Latest Updates
-
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ
ಕೇರಳದ ಮಲಬಾರ್ ಶೈಲಿಯ ಚಿಕನ್ ಕರಿ ರೆಸಿಪಿ
ದೇವರ ಸ್ವಂತ ನಾಡಿನ ಅಂದರೆ ಗಾಡ್ಸ್ ಓನ್ ಕಂಟ್ರಿಯ ರುಚಿಕರವಾದ ಖಾದ್ಯಗಳನ್ನು ನೀವು ಎಂದಾದರು ರುಚಿ ನೋಡಿದ್ದೀರಾ? ಏಕೆಂದರೆ ಭಾರತದ ಹಲವು ಭಾಗಗಳಲ್ಲಿ ಕೇರಳದ ಖಾದ್ಯಗಳು ಅತ್ಯಂತ ಜನಪ್ರಿಯವಾಗಿವೆ. ಇದಕ್ಕಾಗಿಯೇ ನಾವು ಸಹ ಮನೆಯಲ್ಲಿ ಅಡುಗೆ ತಯಾರಿಸುವ ದೃಷ್ಟಿಯಿಂದ ಕೇರಳದ ಖಾದ್ಯಗಳನ್ನು ಕಲಿಯಲು ಆಸಕ್ತಿ ತೋರುತ್ತೇವೆ. ಸಾಮಾನ್ಯವಾಗಿ, ನಾವೆಲ್ಲರು ಈ ಖಾದ್ಯಗಳನ್ನು ದಕ್ಷಿಣ ಭಾರತೀಯ ತಿನಿಸುಗಳ ಪಟ್ಟಿಯಲ್ಲಿ ಸೇರಿಸುತ್ತೇವೆ. ಆದರೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ತಮ್ಮದೇ ಆದ ವಿಶೇಷ ಖಾದ್ಯಗಳ ಭಂಡಾರವನ್ನು ತಮ್ಮೊಳಗೆ ಹೊಂದಿವೆ.
ಆದ್ದರಿಂದ ಈ ಪಟ್ಟಿಯಲ್ಲಿ ಕೇರಳದ ಖಾದ್ಯಗಳು ತಮ್ಮದೇ ಆದ ವಿಶೇಷತೆಯಿಂದ ಗಮನ ಸೆಳೆಯುತ್ತವೆ. ಇದಕ್ಕೆ ಅವುಗಳಿಗೆ ಇರುವ ಅನುಪಮವಾದ ರುಚಿಯೇ ಕಾರಣ. ಒಂದು ವೇಳೆ ನೀವು ಕೇರಳದ ಖಾದ್ಯಗಳ ಅಭಿಮಾನಿಯಾಗಿದ್ದರೆ, ನೀವು ಖಂಡಿತ ಇದರಲ್ಲಿ ಬಳಸಲಾಗುವ ಕೇರಳದ ಮಸಾಲೆಗಳ ರುಚಿಯನ್ನು ಆಸ್ವಾದಿಸಿರುತ್ತೀರಿ. ಬನ್ನಿ ನಿಮಗಾಗಿ ನಾವು ಕೇರಳದ ಬಾಯಿಯಲ್ಲಿ ನೀರೂರಿಸುವಂತಹ ಚಿಕನ್ ರೆಸಿಪಿಯನ್ನು ನಿಮಗಾಗಿ ಮಲಬಾರಿನ ತೀರದಿಂದ ತಂದಿದ್ದೇವೆ.

