Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರುಚಿ ರುಚಿಯಾದ ನಾಟಿಕೋಳಿ ಸಾರು

ಬೇಕಾಗುವ ಸಾಮಾಗ್ರಿಗಳು:
* ಒಂದು ಕೆಜಿ ನಾಟಿ ಕೋಳಿ ಮಾಂಸ
* 10 ಒಣ ಕೆಂಪು ಮೆಣಸು
* 1 ಚಮಚ ಕೊತ್ತಂಬರಿ ಬೀಜ
* ಅರ್ಧ ಚಮಚ ಅರಿಶಿಣ
* 1 ಚಮಚ ಜೀರಿಗೆ
* 1 ಕಪ್ ತೆಂಗಿನ ತುರಿ
* ರುಚಿಗೆ ತಕ್ಕ ಉಪ್ಪು
* 1 ನಿಂಬೆ ಹಣ್ಣು
* ಕರಿ ಬೇವಿನ ಎಲೆ
* ಈರುಳ್ಳಿ 2
* ಬೆಳ್ಳುಳ್ಳಿ 4-6 ಎಸಳು
* ಎಣ್ಣೆ
ತಯಾರಿಸುವ ವಿಧಾನ:
1. ತೆಂಗಿನ ತುರಿಯನ್ನು ಒಂದು ಬಾಣಲೆಯಲ್ಲಿ ಹಾಕಿ, ಒಂದು ಚಮಚ ಎಣ್ಣೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಒಂದು ಪಾತ್ರೆಯಲ್ಲಿ ಹಾಕಿಡಬೇಕು.
2. ಮಸಾಲೆ ತಯಾರಿಸಲು ಒಣ ಕೆಂಪು ಮೆಣಸು, ಕೊತ್ತಂಬರಿ ಬೀಜ, ಅರಿಶಿಣ , ಜೀರಿಗೆ, ಬೆಳ್ಳುಳ್ಳಿಯನ್ನು ಬಾಣಲೆಗೆ ಹಾಕಿ ಅರ್ಧ ಚಮಚ ಎಣ್ಣೆ ಹಾಕಿ ಕೊತ್ತಂಬರಿ ಬೀಜ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ನಂತರ ಹುರಿದ ತೆಂಗಿನ ತುರಿ ಮತ್ತು ಮಸಾಲೆ ಸಾಮಾಗ್ರಿಗಳನ್ನು ಮಿಶ್ರಣ ಮಾಡಿ ನುಣ್ಣನೆ ಅರೆಯಬೇಕು.
4. ನಂತರ ಒಂದು ಪಾತ್ರೆಯಲ್ಲಿ ಅರೆದ ಮಿಶ್ರಣಕ್ಕೆ ಶುಚಿ ಮಾಡಿದ ನಾಟಿ ಕೋಳಿ ಮಾಂಸ ಹಾಕಿ ಮಿಶ್ರಣ ಮಾಡಿ ರುಚಿಗೆ ತಕ್ಕ ಉಪ್ಪು ಅರ್ಧ ಗಂಟೆ ಕಾಲ ಇಡಬೇಕು.
5. ನಂತರ ಸಾರು ಪಾತ್ರೆ ಬಿಸಿ ಮಾಡಿ ಅದರಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಕರಿಬೇವಿನ ಎಲೆ ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಮಸಾಲೆ ಮಿಶ್ರಣ ಮಾಡಿದ ಕೋಳಿ ಮಾಂಸವನ್ನು ಹಾಕಿ ಒಂದು ಕಪ್ ನೀರು ಹಾಕಿ ಅರ್ಧ ಗಂಟೆ ಬೇಯಿಸಬೇಕು.
6. ನಂತರ ಬೆಂದ ಕೋಳಿ ಮಾಂಸವನ್ನು ಉರಿಯಿಂದ ತೆಗೆದು ಸ್ವಲ್ಪ ನಿಂಬೆ ರಸ ಹಿಂಡಿದರೆ ರುಚಿಯಾದ ನಾಟಿ ಕೋಳಿ ಸಾರು ರೆಡಿ.



Click it and Unblock the Notifications
