂಡ ಎಳೆ ಕ್ಯಾರಟ್ ನ್ನು ಒಂದು ಪಕ್ಕಕ್ಕಿಟ್ಟುಕೊಳ್ಳಿ
2. ಬಾಣಲೆಯಲ್ಲಿ 1 ಟೀ ಚಮಚ ಎಣ್ಣೆ ,1 ಟೀ ಚಮಚ ಸಾಸಿವೆ, ½ ಟೀ ಚಮಚ ಉದ್ದಿನ ಬೇಳೆ ಹಾಗೂ ಹೆಚ್ಚಿಕೊಂಡ 1 ಹಸಿ ಮೆಣಸಿನಕಾಯಿ ಹಾಕಿ ಬಿಸಿ ಮಾಡಿ.
3. ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿಯನ್ನು ಹಾಕಿ ಬೇಯಿಸಿ ಸ್ವಲ್ಪ ಸಮಯ ಬಿಟ್ಟು ವೃತ್ತಾಕಾರದಲ್ಲಿ ಹೆಚ್ಚಿಕೊಂಡ ಕ್ಯಾರೆಟನ್ನು ಹಾಕಿ ಚೆನ್ನಾಗಿ ಬೇಯಿಸಿ.
4. ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ಹಣ್ಣಿನ ರಸ ಹಿಂಡಿ ಬಡಿಸಿ.



Click it and Unblock the Notifications
