Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಮೀನು ಸಾರು- ಮಂಗಳೂರು ಶೈಲಿಯ ಅಡುಗೆ
ಮಂಗಳೂರು ವೆಜ್ ಮತ್ತು ನಾನ್ ವೆಜ್ ಅಡುಗೆಗೆ ಫೇಮಸ್. ಅದರಲ್ಲೂ ಮೀನಿನ ಅಡುಗೆಗೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಫ್ರೈ, ಗ್ರೇವಿ, ಸಾರು ಅಂತ ಅನೇಕ ಬಗೆಯ ಮೀನಿನಿಂದ ಅನೇಕ ರೀತಿಯ ಅಡುಗೆಗಳನ್ನು ತಯಾರಿಸುತ್ತಾರೆ.
ಇಲ್ಲಿ ನಾವು ಮಾಡಲು ತುಂಬಾ ಸರಳವಾದ ಮೀನಿನ ಸಾರಿನ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
ಮೀನು ಒಂದು ಕೆಜಿ
ಈರುಳ್ಳಿ 2
ಕೊತ್ತಂಬರಿ ಬೀಜ 2 ಚಮಚ
ಒಣ ಮೆಣಸು 9-10 (ಖಾರಕ್ಕೆ ತಕ್ಕಂತೆ)
ತೆಂಗಿನ ತುರಿ 2 ಕಪ್
ಸ್ವಲ್ಪ ಶುಂಠಿ
ಬೆಳ್ಳುಳ್ಳಿ 8-10 ಎಸಳು
ಅರಿಶಿಣ ಅರ್ಧ ಚಮಚ
ನಿಂಬೆ ಹಣ್ಣು ಗಾತ್ರದಷ್ಟು ಹುಣಸೆ ಹಣ್ಣು
ತೆಂಗಿನ ತುರಿ ಅರ್ಧ
ಜೀರಿಗೆ 1 ಚಮಚ
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ಕರಿಬೇವಿನ ಎಲೆ
ತಯಾರಿಸುವ ವಿಧಾನ
* ಮೀನನ್ನು ಶುಚಿ ಮಾಡಿ ಉಪ್ಪು ಹಾಕಿಡಿ.
* ಬಾಣಲೆಯಲ್ಲಿ ಒಣ ಮೆಣಸು ಮತ್ತು ಕೊತ್ತಂಬರಿ ಬೀಜ ಹಾಕಿ ಹುರಿಯಿರಿ. ತೆಂಗಿನ ತುರಿಯನ್ನು ಬಾಣಲೆಗೆ ಹಾಕಿ, ಸ್ವಲ್ಪ ಎಣ್ಣೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
ನಂತರ ಇದನ್ನು ತುರಿದ ತೆಂಗಿನಕಾಯಿಗೆ ಹಾಕಿ , ಅರಿಶಿಣ, 1 ಚಮಚ ಜೀರಿಗೆ ಹಾಕಿ ರುಬ್ಬಿ.
* ಹುಣಸೆ ಹಣ್ಣನ್ನು ಚಿಕ್ಕ ಕಪ್ ನಲ್ಲಿ ಬಿಸಿ ನೀರು ಹಾಕಿ ಅದರಲ್ಲಿ ಹಾಕಿಡಿ.
* ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಕರಿಬೇವಿನ ಎಲೆ, ಜಜ್ಜಿದ ಶುಂಠಿ, ಬೆಳ್ಳುಳ್ಳಿ ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ನಂತರ ರುಬ್ಬಿದ ತೆಂಗಿನ ಕಾಯಿ ಹಾಕಿ ಅದಕ್ಕೆ ಹುಣಸೆ ಹಣ್ಣನ್ನು ಹಾಕಿ ಕುದಿಸಿ. ಮಿಶ್ರಣ ಕುದಿ ಬರುವಾಗ ಮೀನಿನ ತುಂಡುಗಳನ್ನು ಹಾಕಿ ರುಚಿಗೆ ತಕ್ಕ ಉಪ್ಪನ್ನು ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ(ಸಾರನ್ನು ತುಂಬಾ ನೀರು ಮಾಡಬೇಡಿ) ಬೇಯಿಸಿದರೆ ರುಚಿಕರವಾದ ಮೀನಿನ ಕರಿ ರೆಡಿ.



Click it and Unblock the Notifications
