Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಘೀ ಚಿಕನ್ ಸಾರು- ಇದು ಸ್ವಲ್ಪ ರಾಯಲ್ ರೆಸಿಪಿ
ತುಪ್ಪ ಹಾಕಿ ಮಾಡಿದ ಎಲ್ಲಾ ಅಡುಗೆಯೂ ರುಚಿಯಾಗಿರುತ್ತದೆ. ತುಪ್ಪದ ಬೆಲೆ ಕೇಳುವಾಗ ಮಾತ್ರ ಹೊಟ್ಟೆಯಲ್ಲಿ ಸಂಕಟ ಉಂಟಾಗುತ್ತದೆ. ರುಚಿಯಾದ ಅಡುಗೆಯನ್ನು ಸವಿಯಲು ಆ ಸಂಕಟವನ್ನು ಸಹಿಸಲು ರೆಡಿ ಅಂದಾದರೆ ಇಲ್ಲಿ ನಾವು ತುಪ್ಪದಲ್ಲಿ ಮಾಡುವ ಚಿಕನ್ ಸಾರನ್ನು ಮಾಡುವ ವಿಧಾನ ಬಗ್ಗೆ ಹೇಳಿದ್ದೇವೆ. ಈ ಚಿಕನ್ ಸಾರನ್ನು ಅನ್ನದ ಜೊತೆ ತಿನ್ನಲು ತುಂಬಾ ರುಚಿ.
ಈ ಅಡುಗೆಗೆ ಸ್ವಲ್ಪ ತುಪ್ಪ ಅಧಿಕಬೇಕಾಗುತ್ತದೆ. ಉಳಿದಂತೆ ಮಾಮೂಲಿ ಅಡುಗೆಯ ಸಾಮಾಗ್ರಿಗಳನ್ನು ಬಳಸಿ ಸ್ವಾದಿಷ್ಟಕರ ಚಿಕನ್ ಸಾರನ್ನು ತಯಾರಿಸಬಹುದು. ಈ ಚಿಕನ್ ಸಾರು ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
* ಬೋನ್ ಲೆಸ್ ಚಿಕನ್ ಒಂದುಕೆಜಿ
* ಮೆಣಸಿನಪುಡಿ ಅರ್ಧ ಚಮಚ (ಖಾರಕ್ಕೆ ತಕ್ಕಷ್ಟು)
* ಕರಿಮೆಣಸಿನ ಪುಡಿ ಅರ್ಧ ಚಮಚ ಹಾಗೂ ಅರ್ಧ ಚಮಚ ಕೊತ್ತಂಬರಿ ಪುಡಿ
* ಅರಶಿಣ ಪುಡಿ ಅರ್ಧ ಚಮಚ
* ಬೆಳ್ಳುಳ್ಳಿ 2 ಎಸಳು ಮತ್ತು ಸ್ವಲ್ಪ ಕರಿಬೇವಿನ ಎಲೆ
* ಸ್ವಲ್ಪ ಶುಂಠಿ
* ರುಚಿಗೆ ತಕ್ಕ ಉಪ್ಪು
* ಟೊಮೆಟೊ 1
* ಹಸಿ ಮೆಣಸಿನಕಾಯಿ 1-2
* ಜೀರಿಗೆ ಅರ್ಧ ಚಮಚ
* ಸ್ವಲ್ಪ ಚಕ್ಕೆ, ಲವಂಗ, ಏಲಕ್ಕಿ
* ಗರಂ ಮಸಾಲ ಅರ್ಧ ಚಮಚ
* ಮೆಂತೆ ಸೊಪ್ಪು 1 ಚಮಚ
* ಶುದ್ಧವಾದ ತುಪ್ಪ 200ಮಿಲೀ
ತಯಾರಿಸುವ ವಿಧಾನ:
1. ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಉಪ್ಪು, ಮತ್ತು ನಿಂಬೆ ರಸ ಹಿಂಡಿ ಅರ್ಧ ಗಂಟೆ ಕಾಲ ಇಡಿ.
2. ಈಗ 100ಗ್ರಾಂ ತುಪ್ಪವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ ಅದಕ್ಕೆ ಜೀರಿಗೆ, ಕರಿಬೇವಿನ ಎಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
3. ಈಗ ಚಿಕನ್ ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸು, ಜಜ್ಜಿದ ಈರುಳ್ಳಿ ಹಾಗೂ ಶುಂಠಿಯನ್ನು ಹಾಕಿ ಹುರಿಯಿರಿ. ನಂತರ ಗರಂ ಮಸಾಲ, ಮೆಣಸಿನ ಪುಡಿ, ಅರಿಶಿಣ, ಸ್ವಲ್ಪ ಕೊತ್ತಂಬರಿ ಪುಡಿ, ಕರಿ ಮೆಣಸಿನ ಪುಡಿ ಹಾಕಿ 2 ನಿಮಿಷ ಬಿಸಿ ಮಾಡಿ ನಂತರ ಕತ್ತರಿಸಿ ಟೊಮೆಟೊ ಹಾಕಿ ಮತ್ತೆ ಸೌಟ್ ನಿಂದ ಆಡಿಸುತ್ತಾ 2-3 ನಿಮಿಷ ಹುರಿಯಿರಿ. ರುಚಿಗೆ ತಕ್ಕ ಉಪ್ಪು ಸೇರಿಸಿ.
4. ಈಗ ಒಂದು ಕಪ್ ನೀರು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ (ಚಿಕನ್ ಸಾರು ತಳ ಹಿಡಿಯದಂತೆ ನೋಡಿಕೊಳ್ಳಿ).
5. ಚಿಕನ್ ಬೆಂದ ನಂತರ ಮೆಂತೆ ಸೊಪ್ಪನ್ನು ಹಾಕಿ 1 ನಿಮಿಷ ಬಿಟ್ಟ ಬಳಿಕ ಉರಿಯಿಂದ ಇಳಿಸಿ.
6. ಈಗ ಉಳಿದ ತುಪ್ಪವನ್ನು ಬಿಸಿ ಮಾಡಿ ಚಿಕನ್ ಸಾರಿಗೆ ಹಾಕಿದರೆ ರುಚಿ-ರುಚಿಯಾದ ತುಪ್ಪದಿಂದ ಮಾಡಿದ ಚಿಕನ್ ಕರಿ ರೆಡಿ.



Click it and Unblock the Notifications
