Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಂಜನಗೂಡ್ ಬನಾನಾ ಕಬಾಬ್ : ಸಸ್ಯಾಹಾರಿಗಳಿಗೆ ಮಾತ್ರ!
ಚಿಕ್ಕನ್ ಕಬಾಬ್, ಮಟನ್ ಕಬಾಬ್ ಎಂದು ಬಾಯಿ ಚಪ್ಪರಿಸಿ ಮಾಂಸಹಾರಿಗಳು ತಿನ್ನುವಾಗ, ನೀವೇಕೆ ಬನಾನಾ ಕಬಾಬ್ ಸವಿಯಬಾರದು?
ದಪ್ಪನೆಯ ನೇಂದ್ರ ಬಾಳೆ ಕಾಯಿ: ಒಂದು ಕಿಲೋ
ಮೈದಾ: 2ಕಪ್
ಅರಿಶಿಣ ಪುಡಿ: ಅರ್ಧ ಚಮಚ
ಏಲಕ್ಕಿ ಪುಡಿ: ಒಂದು ಚಮಚ
ಸಕ್ಕರೆ: 4 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಸೋಡಾ: ಚಿಟಿಕೆ
ಕರಿಯಲು ಎಣ್ಣೆ
ಮಾಡುವ ವಿಧಾನ ಸಹ ಬಹಳ ಸುಲಭ:
ಮೊದಲು ಬಾಳೆ ಕಾಯಿಯ ಸಿಪ್ಪೆಯನ್ನು ತೆಗೆದು ಬಿಡಿ. ಸಿಪ್ಪೆ ತೆಗೆದ ಬಾಳೆಹಣ್ಣನ್ನು ನಿಮ್ಮ ಮನಸ್ಸಿಗೆ ಇಷ್ಟವಾದಂತೆ ಉದ್ದುದ್ದಕ್ಕೆ ಅಥವಾ ಅಡ್ಡಡ್ಡಕ್ಕೆ ಸೀಳಿ. ಸರಿ ಅವನ್ನೆಲ್ಲ ಒಂದು ಪಾತ್ರೆಯಲ್ಲಿ ಹಾಕಿಡಿ.
ಆಮೇಲೆ ಮೈದಾ ಹಿಟ್ಟುನೊಂದಿಗೆ ನಾವು ಮೊದಲೇ ಹೇಳಿದ ಎಲ್ಲ ಪದಾರ್ಥಗಳ ಬೆರೆಸಿ. ಅಂದ ಹಾಗೇ ನೀರು ಸೇರಿಸಿ ಚೆನ್ನಾಗಿ ಕಲಸಿ, ಅದು ದೋಸೆ ಹಿಟ್ಟಿನ ಹದಕ್ಕೆ ಬರವವರೆಗೆ ಈ ಕೆಲಸ ಮುಂದುವರೆಸಿ.
ಅಲ್ಲಿಗೆ ಶೇ.70ರಷ್ಟು ಕೆಲಸ ಮುಗಿದು ಹೋಯಿತು. ಬಾಣಲಿಯಲ್ಲಿನ ಎಣ್ಣೆ ಕಾದ ನಂತರ, ಬಾಳೇ ಕಾಯಿ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ ಬೋಂಡಾ ಕರಿದಂತೆ ಕೆಂಪಗಾಗುವ ತನಕ ಕರಿಯಿರಿ. ಆಮೇಲೆ ಅಂದದ ತಟ್ಟೆಗೆ ಬಿಸಿಬಿಸಿ ಬನಾನಾ ಕಬಾಬ್ ಬಾಕಿಕೊಂಡು ರುಚಿ ನೋಡಿ !



Click it and Unblock the Notifications
