Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಕೆಂಪಿರುವೆ ಚಟ್ನಿಗೆ ಸಿಕ್ಕಿತು ವಿಶೇಷ ಸ್ಥಾನಮಾನ..ಇಲ್ಲಿದೆ ಅಚ್ಚರಿಯ ಅಂಶಗಳು..!
ಭಾರತದಲ್ಲಿ ಪ್ರತಿಯೊಂದು ಮೂಲೆಯಲ್ಲೂ ವಿಶಿಷ್ಟವಾದ ಆಹಾರ ಪದ್ಧತಿ ಇದೆ. ನೀವು ಒಂದೊಂದು ಕಡೆ ಹೋದಾಗಲು ಅಲ್ಲಿನ ಆಹಾರ ಪದ್ಧತಿ ನಿಮ್ಮನ್ನು ಅಚ್ಚರಿಗೊಳಿಸುತ್ತೆ. ಕೆಲವು ಕಡೆ ಮಾಂಸಾಹಾರ ಫೇಮಸ್ ಆಗಿದ್ದರೆ ಇನ್ನೂ ಕೆಲವು ಕಡೆ ಸಸ್ಯಹಾರವೇ ಇಷ್ಟವಾಗಲಿದೆ. ಹೀಗೆ ಪ್ರತಿಯೊಂದು ಊರಿನೊಳಗು ಒಂದೊಂದು ಆಹಾರ ಪ್ರಕಾರಗಳ ನಾವು ನೋಡುವುದು ಭಾರತದಲ್ಲಿ ಮಾತ್ರ ಎಂದರೂ ತಪ್ಪಗಲಾರದು.
ಭಾರತವು ವಿವಿಧತೆಯಲ್ಲಿ ಏಕತೆಯ ದೇಶವಾಗಿದ್ದು, ಇಲ್ಲಿ ಜೀವನಶೈಲಿ, ಆಡುಭಾಷೆ ಮತ್ತು ಉಡುಗೆ ಮಾತ್ರವಲ್ಲದೆ ಆಹಾರವೂ ವಿಭಿನ್ನವಾಗಿದೆ. ಇಲ್ಲಿನ ಪ್ರತಿಯೊಂದು ರಾಜ್ಯ ಮತ್ತು ನಗರವು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಇಲ್ಲಿ ಸಿಗುವ ಖಾದ್ಯಗಳು ಪ್ರಪಂಚದಾದ್ಯಂತ ಇಷ್ಟವಾಗಲು ಇದು ಕಾರಣವಾಗಿದೆ. ಏತನ್ಮಧ್ಯೆ, ಭಾರತದ ಮತ್ತೊಂದು ಖಾದ್ಯವು ಪ್ರಸ್ತುತ ಚರ್ಚೆಯಲ್ಲಿದೆ.
ಇನ್ನು ಆಹಾರಗಳ ಸಾಲಿನಲ್ಲಿ ಕೆಲವ ವಿಚಿತ್ರ ಮತ್ತು ವಿಭಿನ್ನ ಆಹಾರ ಪದ್ಧತಿಗಳು ಸಹ ನಮ್ಮ ನಡುವೆ ಇದೆ. ಅದರಲ್ಲಿ ಕೆಂಪು ಇರುವೆಯ ಚಟ್ನಿ ಸಹ ಸೇರಿಕೊಂಡಿದೆ. ಹೌದು ಕೆಂಪು ಇರುವೆ ಆಹಾರವಾಗಿ ಭಾರತದಲ್ಲಿ ಬಳಕೆಯಲ್ಲಿದೆ. ಅದರಲ್ಲೂ ಪುರಾತನ ಕಾಲದಲ್ಲು ಇದರ ಉಲ್ಲೇಖವಿದ್ದೂ ಈಗಲೂ ಕೆಂಪಿರುವೆ ಚಟ್ನಿ ಬಳಕೆಯಲ್ಲಿದೆ.

