Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೊಟ್ಟಿ, ಚಪಾತಿ, ಅನ್ನಕ್ಕೆ ಬೊಂಬಾಟ್ ರುಚಿಯ ಈರುಳ್ಳಿ ಸೊಪ್ಪಿನ ಚಟ್ನಿ! ಮಾಡೋದು ತುಂಬಾ ಸಿಂಪಲ್!
ಊಟ ತಿಂಡಿಗೆ ರುಚಿ ರುಚಿಯ ಖಾದ್ಯಗಳ ಜೊತೆಗೆ ಮಸಾಲೆ ಭರಿತ ಯಾವುದಾದರು ಚಟ್ನಿ, ಪಲ್ಯ ಮಾಡುವುದು ಕಾಮನ್. ಅದ್ರಲ್ಲೂ ನಾವಿಂದು ಸುಲಭವಾಗಿ ಈರುಳ್ಳಿಯಿಂದ ಮಾಡುವಂತಹ ಚಟ್ನಿ ಕುರಿತು ತಿಳಿದುಕೊಳ್ಳೋಣ. ನೀವು ಈರುಳ್ಳಿ ಬಳಸಿ ಹಲವು ಖಾದ್ಯ ಮಾಡಿ ಸವಿಯೋದು ಇದ್ದೇ ಇರುತ್ತೆ. ಹಾಗೆ ಈರುಳ್ಳಿ ಸೊಪ್ಪಿನ ಒಂದಿಷ್ಟು ಖಾದ್ಯವನ್ನಂತು ನೀವು ಬಾಯಿ ಚಪ್ಪರಿಸಿ ಸವಿದಿರುತ್ತೀರಿ.
ಹೀಗಾಗಿ ನಾವಿಂದು ಕೂಡ ಈರುಳ್ಳಿ ಸೊಪ್ಪು ಬಳಸಿ ಮಾಡುವ ಅದ್ಭುತ ರುಚಿಯ ಚಟ್ನಿ ಕುರಿತು ತಿಳಿಯೋಣ. ಈ ಈರುಳ್ಳಿ ಚಟ್ನಿಯು ನಿಮಗೆ ಬಹಳ ಉಪಯೋಗಕ್ಕೆ ಬರಲಿದೆ. ಊಟದೊಂದಿಗೆ, ಯಾವುದೇ ತಿಂಡಿಯೊಂದಿಗೆ ಸವಿಯಲು ಇದು ಬೆಸ್ಟ್ ಆಯ್ಕೆ. ಹಾಗೆ ನಿಮ್ಮ ಆರೋಗ್ಯದ ದೃಷ್ಟಿಯಲ್ಲು ಈ ಚಟ್ನಿ ಅದ್ಭುತ ಪ್ರಯೋಜನ ನೀಡಲಿದೆ.

ಈರುಳ್ಳಿ ಸೊಪ್ಪಿನ ಈ ಚಟ್ನಿಯನ್ನು ನೀವು 2 ದಿನಗಳ ಕಾಲ ಇಟ್ಟು ಸವಿಯಬಹುದು. ಹಾಗೆ ಎಲ್ಲಾ ಖಾದ್ಯದೊಂದಿಗೂ ರುಚಿ ದುಪ್ಪಟ್ಟಾಗಲಿದೆ. ಹಾಗಾದ್ರೆ ಎಲ್ಲಾ ಖಾದ್ಯದೊಂದಿಗೂ ರುಚಿ ಹೆಚ್ಚಿಸುವ ಈ ಈರುಳ್ಳಿ ಸೊಪ್ಪಿನ ಚಟ್ನಿ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಈರುಳ್ಳಿ ಸೊಪ್ಪಿನ ಚಟ್ನಿ ಮಾಡಲು ಬೇಕಾಗುವ ವಸ್ತುಗಳೇನು?