ಮಲಬಾರ್ ಚಿಕನ್ ಕರಿಯು ಕೇರಳದ ಅನುಪಮವಾದ ರೆಸಿಪಿಯಾಗಿದೆ. ಒಂದು ದಕ್ಷಿಣ ಭಾರತದ ತಿನಿಸಾಗಿ ಇದರಲ್ಲಿ ಮಸಾಲೆಗಳ ಜೊತೆಗೆ ತೆಂಗಿನ ಕಾಯಿ ಮತ್ತು ಕರಿ ಬೇವು ಸೊಪ್ಪುಗಳು ಅಧಿಕವಾಗಿರುತ್ತವೆ. ಇದರಲ್ಲಿ ಬಳಸಲಾಗುವ ಇನ್ನಿತರ ಪದಾರ್ಥಗಳು ಸಾಮಾನ್ಯವಾಗಿ ಬೇರೆ ಚಿಕನ್ ರೆಸಿಪಿಗಳಲ್ಲಿ ಬಳಸುವಂತವೇ ಆಗಿರುತ್ತವೆ. ಹಾಗಾಗಿ ನೀವು ನುರಿತ ಅಡುಗೆ ಬಲ್ಲವರಾಗಿಲ್ಲದಿದ್ದರು, ಇದನ್ನು ತಯಾರಿಸುವುದು ಸುಲಭ. ಇದರಲ್ಲಿ ಬಳಸಲಾಗುವ ಕರಿ ಬೇವು ಸೊಪ್ಪು ಇದಕ್ಕೆ ಅಮೋಘ ರುಚಿಯನ್ನು ನೀಡುತ್ತದೆ. ಹಾಗಾದರೆ ಬನ್ನಿ ತಡ ಮಾಡದೆ ಮಲಬಾರ್ ಚಿಕನ್ ಮಾಡುವುದು ಹೇಗೆಂದು ತಿಳಿದುಕೊಂಡು. ಒಮ್ಮೆ ಮಾಡಲು ಪ್ರಯತ್ನಿಸೋಣ. ಸುಲಭವಾದ ಮತ್ತು ಗರಿಗರಿಯಾದ ಕೇರಳ ಚಿಕನ್ ಫ್ರೈ ರೆಸಿಪಿ
ಇಬ್ಬರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 30 ನಿಮಿಷಗಳು
*ಅಗತ್ಯವಾದ ಪದಾರ್ಥಗಳು
*ಕೋಳಿ ಮಾಂಸ - 500 ಗ್ರಾಂಗಳು
*ಈರುಳ್ಳಿ- 4 (ಸಣ್ಣಗೆ ಕತ್ತರಿಸಿದಂತವು)
*ಕರಿಬೇವು - 5-6 ಚಿಗುರುಗಳು
*ಕೊತ್ತಂಬರಿ ಬೀಜಗಳು- 3 ಟೀ.ಚಮಚ
*ಒಣ ಮೆಣಸಿನ ಕಾಯಿ- 4-5
*ಬೆಳ್ಳುಳ್ಳಿ - 5-6 ತುಂಡು (ಕತ್ತರಿಸಿದಂತಹುದು)
*ಶುಂಠಿ- 1 ಟೇ.ಸ್ಪೂ (ಜಜ್ಜಿದಂತಹುದು)
*ತೆಂಗಿನಕಾಯಿ - 1 ಕಪ್ (ತುರಿದ)
*ಹಸಿ ಮೆಣಸಿನಕಾಯಿ- 3-4 (ಸೀಳಿದಂತಹುದು)
ಟೊಮೇಟೊ- 2 (ಕತ್ತರಿಸಿದಂತಹುದು)
*ಅರಿಶಿಣ ಪುಡಿ - 1 ಟೀ. ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 4 ಟೀ. ಚಮಚ
ತಯಾರಿಸುವ ವಿಧಾನ
1. ಕತ್ತರಿಸಿದ ಈರುಳ್ಳಿಯನ್ನು ಮೂರು ಭಾಗಗಳಾಗಿ ವಿಂಗಡಿಸಿ, ಹಾಗೂ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಪಕ್ಕದಲ್ಲಿ ಎತ್ತಿಡಿ.
2. ಒಂದು ಟೇಬಲ್ ಚಮಚದಷ್ಟು ಎಣ್ಣೆಯನ್ನು ಬಾಣಲೆಯ ಮೇಲೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ ಮತ್ತು ಅದಕ್ಕೆ ಕತ್ತರಿಸಿದ ಈರುಳ್ಳಿಯ ಒಂದು ಭಾಗವನ್ನು ಹಾಕಿ 3-4 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಹುರಿಯಿರಿ.
3. ಇದಕ್ಕೆ 3-4 ಚಿಗುರು ಕರಿಬೇವನ್ನು ಹಾಕಿ, 2-3 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.
4. ಆನಂತರ ಇದಕ್ಕೆ ಕೊತ್ತಂಬರಿ ಬೀಜಗಳನ್ನು ಮತ್ತು ಒಣ ಮೆಣಸಿನ ಕಾಯಿಯನ್ನು ಹಾಕಿ. 2 ನಿಮಿಷ ಹುರಿಯಿರಿ.
5. ಆನಂತರ ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ, ತೆಂಗಿನ ಕಾಯಿಯನ್ನು ಇದಕ್ಕೆ ಸೇರಿಸಿ. ಪಾತ್ರೆಯಲ್ಲಿರುವ ಎಲ್ಲಾ ಪದಾರ್ಥಗಳು ಬೇಯುವವರೆಗೆ 4-5 ನಿಮಿಷಗಳ ಕಾಲ ಇವುಗಳನ್ನು ಬೇಯಿಸಿ.
6. ಇವೆಲ್ಲ ಮುಗಿದ ಮೇಲೆ ಉರಿಯನ್ನು ಆರಿಸಿ, ಮಿಶ್ರಣವು ತಣ್ಣಗಾಗಲು ಬಿಡಿ.
7. ಈ ಮಿಶ್ರಣವನ್ನು ನಂತರ ಮಿಕ್ಸರಿನಲ್ಲಿ ಹಾಕಿಕೊಂಡು, ಪೇಸ್ಟ್‌ನಂತೆ ರುಬ್ಬಿಕೊಳ್ಳಿ.
8. ಇನ್ನು ಬಾಣಲೆಯ ಮೇಲೆ ಎರಡು ಟೇಬಲ್ ಚಮಚದಷ್ಟು ಎಣ್ಣೆಯನ್ನು ಕಾಯಿಸಿಕೊಳ್ಳಿ. ನಂತರ ಇದಕ್ಕೆ ಕತ್ತರಿಸಿಟ್ಟಿರುವ ಈರುಳ್ಳಿಯ ಎರಡನೆ ಭಾಗವನ್ನು ಹಾಕಿ. ನಂತರ ಇದನ್ನು ಮಧ್ಯಮ ಗಾತ್ರದ ಉರಿಯಲ್ಲಿ 3-4 ನಿಮಿಷಗಳ ಕಾಲ ಬೇಯಿಸಿ.
9. ನಂತರ ಇದಕ್ಕೆ ಹಸಿ ಮೆಣಸಿನಕಾಯಿ ಮತ್ತು ಟೊಮೇಟೊಗಳನ್ನು ಹಾಕಿ. 3-4 ನಿಮಿಷಗಳ ಕಾಲ ಬೇಯಿಸಿ.
10. ಇದಕ್ಕೆ ಉಪ್ಪು ಮತ್ತು ಅರಿಶಿಣ ಪುಡಿಯನ್ನು ಹಾಕಿ. ಟೊಮೇಟೊಗಳು ಮೆತ್ತಗೆ ಆಗುವವರೆಗು ಇದನ್ನು ಬೇಯಿಸಿ.
11. ಇದೀಗ ಇದಕ್ಕೆ ಪೇಸ್ಟ್‌ನಂತೆ ಮಾಡಿಕೊಂಡಿರುವ ಮಸಾಲೆಯನ್ನು ಬೆರೆಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಆಮೇಲೆ ಮಧ್ಯಮ ಗಾತ್ರದ ಉರಿಯಲ್ಲಿ 4-5 ನಿಮಿಷಗಳ ಕಾಲ ಬೇಯಿಸಿ.