ಒಡಿಶಾ ರಾಜ್ಯದಲ್ಲಿರುವ ಮಯೂರ್ಭಂಜ್ ಜಿಲ್ಲೆಯ ಪ್ರಸಿದ್ಧ ಕೆಂಪು ಇರುವೆ ಚಟ್ನಿ ಜಿಐ (Geographical Indication) ಟ್ಯಾಗ್ ಅನ್ನು ಪಡೆದುಕೊಂಡಿದೆ. ಈ ಜಿಲ್ಲೆಯ ನೂರಾರು ಬುಡಕಟ್ಟು ಕುಟುಂಬಗಳು ಈ ಇರುವೆಗಳ ಚಟ್ನಿಗಾಗಿ ಈ ಅವುಗಳ ಹಿಡಿದು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಒಡಿಶಾವನ್ನು ಹೊರತುಪಡಿಸಿ, ಜಾರ್ಖಂಡ್ ಮತ್ತು ಛತ್ತೀಸ್ಗಢದಂತಹ ಇತರ ಪೂರ್ವ ರಾಜ್ಯಗಳಲ್ಲಿ ಜನರು ಈ ಚಟ್ನಿಯನ್ನು ಬಹಳ ಉತ್ಸಾಹದಿಂದ ಸೇವಿಸುತ್ತಾರೆ. ಇದನ್ನು ಮಾಡಲು, ಇರುವೆಗಳು ಮತ್ತು ಅವುಗಳ ಮೊಟ್ಟೆಗಳನ್ನು ಸಂಗ್ರಹಿಸಲಾಗುತ್ತದೆ. ಇದರ ನಂತರ, ಅದರ ಚಟ್ನಿ ಮಾಡಲು, ಅವುಗಳನ್ನು ಮೊದಲು ಸ್ವಚ್ಛಗೊಳಿಸಲಾಗುತ್ತದೆ ಮತ್ತು ನಂತರ ಪುಡಿಮಾಡಿ ಒಣಗಿಸಲಾಗುತ್ತದೆ.
ಚಟ್ನಿ ತಯಾರಿಸುವುದು ಹೀಗೆ
ಇದಾದ ನಂತರ ಅದಕ್ಕೆ ಉಪ್ಪು, ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿ ಸೇರಿಸಿ ಮತ್ತೆ ರುಬ್ಬಿ ಈ ರೀತಿ ಕೆಂಪು ಇರುವೆ ಚಟ್ನಿ ತಯಾರಿಸುತ್ತಾರೆ. ಇದು ರುಚಿಯಲ್ಲಿ ತುಂಬಾ ಮಸಾಲೆಯುಕ್ತವಾಗಿದೆ. ಈ ಚಟ್ನಿ ರುಚಿಕರವಾಗಿರುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಈ ಚಟ್ನಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಸತು, ವಿಟಮಿನ್ ಬಿ-12, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ ಎಂದು ನಂಬಲಾಗಿದೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 16 ರಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆದಿ ಮಹೋತ್ಸವವನ್ನು ಬುಡಕಟ್ಟು ಕರಕುಶಲ ಮೇಳವನ್ನು ಉದ್ಘಾಟಿಸಿದ್ದರು. ಈ ವೇಳೆ ಸಹ ಕೆಂಪು ಇರುವೆಯ ಚಟ್ನಿ ಎಲ್ಲರ ಗಮನ ಸೆಳೆದಿತ್ತು. ಬುಡಕಟ್ಟು ಸಮಾಜವು ಮಾಡಿದ ಅನೇಕ ವಿಷಯಗಳನ್ನು ಜಗತ್ತಿಗೆ ಪ್ರಸ್ತುತಪಡಿಸಲು ಮತ್ತು ಬುಡಕಟ್ಟು ಸಮಾಜದ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ವೇದಿಕೆ ಕಲ್ಪಿಸಲಾಗಿತ್ತು.
ರಾಜ್ಯದಲ್ಲೂ ಇತ್ತು ಕೆಂಪಿರುವೆ ಚಟ್ಬಿ
ರಾಜ್ಯದ ಮಲೆನಾಡು ಭಾಗದಲ್ಲಿ ಈಗಲೂ ಕೆಂಪಿರುವೆ ಚಟ್ನಿ ಫೇಮಸ್ ಆಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಕೊಡಗು ಸೇರಿ ಈ ಭಾಗದಲ ಕೆಲವು ಕಡೆ ಈಗಲೂ
ಬೆಳಗ್ಗೆಯ ತಿಂಡಿಗೆ ಕೆಂಪಿರುವೆ ಚಟ್ನಿ ನೋಡಬಹುದು. ಆದರೆ ಇತ್ತೀಚಿನ ದಿನಗಳಲ್ಲಿ
ಈ ಚಟ್ನಿ ಜನರಿಂದ ದೂರಾಗಿದ್ದು, ಇದರ ಸ್ಥಳವನ್ನು ಬೇರೆ ಆಹಾರಗಳು
ಆವರಿಸಿಕೊಂಡಿವೆ.



Click it and Unblock the Notifications