ಸ್ಪ್ರಿಂಗ್ ಆನಿಯನ್
ಶೇಂಗಾ
ಜೀರಿಗೆ
ಎಣ್ಣೆ
ಬೆಳ್ಳುಳ್ಳಿ
ಉಪ್ಪು
ಈರುಳ್ಳಿ ಸೊಪ್ಪಿನ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ ಹಾಕಿಕೊಳ್ಳಿ ಬಳಿಕ ಸ್ವಲ್ಪ ಶೇಂಗಾ ಹಾಕಿ ಸ್ವಲ್ಪ ಬಿಸಿಯಾಗಲು ಬಿಡಿ. ಈಗ ಸ್ವಲ್ಪ ಹಸಿ ಮೆಣಸು, ಬೆಳ್ಳುಳ್ಳಿ ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. 2 ನಿಮಿಷ ಬಿಟ್ಟು ಸ್ವಲ್ಪ ಸ್ಪ್ರಿಂಗ್ ಆನಿಯನ್ ಹಾಕಿಕೊಳ್ಳಿ.
ಈಗ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ಮಿಕ್ಸ್ ಮಾಡುತ್ತಾ ಇರಿ. 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಅನಂತರ ತಣ್ಣಗಾಗಲು ಬಿಟ್ಟು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಇದನೆಲ್ಲಾ ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದಕ್ಕೆ ನೀರು ಹಾಕದೆಯೇ ಮಾಡಿಕೊಳ್ಳಿ.
ಬಳಿಕ ಮಿಕ್ಸಿಯಿಂದ ತೆಗೆದು ಅದನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಈರುಳ್ಳಿ ಸೊಪ್ಪಿನ ಚಟ್ನಿ
ಸಿದ್ದವಾಗುತ್ತೆ. ಇದನ್ನು ನೀವು ಊಟದೊಂದಿಗೆ, ದೋಸೆ, ಚಪಾತಿ, ರೊಟ್ಟಿ, ಹೀಗೆ
ಯಾವುದೇ ತಿಂಡಿಯೊಂದಿಗೆ ಸವಿಯಲು ನೀಡಬಹುದು.
ಹಾಗೆ ಎರಡು ದಿನಗಳ ಕಾಲ ಇಟ್ಟು ಕೂಡ ಇದನ್ನು ಸವಿಯಬಹುದು. ನಾಲಗೆ ರುಚಿಗೆ ಕೆಟ್ಟಿದ್ದರೆ ಈ ಸ್ಪ್ರಿಂಗ್ ಆನಿಯನ್ ಚಟ್ನಿ ಮಾಡಿ ಸವಿದು ನೋಡಿ. ಒಮ್ಮೆ ಸವಿದರೆ ಯಾವಾಗಲು ನೀವು ಇದನ್ನೇ ಮಾಡಿ ಸವಿಯಲು ಮುಂದಾಗೋದು ಖಚಿತ.
ಹಾಗೆ ಇದನ್ನು ಮಾಡಲು ಕೆಲವೇ ವಸ್ತುಗಳು ಸಾಕು. 2 ನಿಮಿಷದೊಳಗೆ ಮಾಡಿ ಮುಗಿಸಬಹುದು. ಮತ್ತೆ ಕೆಲವರು ಇದಕ್ಕೆ ಹುಳಿ ಬಳಸುತ್ತಾರೆ. ಹುಣಸೆ ಹುಳಿ ಹಾಗೆ ಪುಟಾಣಿ ಸಹ ಬಳಸಿ ಮಾಡುತ್ತಾರೆ. ಆದ್ರೆ ಅದು ಬಹುಬೇಗ ಕೆಡಬಹುದು. ಹಾಗೆ ದಪ್ಪ ಚಟ್ನಿಯಾಗಬಹುದು.
ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ. ಸ್ಪ್ರಿಂಗ್ ಆನಿಯನ್ ಎಲ್ಲಾ ತರಕಾರಿ ಅಂಡಿಯಲ್ಲಿ ಸುಲಭವಾಗಿ ಸಿಗುತ್ತದೆ, ಒಮ್ಮೆ ಮಾಡಿಕೊಂಡರೆ 2 ದಿನ ಸವಿಯಬಹುದು.



Click it and Unblock the Notifications