12. ಈಗ ಇದಕ್ಕೆ ಕೋಳಿ ಮಾಂಸದ ತುಂಡುಗಳನ್ನು ಹಾಕಿ ಮತ್ತು 4-5 ನಿಮಿಷಗಳ ಕಾಲ ಹುರಿಯಿರಿ.
13. ಉರಿ ಕಡಿಮೆ ಮಾಡಿಕೊಳ್ಳಿ, ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ, ಚೆನ್ನಾಗಿ ತಿರುವಿಕೊಡಿ, 15-20 ನಿಮಿಷಗಳ ಕಾಲ ಮಸಾಲೆ ಚೆನ್ನಾಗಿ ಬೆರೆಯುವ ಹಾಗೆ ಮುಚ್ಚಳವನ್ನು ಮುಚ್ಚಿ ಬೇಯಿಸಿ.
14. ಆನಂತರ ಒಂದು ಟೇಬಲ್ ಚಮಚ ಎಣ್ಣೆಯನ್ನು ಮತ್ತೊಂದು ಬಾಣಲೆಯಲ್ಲಿ ಹಾಕಿಕೊಳ್ಳಿ ಮತ್ತು ಉಳಿದ ಈರುಳ್ಳಿಗಳನ್ನು ಹಾಗು ಕರಿ ಬೇವನ್ನು ಇದಕ್ಕೆ ಹಾಕಿ.
15. ಈರುಳ್ಳಿಗಳು ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ, ಬಂದ ಮೇಲೆ, ಉರಿಯನ್ನು ಆರಿಸಿ.
16. ಕೋಳಿ ಮಾಂಸವು ಸಂಪೂರ್ಣವಾಗಿ ಬೆಂದಿದೆಯೋ ಇಲ್ಲವೋ, ಎಂದು ತಿಳಿದುಕೊಂಡು ನಂತರ ಉರಿಯನ್ನು ಆರಿಸಿ.
17. ಕೋಳಿ ಮಾಂಶವನ್ನು ಕರಿದ ಈರುಳ್ಳಿಗಳು ಮತ್ತು ಕರಿ ಬೇವು ಎಲೆಗಳ ಜೊತೆಯಲ್ಲಿ ಬಡಿಸಿ. ಇದೀಗ ನಿಮ್ಮ ಮುಂದೆ ಮಲಬಾರ್ ಶೈಲಿಯ ಚಿಕನ್ ಕರಿ ಸಿದ್ಧವಾಗಿದೆ. ಇದನ್ನು ಘೀ ರೈಸ್ ಅಥವಾ ಪರೋಟಾದ ಜೊತೆಗೆ ಸೇವಿಸಿ.
ಪೋಷಕಾಂಶಗಳ ಪ್ರಮಾಣ
ಇತರೆ ಚಿಕನ್ ಖಾದ್ಯಗಳಿಗೆ ಹೋಲಿಸಿದರೆ ಮಲಬಾರ್ ಶೈಲಿಯ ಚಿಕನ್ ಕರಿಯಲ್ಲಿ ಕೊಬ್ಬು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದರಲ್ಲಿ ಅಂದಾಜು ಶೇ. ಮೂರರಷ್ಟು ಸ್ಯಾಚುರೇಟೇಡ್ ಕೊಬ್ಬು ಇರುತ್ತದೆ. ಈ ರೆಸಿಪಿಯಲ್ಲಿ ಅತ್ಯುತ್ತಮ ಪ್ರಮಾಣದ ಪ್ರೋಟೀನ್ ಸಹ ಇರುತ್ತದೆ.
ಸಲಹೆ
ಅಡುಗೆ ಮಾಡುವ ಮೊದಲು ಕೋಳಿ ಮಾಂಸವನ್ನು ನಿಂಬೆರಸ ಮತ್ತು ಉಪ್ಪಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದರಿಂದ ಕರಿಯ ರುಚಿಯು ಮತ್ತಷ್ಟು ಸ್ವಾದಯುತವಾಗುತ್ತದೆ.



Click it and Unblock the Notifications
















