Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಸಾಲೆಯಲ್ಲಿ ಅಡಗಿದೆ ಎಗ್ ಖೀಮಾದ ರುಚಿ

ರಂಜಾನ್ ತಿಂಗಳಿನಲ್ಲಿ ನಾನ್ ವೆಜ್ ಹೆಚ್ಚಾಗಿ ತಯಾರಿಸಲಾಗುವುದು. ರಂಜಾನ್ ಸ್ಪೆಷಲ್ ಆಗಿ ಕೂಡ ಇದನ್ನು ತಯಾರಿಸಬಹುದು.
ತಯಾರಿಸುವ ವಿಧಾನ:
* ಬೇಯಿಸಿದ ಮೊಟ್ಟೆ 4
* ಪಲಾವ್ ಎಲೆ 1
* ಕರಿಮೆಣಸಿನ ಪುಡಿ 5-7
* ಈರುಳ್ಳಿ 3 (ಕತ್ತರಿಸಿದ್ದು)
* ಬೆಳ್ಳುಳ್ಳಿ ಎಸಳು 4
* ಏಲಕ್ಕಿ 1
* ಚಕ್ಕೆ-ಒಂದು ಚಿಕ್ಕ ತುಂಡು
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ(ಇದನ್ನು ಚಿಕ್ಕದಾಗಿ ಕತ್ತರಿಸಿರಬೇಕು)
* ಹಸಿಮೆಣಸಿನ ಕಾಯಿ ನಾಲ್ಕು(ಕತ್ತರಿಸಿದ್ದು)
* ಟೊಮೆಟೊ 2 (ಕತ್ತರಿಸಿದ್ದು)
* ಬಟಾಣಿ 1 ಕಪ್ (ನಿಮ್ಮ ಆಯ್ಕೆಗೆ ಬಿಟ್ಟದ್ದು)
* ಮಟನ್ ಖೀಮಾ ಮುಕ್ಕಾಲು ಕೆಜಿ
* ಕೆಂಪು ಮೆಣಸಿನ ಪುಡಿ 1 ಚಮಚ
* ಜೀರಿಗೆ ಪುಡಿ 1 ಚಮಚ
* ತುಪ್ಪ 1 ಚಮಚ
* ಗರಂ ಮಸಾಲ 2 ಚಮಚ
* 3 ಚಮಚ ಎಣ್ಣೆ
* ರುಚಿಗೆ ತಕ್ಕ ಉಪ್ಪು
* ಸ್ವಲ್ಪಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
1. ಬೇಯಿಸಿದ ಮೊಟ್ಟೆಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ.
2. ನಂತರ ಒಂದು ಚಮಚ ಎಣ್ಣೆ ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ನಂತರ ಅದರಲ್ಲಿ ಚಿಕ್ಕ ತುಂಡುಗಳಾಗಿ ಕತ್ತರಿಸಿದ ಮೊಟ್ಟೆ ಹಾಕಿ ಚೆನ್ನಾಗಿ ಹುರಿದು ಅದನ್ನು ಒಂದು ಪಾತ್ರೆಯಲ್ಲಿ ಹಾಕಿಡಬೇಕು.
4. ನಂತರ ಮತ್ತೊಂದು ಸ್ವಲ್ಪ ದೊಡ್ಡ ಪಾತ್ರೆ ತೆಗೆದು ಅದನ್ನು ಉರಿಯಲ್ಲಿ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿಮಾಡಬೇಕು. ಎಣ್ಣೆ ಬಿಸಿಯಾದಾಗ ಪಲಾವ್ ಎಲೆ, ಬೆಳ್ಳುಳ್ಳಿ ಎಸಳು , ಚಕ್ಕೆ ಹಾಕಿ ಸೌಟ್ ನಿಂದ ಆಡಿಸುತ್ತಾ 1 ನಿಮಿಷ ಹುರಿಯಬೇಕು. ನಂತರ ಕತ್ತರಿಸಿ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ 2 ನಿಮಿಷ ಕಾಲ ಹುರಿಯಿರಿ.
5. ನಂತರ ಕತ್ತರಿಸಿ ಹಸಿಮೆಣಸಿನಕಾಯಿ ಮತ್ತು ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿದು, ನಂತರ ಖೀಮಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 5-6 ನಿಮಿಷ ಬೇಯಿಸಬೇಕು.
6. ಈಗ ಬಟಾಣಿ (ಬೇಕಿದ್ದರೆ), ಕೆಂಪು ಮೆಣಸಿನ ಪುಡಿ, ಜೀರಿಗೆ, ಗರಂ ಮಸಾಲ, ರುಚಿಗೆ ತಕ್ಕ ಉಪ್ಪು ಹಾಕಿ, ಅರ್ಧ ಕಪ್ ನೀರು ಹಾಕಿ ಖೀಮಾ ಡ್ರೈವಾಗುವವರೆಗೆ ಬೇಯಿಸಬೇಕು.
7. ಖೀಮಾ ತಯಾರಾದ ಮೇಲೆ ಅದಕ್ಕೆ ಹುರಿದ ಮೊಟ್ಟೆಯನ್ನು ಹಾಕಿ ಮಿಶ್ರಣ ಮಾಡಿ ಮಿಶ್ರಣದ ಮೇಲ್ಭಾಗದಲ್ಲಿ ಒಂದು ಚಮಚ ತಪ್ಪವನ್ನು ಸುರಿದು, ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಎಗ್ ಖೀಮಾ ರೆಡಿ.



Click it and Unblock the Notifications
